ಛತ್ತೀಸ್ʼಗಡ ಸುಕ್ಮಾ ಜಿಲ್ಲೆಯಲ್ಲಿದ್ದ 44 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸುಕ್ಮಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಶರ್ಮಾ, ಜಿಲ್ಲೆಯ ಚಿಂತಾಲ್ ನರ್, ಕಿಸ್ಟಾ ರಾಮ್ ಮತ್ತು ಬೇಜಿ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದ 9 ಮಹಿಳೆಯರೂ ಸೇರಿದ್ದ 44 ಮಂದಿಯ ನಕ್ಸಲ್ ತಂಡ ಶರಣಾಗಿದೆ.
ಸದ್ಯ ಶರಣಾಗಿರುವ ಎಲ್ಲಾ ನಕ್ಸಲರಿಗೂ ಜಿಲ್ಲೆಯ ಕರಿಗುಂಡಮ್ ಹಳ್ಳಿಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಪೊಲೀಸ್ ಕ್ಯಾಂಪ್ ನಲ್ಲಿ ಮೂಲ ಸೌಕರ್ಯದ ವ್ಯವಸ್ಥೆ ಮಾಡಿಕೊಡಲಾಗಿದೆ. ಇನ್ನು ಶರಣಾಗಿರುವ ಎಲ್ಲಾ ನಕ್ಸಲರಿಗೆ ಸರ್ಕಾರದ ಯೋಜನೆಯಲ್ಲಿ ವಸತಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.
44 Naxals surrender to police

























Discussion about this post