ಕನ್ನಡನಾಡಿ ನ್ಯೂಸ್ ಬ್ಯೂರೋ: ಭೂಮಿಯ ಮೇಲೆ ಸುರಕ್ಷಿತ ಸ್ಥಳ ಸ್ವಿಡ್ಜರ್ ಲ್ಯಾಂಡ್ ನ ಒಂದು ಜಿಲ್ಲೆ, ಎರಡನೆಯ ಸ್ಥಾನ ಕರ್ನಾಟಕದ ಗ್ರೀನ್ ಸಿಟಿ, ನಮ್ಮೂರು ಚಿಕ್ಕಮಗಳೂರಿಗೆ ಎಂದರೆ ನೀವು ಅಚ್ಚರಿ ಪಡಬೇಕಿಲ್ಲ.
ಒಂದು ಶತಮಾನದಲ್ಲಿ ಯಾವುದೇ ವಿಕೋಪಗಳು ಆಗೋದಿಲ್ಲ ಎಂಬ ಹೆಗ್ಗಳಿಕೆ ಇದೆ. ಹೀಗಾಗಿ ಈ ಸುರಕ್ಷತಾ ಸ್ಥಾನ ಎಂಬ ಮಹತ್ತರ ಸ್ಥಾನ ಸಿಕ್ಕಿದೆ. ಮೊದಲ ಸ್ಥಾನ ಸ್ಥಾನ ಪಡೆದ ಸ್ವಿಡ್ಜರ್ಲೆಂಡ್ ಎಲ್ಲರಿಗೂ ಗೊತ್ತಿರುವಂತೆ ಬಹಳ ಹಸಿರಿನ ಪ್ರದೇಶ. ಹಾಗೆಯೇ ನಮ್ಮ ಚಿಕ್ಕಮಗಳೂರು ಸಹ ಎರಡನೆಯ ಸುರಕ್ಷಿತ ವಾಸದ ಸ್ಥಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋದು ಹೆಮ್ಮೆಯ ವಿಷಯನೇ ಸರಿ
ಎನ್ ಜಿ ಒ ಗಳು ವಿವಿಧ ಕಡೆಗಳಲ್ಲಿ ೨೦೦೧-೦೨ರಲ್ಲಿ ಮಾಡಿದ ಸರ್ವೆಯಲ್ಲಿ ಜಗತ್ತಿನ ಸುರಕ್ಷಿತ ಸ್ಥಳಗಳ ಬಗ್ಗೆ ಸಾರ್ವಜನಿಕರ ಮಾಹಿತಿ ಪಡೆದಿದ್ದವು. ಚಿಕ್ಕಮಗಳೂರಿನ ಹಸಿರು ಪರಿಸರ ರಕ್ಷಣೆಯ ಹೊಣೆ ಸಾರ್ವಜನಿಕರ ಕೈಯಲ್ಲೇ ಇದ್ದು, ಪ್ರವಾಸಿಗರು ಸಹ ಇದಕ್ಕೆ ಸಹಕರಿಸುವಂತೆ ನೋಡಿಕೊಳ್ಳಬೇಕಾದುದು ಎಲ್ಲರ ಹೊಣೆ.
Discussion about this post