ತರಕಾರಿ ಅವಲಕ್ಕಿ ರೆಸಿಪಿ: ರುಚಿಯೂ ಹೌದು, ಆರೋಗ್ಯಕರವೂ ಹೌದು
ಬೇಕಾಗುವ ಸಾಮಗ್ರಿ: 2 ಕಪ್ ಅವಲಕ್ಕಿ, 2 ಈರುಳ್ಳಿ, 2 ಕ್ಯಾರೆಟ್, ಸ್ವಲ್ಪ ಬೀನ್ಸ್, ಹಸಿಮೆಣಸು, 1 ಅಥವಾ 2 ಬೇಯಿಸಿದ ಆಲೂಗಡ್ಡೆ, ಎಣ್ಣೆ, ಜೀರಿಗೆ, ಸಾಸಿವೆ, ಉದ್ದಿನ ಬೇಲೆ, ಕಡಲೆಬೇಳೆ, ಶೇಂಗಾ, ಕರಿಬೇವು, ಕ“ತ್ತ“ಂಬರಿ ಸ“ಪ್ಪು, ಉಪ್ಪು, ಸಕ್ಕರೆ.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ,್ ಅದಕ್ಕೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಹಸಿಮೆಣಸು, ಶೇಂಗಾ, ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಹುರಿಯಿರಿ.
ನಂತರ ತರಕಾರಿಗಳನ್ನೆಲ್ಲ ಹಾಕಿ ಹುರಿದು, ಆಲೂಗಡ್ಡೆಯನ್ನೂ ಸೇರಿಸಿ. ಬಳಿಕ ಉಪ್ಪು ಅರಿಶಿನ, ಸಕ್ಕರೆ ಸೇರಿಸಿ. ಈಗ ಅವಲಕ್ಕಿ ಮಿಕ್ಸ್ ಮಾಡಿ, ನಿಂಬೆರಸ, ಕ“ತ್ತ“ಂಬರಿ ಸ“ಪ್ಪು ಹಾಕಿದ್ರೆ ತರಕಾರಿ ಅವಲಕ್ಕಿ ರೆಡಿ. ಇದು ಮಾಡೋದಕ್ಕೂ ಈಸಿ, ತಿನ್ನಲು ರುಚಿ. ಹಾಗೂ ಆರೋಗ್ಯಕರವೂ ಹೌದು.
ೃೃೃೃೃೃೃೃೃೃ
ಪನೀರ್ ಕಾಜು ಮಸಾಲಾ ರೆಸಿಪಿ
ಬೇಕಾಗುವ ಸಾಮಗ್ರಿ: 1 ಕಪ್ ಪನೀರ್, 50 ಗೋಡಂಬಿ, 4 ಸ್ಪೂನ್ ತುಪ್ಪ, 2 ಈರುಳ್ಳಿ, 1 ಟೋಮೆಟೋ, 4 ಸ್ಪೂನ್ ಎಣ್ಣೆ, 10 ಬೆಳ್ಳುಳ್ಳಿ ಎಸಳು- ಶುಂಠಿ- ಹಸಿಮೆಣಸು, 2 ಪಲಾವ್ ಎಲೆ, 1 ಸ್ಪೂನ್ ಜೀರಿಗೆ, ಏಲಕ್ಕಿ, ಲವಂಗ, ಕಾಳು ಮೆಣಸು, ಚಕ್ಕೆ, ಖಾರದ ಪುಡಿ, ಅರಿಶಿನ, ಉಪ್ಪು, ಗರಂ ಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ, ಕಸೂರಿ ಮೇಥಿ, ಉಪ್ಪು.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ ತುಪ್ಪ ಅಥವಾ ಬೆಣ್ಣೆ ಹಾಕಿ ಪನೀರನ್ನು ಮಂದ ಉರಿಯಲ್ಲಿ ಹುರಿಯಿರಿ. ಬಳಿಕ ಅದೇ ಪ್ಯಾನ್‌ನಲ್ಲಿ 30 ಗೋಡಂಬಿಯನ್ನೂ ಹುರಿಯಿರಿ.
ಈಗ 20 ಗೋಡಂಬಿಯನ್ನು ಬಿಸಿ ನೀರಿನಲ್ಲಿ 15 ನಿಮಿಷ ನೆನೆಸಿ. ನೆನೆಸಿದ ಕಾಜು, ಟೋಮೆಟೋ, ಹಾಕಿ ಪೇಸ್ಟ್ ತಯಾರಿಸಿ. ನಂತರ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಪಲಾವ್ ಎಲೆ, ಜೀರಿಗೆ, ಏಲಕ್ಕಿ, ಲವಂಗ, ಕಾಳು ಮೆಣಸು, ಚಕ್ಕೆ ಹಾಕಿ ಹುರಿಯಿರಿ. ನಂತರ ಈರುಳ್ಳಿ ಹಾಕಿ ಹುರಿಯಿರಿ.
ಬಳಿಕ ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ ಪೇಸ್ಟ್, ಖಾರದ ಪುಡಿ, ಅರಿಶಿನ, ಉಪ್ಪು, ಗರಂ ಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ, ಇವೆಲ್ಲ ಹಾಕಿ ಮಿಕ್ಸ್ ಮಾಡಿ. ನಂತರ ಕರ್ಡ್, ಆಗಲೇ ರೆಡಿ ಮಾಡಿದ್ದ ಗೋಡಂಬಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ.
ಅದರ ಮೇಲೆ ಎಷ್ಟು ಬೇಕೋ, ಅಷ್ಟು ನೀರು ಹಾಕಿ ಬೇಯಿಸಿ. ಈಗ ಹುರಿದಿದ್ದ ಪನೀರ್ ಮತ್ತು ಕಾಜು ಹಾಕಿ, ಕಸೂರಿ ಮೇಥಿ, ಕ“ತ್ತ“ಂಬರಿ ಸ“ಪ್ಪು ಹಾಕಿ ಮಿಕ್ಸ್ ಮಾಡಿ, 10 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿದ್ರೆ, ಕಾಜು ಪನೀರ್ ಮಸಾಲಾ ರೆಡಿ. ರೋಟಿ ಜತೆ ಉತ್ತಮ ಕಾಂಬಿನೇಷನ್.
ೃೃೃೃೃೃೃೃೃೃೃೃ
ಇನ್‌ಸ್ಟಂಟ್ ಚಕ್ಕುಲಿ ರೆಸಿಪಿ
ಬೇಕಾಗುವ ಸಾಮಗ್ರಿ: 1ಬೌಲ್ ಮೈದಾ, ಅರ್ಧ ಕಪ್ ಹೆಸರುಬೇಳೆ, 1 ಸ್ಪೂನ್ ಜೀರಿಗೆ, ವೋಮ, ಎಳ್ಳು, ಖಾರದ ಪುಡಿ, ಅರಿಶಿನ, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ನೀವು ದಿಢೀರ್ ಅಂತಾ ಚಕ್ಕುಲಿ ಮಾಡಬೇಕು ಅಂದ್ರೆ ಮೈದಾವನ್ನು ಸೆಕೆ ಬರಿಸಬೇಕು. ಅಂದ್ರೆ ಇಡ್ಲಿ ಪಾತ್ರೆ ಅಥವಾ, ಯಾವುದೇ ಪಾತ್ರೆಯಲ್ಲಿ ನೀರು ಕುದಿ ಬರಿಸಿ, ಅದರ ಮೇಲೆ 1 ಸ್ಟ್ಯಾಂಡ್ ಇರಿಸಿ, ಅದರ ಮೇಲೆ ಪಾತ್ರೆ ಇಡಬೇಕು.
1 ಕಾಟನ್ ವಸ್ತ್ರದಲ್ಲಿ ಮೈದಾ ಹಾಕಿ ಗಂಟು ಕಟ್ಟಿ, ಆ ಪಾತ್ರೆಯಲ್ಲಿ ಇರಿಸಿ, ಮುಚ್ಚಳ ಮುಚ್ಚಿ, 15ರಿಂದ 20 ನಿಮಿಷ ಹಬೆ ಬರಿಸಬೇಕು. ಬಳಿಕ ಮುಚ್ಚಳ ತೆಗೆದು, ಹಬೆ ಬರಿಸಿದ ಮೈದಾವನ್ನು ತೆಗೆದು ಪುಡಿ ಮಾಡಬೇಕು.
ಬಳಿಕ 1 ಬೌಲ್‌ನಲ್ಲಿ ಆ ಹುಡಿಯನ್ನು ಗಾಳಿಸಬೇಕು. ಬಳಿಕ ಹೆಸರು ಬೇಳೆಯನ್ನು ಚೆನ್ನಾಗಿ ವಾಶ್ ಮಾಡಿ, ಕುಕ್ಕರ್‌ಗೆ ಹಾಕಿ ಬೇಯಿಸಬೇಕು. ಹೋಳಿಗೆಗೆ ಬಳಸುವ ಕಣಕದ ಹಿಟ್ಟಿನಂತೆ ಬೇಳೆಯನ್ನು ಮ್ಯಾಶ್ ಮಾಡಬೇಕು.
ಈಗ ಇದನ್ನು ಆಗಲೇ ಸೆಕೆ ಬರಿಸಿದ ಮೈದಾಗೆ ಸೇರಿಸಿಕ“ಳ್ಳಿ. ಇದಕ್ಕೆ ಉಪ್ಪು, ಖಾರದ ಪುಡಿ, ವೋಮ, ಎಳ್ಳು, ಜೀರಿಗೆ, ಬೇಕಾಗಿದ್ದಲ್ಲಿ ಹಸಿಮೆಣಸಿನ ಪೇಸ್ಟ್, ನೀರು ಸೇರಿಸಿ. ಚೆನ್ನಾಗಿ ಹಿಟ್ಟು ಕಲಿಸಿ. ನೀರು ಬಳಸುವಾಗ ಹೆಚ್ಚೂ ಆಗಬಾರದು, ಕಡಿಮೆಯೂ ಆಗಬಾರದು. ನೀರಿನ ಪ್ರಮಾಣ ಸರಿಯಾಗಿರಬೇಕು. ಬಳಿಕ ಈ ಹಿಟ್ಟಿಗೆ ಕಾಟನ್ ಬಟ್ಟೆ ಮುಚ್ಚಿ 1ರಿಂದ 2 ಗಂಟೆ ಇರಿಸಿ. ಬಳಿಕ ಚಕ್ಕುಲಿ ಮಾಡಿ, ಕಾದ ಎಣ್ಣೆಯಲ್ಲಿ ಮಂದಉರಿಯಲ್ಲಿ ಕರಿದರೆ, ಚಕ್ಕುಲಿ ರೆಡಿ.
ೃೃೃೃೃೃೃೃೃೃೃ
ಇನ್‌ಸ್ಟಂಟ್ ರವಾ ದೋಸೆ ರೆಸಿಪಿ
ಬೇಕಾಗುವ ಸಾಮಗ್ರಿ: ಕಾಲು ಕಪ್ ಸಾಬಕ್ಕಿ, ಅರ್ಧ ಕಪ್ ರವಾ, 1 ಬೇಯಿಸಿ, ಸಿಪ್ಪೆ ತೆಗೆದ ಆಲೂಗಡ್ಡೆ, 3 ಹಸಿಮೆಣಸು, ಅರ್ಧ ಸ್ಪೂನ್ ಜೀರಿಗೆ, ಕೊತ್ತಂಬರಿ ಸೊಪ್ಪು, ಚಿಕ್ಕ ತುಂಡು ಶುಂಠಿ, 2 ಸ್ಪೂನ್ ಮೊಸರು, ಉಪ್ಪು, ಎಣ್ಣೆ.
ಮಾಡುವ ವಿಧಾನ: ಸಾಬಕ್ಕಿಯನ್ನು ಚೆನ್ನಾಗಿ ಹುರಿಯಬೇಕು. ಮಂದ ಉರಿಯಲ್ಲಿ ಹುರಿದರೆ ಉತ್ತಮ. ಬಳಿಕ ಹುರಿದ ಸಾಬಕ್ಕಿ, ರವಾ, ಆಲೂಗಡ್ಡೆ, ಹಸಿಮೆಣಸು, ಚಿಕ್ಕ ತುಂಡು ಶುಂಠಿ, ಮೊಸರು, ಉಪ್ಪು ಸೇರಿಸಿ, ರುಬ್ಬಿ ದೋಸೆ ಹಿಟ್ಟು ರೆಡಿ ಮಾಡಿ. 15 ನಿಮಿಷ ಹಾಗೆ ಇರಿಸಿ.
ದೋಸೆ ಮಾಡುವ ವೇಳೆ ಜೀರಿಗೆ, ಕೊತ್ತಂಬರಿ ಸೊಪ್ಪು ಸೇರಿಸಿ, ದೋಸೆ ಮಾಡಿ. ಇದರ ಜತೆಗೆ ಚಟ್ನಿ, ಆಲೂಗಡ್ಡೆ ಪಲ್ಯ ಉತ್ತಮ ಕಾಂಬಿನೇಷನ್.
ೃೃೃೃೃೃೃೃೃೃ
ಬ್ಲಾಕ್ ಜಾಮೂನ್ ರೆಸಿಪಿ
ಬೇಕಾಗುವ ಸಾಮಗ್ರಿ: 2 ಕಪ್ ಸಕ್ಕರೆ, 250 ಗ್ರಾಮ್ ಖೋವಾ, 65 ಗ್ರಾಮ್ ಪನೀರ್, 1 ಸ್ಪೂನ್ ಸಕ್ಕರೆ ಪುಡಿ, 3 ಸ್ಪೂನ್ ಮೈದಾ, ಕಾಲು ಸ್ಪೂನ್ ಬೇಕಿಂಗ್ ಪುಡಿ, ಕರಿಯಲು ಎಣ್ಣೆ.
ಮಾಡುವ ವಿಧಾನ: 2 ಕಪ್ ಸಕ್ಕರೆಗೆ, 1 ಕಪ್ ನೀರು ಹಾಕಿ, ಸಕ್ಕರೆ ಪಾಕ ತಯಾರಿಸಿ. ಇದಕ್ಕೆ ಫ್ಲೇವರ್ ಬರಲು, ಏಲಕ್ಕಿ ಅಥವಾ ರೋಸ್ ವಾಟರ್, ಕೇಸರಿದಳ ಸೇರಿಸಿ.
ಈಗ 1 ಹರಿವಾಣದಲ್ಲಿ ಖೋವಾ, ಪನೀರ್ ತುರಿ ಹಾಕಿ ಸಪರೇಟ್ ಆಗಿ ನಾದಬೇಕು. ಬಳಿಕ ಸಕ್ಕರೆ ಪುಡಿ, ಮೈದಾ, ಬೇಕಿಂಗ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಿಧಾನವಾಗಿ ನಾದಬೇಕು. ಇದಕ್ಕೆ ಕಾಟನ್ ಕ್ಲಾನ್ ಮುಚ್ಚಿಯಬೇಕು. 10 ನಿಮಿಷದ ಬಳಿಕ ಉಂಡೆ ತಯಾರಿಸಿ, ಕಾದ ಎಣ್ಣೆಯಲ್ಲಿ ಕರಿಯಬೇಕು.ಬಳಿಕ ರೆಡಿ ಮಾಡಿದ ಸಕ್ಕರೆ ಪಾಕಕ್ಕೆ ಹಾಕಿ, 6 ಗಂಟೆ ಇರಿಸಿದರೆ, ಜಾಮೂನ್ ರೆಡಿ.
ಸಾಮಗ್ರಿಗಳನ್ನು ಹಾಕುವಾಗ ಸರಿಯಾಗಿ ಅಳತೆ ಮಾಡಿ. ಮತ್ತು ಉಂಡೆ ಮಾಡುವಾಗ, ಎಲ್ಲಿಯೂ ಕ್ರ್ಯಾಕ್ ಆಗದಂತೆ ಉಂಡೆ ಮಾಡಿ.
ೃೃೃೃೃೃೃೃೃೃ
ಆಲೂಗಡ್ಡೆ ಫ್ರ್ಯಾಂಕೀಸ್ ರೆಸಿಪಿ: ಮಕ್ಕಳ ಡಬ್ಬಕ್ಕೆ ಉತ್ತಮ ಆಯ್ಕೆ
ಬೇಕಾಗುವ ಸಾಮಗ್ರಿ: 2 ಚಪಾತಿ, ಆಲೂಗಡ್ಡೆ ಪಲ್ಯ, ಅವಶ್ಯಕತೆ ಇದ್ದಲ್ಲಿ ಸಾಸ್, ಮೆಯೋನಿಸ್, ಈರುಳ್ಳಿ, ಕ್ಯಾಪ್ಸಿಕಂ.
ಮಾಡುವ ವಿಧಾನ: ಗೋದಿ ಹುಡಿ ಬಳಸಿ 2 ಚಪಾತಿ ಬಳಸಿ. ಬಳಿಕ ಆಲೂಗಡ್ಡೆ ಪಲ್ಯ ಮಾಡಲು, ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಜೀರಿಗೆ, ಉದ್ದಿನಬೇಳೆ, ಹಸಿಮೆಣಸು, ಕರಿಬೇವಿನ ಎಲೆ, ಬೆಳ್ಳುಳ್ಳಿ, ಈರುಳ್ಳಿ, ಹಾಕಿ ಹುರಿಯಿರಿ.
ನಂತರ ಬೇಯಿಸಿದ ಬಟಾಣಿ, ಆಲೂಗಡ್ಡೆ, ಗರಂ ಮಸಾಲೆ, ಚಾಟ್ ಮಸಾಲೆ, ಧನಿಯಾ ಪುಡಿ, ಉಪ್ಪು ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ. ಬಳಿಕ ಧನಿಯಾ ಉದುರಿಸಿ.
ಈಗ ಚಪಾತಿ ಮೇಲೆ ಮೆಯೋನೀಸ್, ಸಾಸ್ ಹಾಕಿ ಸವರಿ, ಈ ಪಲ್ಯ ಹಾಕಿ, ಅದರ ಮೇಲೆ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಮಡಿಚಿದರೆ, ಆಲೂಗಡ್ಡೆ ಫ್ರ್ಯಾಂಕೀಸ್ ರೆಡಿ.
ೃೃೃೃೃೃೃೃೃೃೃೃೃೃೃೃೃೃೃೃೃೃ
ಕಡಲೆ ಬರ್ಫಿ
ಬೇಕಾಗುವ ಸಾಮಗ್ರಿ: 2 ಕಪ್ ಕಡಲೆಹುಡಿ, ಅದರ ಅರ್ಧ ಕಪ್ ತುಪ್ಪ, 175 ಗ್ರಾಮ್ ಸಕ್ಕರೆ ಪುಡಿ, ಸ್ವಲ್ಪ ಏಲಕ್ಕಿ, ದ್ರಾಕ್ಷಿ, ಗೋಡಂಬಿ.
ಮಾಡುವ ವಿಧಾನ: 1 ಪ್ಯಾನ್ ಬಿಸಿ ಮಾಡಿ ಅದಕ್ಕೆ ಕಡಲೆಹುಡಿ ಹಾಕಿ ಘಮ ಬರುವವರೆಗೂ ಹುರಿಯಿರಿ. ಬಳಿಕ ತುಪ್ಪ ಹಾಕಿ, ಅದು ಹಲ್ವಾ ರೀತಿ ಆಗುವವರೆಗೂ ಮಗುಚಿರಿ. ಬಳಿಕ ಸಕ್ಕರೆ ಪುಡಿ ಹಾಕಿ ತಿರುವಿ. ನಂತರ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ ಹಾಕಿ ಮಿಕ್ಸ್ ಮಾಡಿ. ಮಿಶ್ರಣ ಪೂರ್ತಿಯಾಗಿ ತಣಿಯದೇ, ಹೆಚ್ಚು ಬಿಸಿಯೂ ಇರದೇ ಇರುವಾಗ ಲಾಡು ತಯಾರಿಸಬೇಕು.
ಇದನ್ನು ಹಬ್ಬದ ಸಮಯದಲ್ಲಿ ಮಾಡಿ ಸವಿಯಬಹುದು. ಅಥವಾ ಮಕ್ಕಳಿಗೆ ಶಾಲೆಗೆ ಸ್ನ್ಯಾಕ್ಸ್ ಆಗಿ ನೀಡಬಹುದು. ಇದು ಆರೋಗ್ಯಕರವೂ ಹೌದು, ರುಚಿಕರವೂ ಹೌದು. ಆದರೆ ದಿನಕ್ಕೆ 1 ಲಾಡು ತಿಂದರೆ ಉತ್ತಮ. 2ಕ್ಕಿಂತ ಹೆಚ್ಚು ತಿಂದರೆ, ಉದರ ಸಮಸ್ಯೆ ಉದ್ಭವಿಸುತ್ತದೆ.
Discussion about this post