Health Tips: ಏಕಾಂಗಿತನವನ್ನು ಹೋಗಲಾಡಿಸುವುದು ಹೇಗೆ..?
ಇಂದಿನ ಕಾಲದಲ್ಲಿ ನಾವು ಏನು ನೋಡುತ್ತೇವೋ, ಅದೆಲ್ಲವೂ ಸತ್ಯವಲ್ಲ. ಏಕೆಂದರೆ, ನಾವು ಸಾಮಾಜಿಕ ಜಾಲತಾಣದಲ್ಲಿ ಕಲರ್ ಕಲರ್ ಫೋಟೋ ಹಾಕಿ, ನಾನು ಆರಾಮವಾಗಿದ್ದೇನೆ ಅಂತಾ ತೋರಿಸಿಕ“ಳ್ಳುವವರು ಡಿಪ್ರೆಶನ್‌ಗೆ ಬಲಿಯಾಗಿರ್ತಾರೆ. ತನ್ನ ಸೆಲ್ ಫೋನ್‌ನಲ್ಲಿ ರಾಶಿ ರಾಶಿ ನಂಬರ್ ಇದ್ದರೂ, ಸಂಬಂಧಿಕರು, ಸ್ನೇಹಿತರು ಇದ್ದರೂ, ಯಾರ ಸುದ್ದಿಯೂ ಬೇಡ ಅನ್ನುವಂತೆ ಇರುತ್ತಾರೆ. ಇದೆಲ್ಲದಕ್ಕೂ ಕಾರಣ ಏಕಾಂಗಿತನ. ಹಾಗಾದ್ರೆ ನಿಮ್ಮ ಏಕಾಂಗಿತನ ಹೋಗಲಾಡಿಸಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಏಕಾಂಗಿತನ ಅದೆಷ್ಟು ಹಾನಿಕಾರಕ ಅಂದ್ರೆ, 1 ದನಿಕ್ಕೆ 15 ಸಿಗರೇಟ್ ಸೇದಿದಷ್ಟು ಅಂತೆ. ಹಾಗಾಗಿ ಏಕಾಂಗಿಯಾಗಿರಲು ಬಯಸಿದರೂ, ಬೇಸರದಲ್ಲಿರಬಾರದು. ಇಂಗ್ಲೀಷ್‌ನಲ್ಲಿ ಬಿ ಹ್ಯಾಪಿ, ಬಿ ಅಲೋನ್ ಅನ್ನೋ ಮಾತಿದೆ. ಅಂದ್ರೆ ಒಬ್ಬಂಟಿಯಾಗಿರಿ, ಖಷಿಯಾಗಿರಿ ಎಂದರ್ಥ. ಆದರೆ ಒಬ್ಬಂಟಿ ಬೇರೆ ಏಕಾಂಗಿ ಬೇರೆ.
ಒಬ್ಬಂಟಿ ಅಂದ್ರೆ ಯಾರ ಸುದ್ದಿಗೂ ಹೋಗದೇ, ತನಗೆ ಬೇಕಾಗ ಹಾಗೆ ಜಾಲಿಯಾಗಿ ಜೀವನ ಮಾಡೋದು. ಏಕಾಂಗಿ ಅಂದ್ರೆ, ಒಬ್ಬಂಟಿ ಇದ್ದರೂ, ಏನೋ ಕಳೆದುಕ“ಂಡ ಭಾವದಲ್ಲಿರುವುದು. ಬೇಸರವಾಗಿರುವುದು. ಇದು ಜೀವಕ್ಕೆ ಹಾನಿಕಾರಕವಾಗಿದೆ.
ನೀವು ಏಕಾಂಗಿತನದಿಂದ ಜಾಲಿಯಾಗಿರಬೇಕು ಅಂದ್ರೆ, ನೀವು ಯಾರಿಲ್ಲದಿದ್ದರೂ ನಾನು ಖುಷಿಯಾಗಿರಬಲ್ಲೆ ಅಂತಾ ಬದೋಕೋದನ್ನು ಕಲಿಯಬೇಕು. ಅದನ್ನು ಮನದಟ್ಟು ಮಾಡಿಕ“ಳ್ಳಬೇಕು. ನಿಮಗೆ ನೀವೇ ಉತ್ತಮ ಸ್ನೇಹಿತರಾಗಿ.
ಎರಡನೇಯದಾಗಿ ಮಾತನಾಡುವುದನ್ನು ಕಲಿಯಿರಿ. ಹಾಗಂತ ಸಿಕ್ಕ ಸಿಕ್ಕವರನ್ನೆಲ್ಲ ಸ್ನೇಹಿತರನ್ನಾಗಿ ಮಾಡಿಕ“ಳ್ಳಿ ಅಂತಲ್ಲ. ಬದಲಾಗಿ, ನಿಮ್ಮ ಸಹೋದ್ಯೋಗಿಗಳ ಜತೆ, ನೆರೆ ಮನೆಯವರ ಜತೆ ಮನಬಿಚ್ಚಿ ಮಾತನಾಡಿರಿ. ಹೀಗೆ ಪ್ರತಿದಿನ ನಗುವುದನ್ನು, ಮಾತನಾಡುವುದನ್ನು ಕಲಿತಾಗ, ನಿಮ್ಮ ಜೀವನವೇ ಸುಗಮ ಅನ್ನಿಸಲು ಶುರುವಾಗುತ್ತದೆ.
ಇನ್ನು ಅವರೇ ಮಾತನಾಡಲಿ ಎಂದು ಕಾಯುವ ಬದಲು, ನೀವೇ 1 ಹಾಯ್ ಎಂದುಬಿಡಿ. ಹಾಗೆ ಪರಿಚಯ ಶುರುವಾಗುತ್ತದೆ. ಏಕಾಂಗಿತನ ದೂರವಾಗುತ್ತದೆ. ದಾನ ಮಾಡಲು ಕಲಿಯಿರಿ, ಪ್ರಾಣಿಗಳಿಗೆ ಆಹಾರ ನೀಡಿ. ಇವೆಲ್ಲವೂ ಮನಸ್ಸಿಗೆ ಮುದ ನೀಡುವ ಕೆಲಸಗಳು. ಜತೆಗೆ ಧ್ಯಾನ ಮಾಡಿದರೆ ಇನ್ನೂ ಉತ್ತಮ.
ಸೆಲ್ ಫೋನ್, ಲ್ಯಾಪ್‌ಟಾಪ್, ಟಿವಿ ನೋಡುವುದನ್ನು ಕಡಿಮೆ ಮಾಡಿ. ಇದೇ ಸಮಯವನ್ನು ಕಥೆ ಓದಲು, ಹಾಡು ಕೇಳಲು, ವಾಕಿಂಗ್, ಯೋಗ ಮಾಡಲು, ಹರಟಲು, ಸ್ವಿಮಿಂಗ್, ಸೈಕ್ಲಿಂಗ್ ಹೀಗೆ ಮನಸ್ಸಿಗೆ ಮುದ ನೀಡುವ ಮತ್ತು ಆರೋಗ್ಯ ನೀಡುವ ಕೆಲಸಗಳಿಗೆ ಮೀಸಲಿಡಿ. ಈ ನಿಯಮವನ್ನು ಅನುಸರಿಸಿ, ಏಕಾಂಗಿತನ ದೂರವಾಗಿಸಿ.
=============
ಸಕ್ಕರೆಗಿಂತಲೂ ಅಪಾಯಕಾರಿ ಆಹಾರವಿದು
ಸಕ್ಕರೆ ಆರೋಗ್ಯಕ್ಕೆ ಉತ್ತಮವಲ್ಲ ಅಂತಾ ಎಲ್ಲರಿಗೂ ತಿಳಿದಿದೆ. ಆದರೆ ಇನ್ನು ಕೆಲವು ಆಹಾರಗಳು ಸಕ್ಕರೆಗಿಂತಲೂ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಹಾಗಾದ್ರೆ ಯಾವುದು ಆ ವಸ್ತುಗಳು ಅಂತಾ ತಿಳಿಯೋಣ ಬನ್ನಿ..
ಸಕ್ಕರೆಗಿಂತಲೂ ಹಾನಿಕಾರಕ ಅಂದ್ರೆ ರಿಫೈನ್ಡ್ ಕಾರ್ಬೋಹೈಡ್ರೇಟ್ಸ್. ಇವುಗಳನ್ನು ಬ್ರೆಡ್, ಪೇಸ್ಟ್ರೀಸ್, ಬೇಕರಿ ತಿಂಡಿ ಸೇರಿ ಅನೇಕ ಆಹಾರದಲ್ಲಿ ಇದನ್ನು ಬಳಸುತ್ತಾರೆ.
ನೀವೇನಾದರೂ ರಿಫೈನ್ಡ್ ಕಾರ್ಬೋಹೈಡ್ರೇಟ್ಸ್ ಬಳಸಿರುವ ಆಹಾರ ಸೇವಿಸಿದರೆ, ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಪ್ರತಿದಿನ ಇಂಥ ಆಹಾರ ಸೇವಿಸಿದರೆ, ನಿಮಗೆ ಶುಗರ್ ಅಥವಾ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೆಚ್ಚು ಮನೆಯಲ್ಲೇ ತಯಾರಿಸಿದ ಆಹಾರ ಸೇವನೆ ಮಾಡಿ.
ಇನ್ನು ಇಂಥ ಆಹಾರ ಸೇವನೆಯಿಂದ ನೀವು ಬೇಗ ವಯಸ್ಸಾದವರಂತೆ ಕಾಣುತ್ತೀರಿ. ಸಿನಿಮಾದವರು ವಯಸ್ಸು 50 ಆದರೂ ನೋಡಲು ಹುಡುಗನಂತೆ ಕಾಣುತ್ತಾರೆ. ಏಕೆಂದರೆ, ಅವರು ಇಂಥ ಆಹಾರಗಳಿಂದ ದೂರವಿರುತ್ತಾರೆ. ಆದರೆ ಸಾಮಾನ್ಯ ಜನರು ಡಯಟ್ ಎಲ್ಲ ಫಾಲೋ ಮಾಡುವುದಿಲ್ಲ. ಹಾಗಾಗಿ ಅವರು ಬೇಗ ವಯಸ್ಸಾದವರಂತೆ ಕಾಣುತ್ತಾರೆ.
ಸಕ್ಕರೆ ಹೇಗೆ ಹಲ್ಲು ಹಾಳು ಮಾಡುತ್ತದೆಯೋ, ಅದೇ ರೀತಿ ರಿಫೈನ್ಡ್ ಕಾರ್ಬೋಹೈಡ್ರೇಟ್ಸ್ ಬಳಸಿ ಮಾಡಿದ ಆಹಾರ ಕೂಡ ಹಲ್ಲನ್ನು ಹಾಳು ಮಾಡುತ್ತದೆ.
ನಾಲ್ಕನೇಯದಾಾಗಿ ಉದರದ ಆರೋಗ್ಯ ಹಾಳು ಮಾಡುತ್ತದೆ. ಸರಿಯಾಗಿ ಜೀರ್ಣಕ್ರಿಯೆ ಆಗದಿರುವುದು, ಮಲ ವಿಸರ್ಜನೆಯಾಗದಿರುವ ಸಮಸ್ಯೆಗಳೆಲ್ಲ ಉದ್ಭವಿಸುವಂತೆ ಮಾಡುತ್ತದೆ. ಹಾಗಾಗಿ ಮನೆಯಲ್ಲೇ ಮಾಡಿದ ಆಹಾರ ಸೇವಿಸಿ. ಆರೋಗ್ಯವಾಗಿರಿ.
ೃೃೃೃ
ಕ್ರೀಮ್ ಬಿಸ್ಕೇಟ್ ಮಕ್ಕಳಿಗೆ ನೀಡುವ ಮುನ್ನ ಇದನ್ನು ಓದಿ
ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಕೇಕ್, ಕ್ರೀಮ್ ಬೇಸ್ಕೇಟ್, ಕುಕೀಸ್, ಚಾಕೋಲೇಟ್ಸ್, ಪಿಜ್ಜಾ, ಬರ್ಗರ್ ಎಲ್ಲವೂ ಇದೆ. ಆದರೆ ಇದ್ಯಾವುದು ಆರೋಗ್ಯಕ್ಕೆ ಉತ್ತಮವಲ್ಲ. ಅದರಲ್ಲೂ ಆ್ಯಡ್ ನೋಡಿ ನೀವೇನಾದ್ರೂ ಮಗುವಿಗೆ ತಿನ್ನೋಕ್ಕೆ ಕ್ರೀಮ್ ಬಿಸ್ಕೇಟ್ ನೀಡಿದ್ರೆ, ಅದು ಆ ಮಗುವಿನ ಆರೋಗ್ಯ ಸುಧಾರಿಸುವುದಿಲ್ಲ. ಬದಲಾಗಿ ಆರೋಗ್ಯವನ್ನು ಹಾಳು ಮಾಡುತ್ತದೆ.
ಆ್ಯಡ್‌ನಲ್ಲಿ ಮಕ್ಕಳಿಗೆ ಬೇಕಾದ ಪೋಷಕಾಂಶ, ಹಾಲು, ಡ್ರೈಫ್ರೂಟ್ಸ್ ಎಲ್ಲವೂ ಈ ಬಿಸ್ಕೇಟ್‌ನಲ್ಲಿರತ್ತೆ. ಮಗುವಿಗೆ ಈ ಬಿಸ್ಕೇಟ್ ನೀಡಿದ್ರೆ, ಶಕ್ತಿ ಬರತ್ತೆ ಅಂತೆಲ್ಲಾ ಹೇಳ್ತಾರೆ. ಆದರೆ ಅಸಲಿಯತ್ತೇ ಬೇರೆಯಾಗಿರತ್ತೆ. ಕ್ರೀಮ್ ಬಿಸ್ಕೇಟ್‌ನಲ್ಲಿ ಯಾವ ಶಕ್ತಿಯೂ ಇರುವುದಿಲ್ಲ, ಪೋಷಕಾಂಶವೂ ಇರುವುದಿಲ್ಲ.
ಇದರಲ್ಲಿರುವ ಕ್ರೀಮ್‌ನಲ್ಲಿ ಹಾಲಿನ ಸತ್ವವೇ ಇರೋದಿಲ್ಲ. ಎಣ್ಣೆ, ಆರ್ಟಿಫಿಶಿಯಲ್ ಫ್ಲೇವರ್ಸ್, ಸಕ್ಕರೆ ಮತ್ತು ಸಿಂಥೆಟಿಕ್ ಕಲರ್ ಬಳಸಿ, ಈ ಕ್ರೀಮ್ ಮಾಡಿರುತ್ತಾರೆ. ಆದರೆ ಆ್ಯಡ್‌ನಲ್ಲಿ ಹಾಲಿನಿಂದ ಮಾಡಿದ್ದೆಂದೇ ತೋರಿಸುತ್ತಾರೆ.
ನೀವೇನಾದರೂ ನಿಮ್ಮ ಮಕ್ಕಳಿಗೆ ಪ್ರತಿದಿನ ಈ ಕ್ರೀಮ್ ಬಿಸ್ಕೇಟ್ ನೀಡಿದ್ರೆ, ಅದರಿಂದ ಅವರ ತೂಕ ಹೆಚ್ಚುತ್ತದೆ. ಬೇಡದ ಅಂಶ ದೇಹ ಸೇರಿ, ಆರೋಗ್ಯ ಕೆಡುತ್ತದೆ. ಹಲ್ಲು ಹಾಳಾಗುತ್ತದೆ. ಸಣ್ಣ ವಯಸ್ಸಿಗೆ ಶುಗರ್ ಕೂಡ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳಿಗೆ ಈ ಕ್ರೀಮ್ ಬಿಸ್ಕೇಟ್ ಸೇವನೆಯ ಅಭ್ಯಾಸ ಮಾತ್ರ ಮಾಡಬೇಡಿ. ನೀವೇ ಮನೆಯಲ್ಲಿ ಆರೋಗ್ಯಕರ ಕುಕೀಸ್ ತಯಾರಿಸಿ, ತಿನ್ನಿಸಿ.
ೃೃೃೃೃೃೃೃೃೃೃೃೃೃೃೃೃೃೃೃ
ಪಿಸಿಓಡಿ ಇದ್ದರೆ ಈ ಮೂರು ಪಿ ಬಗ್ಗೆ ಗಮನ ನೀಡಿ
ಪಿಸಿಓಡಿ ಅನ್ನೋದು ಕಾಮನ್ ಸಮಸ್ಯೆಯಾಗಿಬಿಟ್ಟಿದೆ. ಆದರೆ ಇದನ್ನು ಅಷ್ಟು ಸುಲಭವಾಗಿ ಸ್ವೀಕರಿಸಬೇಡಿ. ಬದಲಾಗಿ ಇದರ ಬಗ್ಗೆ ಆದಷ್ಟು ಗಮನ ನೀಡಿ, ಪರಿಹಾರ ಕಂಡುಕ“ಳ್ಳಿ. ಈ ಪಿಸಿಓಡಿಯಿಂದಲೇ ಸಂತಾನ ಹೀನತೆ, ಅನಾರೋಗ್ಯಕರ ತೂಕ ಹೆಚ್ಚಳ ಇತ್ಯಾಾದಿ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ ಇದನ್ನು ಕಡೆಗಣಿಸುವಂತಿಲ್ಲ.
1. ಪಿ1 ಅಂದ್ರೆ ಪುವರ್ ನ್ಯೂಟ್ರಿಶಿಯನ್. ನೀವು ಸೇವಿಸುವ ಆಹಾರದಲ್ಲಿ ಪೋಷಕಾಂಶವಿಲ್ಲ ಎಂದಲ್ಲಿ, ನಿಮ್ಮ ಪಿಸಿಓಡಿ ಸಮಸ್ಯೆ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಜಂಕ್ ಫುಡ್, ಬೇಕರಿ ತಿಂಡಿ, ಕರಿದ ಆಹಾರ ಸೇವನೆ ನಿಲ್ಲಿಸಿಬಿಡಿ. ಸಲಾಡ್, ಫ್ರೂಟ್ಸ್, ಡ್ರೈಫ್ರೂಟ್ಸ್, ಧವಸ-ಧಾನ್ಯಗಳ ಸೇವನೆ ಮಾಡಿ. ಪೋಷಕಾಂಶವಿರುವ ತರಕಾರಿ, ಹಣ್ಣು ಸೇವಿಸಿ. ಮೈದಾ ಮತ್ತು ಸಕ್ಕರೆ ಸೇವನೆ ತ್ಯಜಿಸಿ.
2. ಪಿ2 ಅಂದ್ರೆ ಪುವರ್ ಸ್ಲೀಪ್. ಚೆನ್ನಾಗಿ ನಿದ್ದೆ ಮಾಡದೇ, ಲೇಟಾಗಿ ಮಲಗಿ, ಲೇಟಾಗಿ ಏಳುವುದು. ಲೇಟಾಗಿ ಮಲಗಿ ಬೇಗ ಏಳುವುದು ಎರಡೂ ಆರೋಗ್ಯಕ್ಕೆ ಮಾರಕ. ಹಾಗಾಗಿ ಬೇಗ ಮಲಗಿ, ಬೇಗ ಏಳಿ. ದಿನಕ್ಕೆ 8 ತಾಸು ನಿದ್ರಿಸಿ. ಇದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಿದ್ರಾಹಿನತೆ ಸಮಸ್ಯೆಯಿಂದಲೂ ಪಿಸಿಓಡಿ ಸಮಸ್ಯೆ ಹೆಚ್ಚಾಗುತ್ತದೆ.
3. ಪಿ3 ಅಂದ್ರೆ ಪ್ಯಾಸಿವ್ ಲಿವಿಂಗ್ . ಅಂದ್ರೆ ಆಲಸ್ಯದ ಜೀವನ. ನೀವು ಸದಾಕಾಲ ಆ್ಯಕ್ಟೀವ್ ಇದ್ದಷ್ಟು, ಆರೋಗ್ಯವಾಗಿರುತ್ತೀರಿ. ನೀವು ಯಾವಾಗ ಆಲಸ್ಯದಿಂದ ಇರುತ್ತೀರೋ. ಆವಾಗ ನಿಮ್ಮ ಆರೋಗ್ಯವೂ ಹಾಳಾಗುತ್ತದೆ. ಅನಾರೋಗ್ಯಕರ ತೂಕ ಹೆಚ್ಚಾಗುತ್ತದೆ. ಪಿಸಿಓಡಿ ಸಮಸ್ಯೆಯೂ ಉಲ್ಬಣಿಸುತ್ತದೆ. ಹಾಗಾಗಿ ಆದಷ್ಟು ಆ್ಯಕ್ಟೀವ್ ಆಗಿರಿ. ವಾಕಿಂಗ್, ವ್ಯಾಯಾಮ್, ಡಾನ್ಸ್, ಸೈಕ್ಲಿಂಗ್, ಹರಟುವುದು, ಹಾಡುವುದು, ಹೀಗೆ ಮನಸ್ಸಿಗೆ ಖುಷಿ ನೀಡುವ ಕೆಲಸದಲ್ಲಿ ನಿರತರಾಗಿ.
ೃೃೃೃೃೃೃೃೃೃೃೃೃೃೃೃೃೃೃೃೃೃೃ
ಯಂಗ್ ಆಗಿ ಕಾಣಬೇಕು ಅಂದ್ರೆ 3 ನಿಯಮಗಳನ್ನು ಅನುಸರಿಸಿ
ಯಾರಿಗೆ ತಾನೇ ಯಂಗ್ ಆಗಿ ಕಾಣಬೇಕು ಅಂತಾ ಅನ್ನಿಸೋದಿಲ್ಲ..? ಎಲ್ಲರಿಗೂ ಚೆಂದವಾಗಿ, ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರಬೇಕು ಅಂತಾ ಅನ್ನಿಸೋದಿಲ್ಲ..? ಅದೇ ರೀತಿ ನೀವು ಯಂಗ್ ಆಗಿ ಕಾಣಬೇಕು ಅಂದ್ರೆ, 3 ನಿಯಮಗಳನ್ನು ಅನುಸರಿಸಬೇಕು. ಹಾಗಾದ್ರೆ ಯಾವುದು ಆ 3 ನಿಯಮ ಅಂತಾ ತಿಳಿಯೋಣ ಬನ್ನಿ..
ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಕ್ಲೀನ್ ಮಾಡಿ. ಅಂದರೆ ಕ್ಲೆನ್ಸಿಂಗ್. ದಿನಪೂರ್ತಿ ನಿಮ್ಮ ಮುಖಕ್ಕೆ ಅಂಟಿರುವ ಧೂಳು ಹೋಗಬೇಕು ಅಂದ್ರೆ ನೀವು ರಾತ್ರಿ ಮಲಗುವಾಗ ನಿಮ್ಮ ಮುಖವನ್ನು ಉತ್ತಮ ಕ್ವಾಲಿಟಿಯ ಫೇಸ್‌ವಾಶ್ ಬಳಸಿ ಕ್ಲೀನ್ ಮಾಡಬೇಕು. ಮನೆಯಲ್ಲೇ ತಯಾರಿಸಿರುವ ಕಡಲೆ ಅಥವಾ ಹೆಸರು ಕಾಳಿನ ಹುಡಿಯಿಂದಲೂ ಮುಖ ಕ್ಲೀನ್ ಮಾಡಬಹುದು.
ಎರಡನೇಯದಾಗಿ ಮಾಯಿಶ್ಚರೈಸೇಶನ್. ಮುಖವನ್ನು ಮಾಯಿಶ್ಚರೈಸ್ ಮಾಡುವುದರಿಂದ, ಅದು ನಮ್ಮ ಮುಖವನ್ನು ಹೈಡ್ರೇಟ್ ಮಾಡುತ್ತದೆ. ಫೈನ್ ಲೈನ್ಸ್ ಕಡಿಮೆ ಮಾಡುತ್ತದೆ. ಮುಖದ ಕಾಂತಿ ಕಾಪಿಡುತ್ತದೆ.
ಮೂರನೇಯದಾಗಿ ಸನ್‌ಸ್ಕ್ರೀನ್ ಬಳಸಿ. ಸನ್‌ಸ್ಕ್ರೀನ್ ಸೂರ್ಯನ ಬಿಸಿಲಿನಿಂದ ನಿಮ್ಮ ತ್ವಚೆಯ ರಕ್ಷಣೆ ಮಾಡುತ್ತದೆ. ಇದೆಲ್ಲ ಚರ್ಮಕ್ಕೆ ಅಪ್ಲೈ ಆಗುವ ನಿಯಮಗಳು. ಇನ್ನು ಇದರ ಜತೆ ನೀವು ನೀರನ್ನು ಚೆನ್ನಾಾಗಿ ಕುಡಿಯಬೇಕು. ಮಜ್ಜಿಗೆ, ಎಳನೀರಿನ ಸೇವನೆ ಮಾಡಬೇಕು. ಹಸಿ ತರಕಾರಿ, ಹಣ್ಣಿನ ಸೇವನೆ ಮಾಡಬೇಕು. ಆರೋಗ್ಯಕರ ಆಹಾರ ಸೇವನೆ ಮಾಡಿ, ಮಸಾಲೆಯುಕ್ತ, ಕರಿದ, ಜಂಕ್ ಪದಾರ್ಥ ಸೇವನೆ ಮಿತವಾಗಿಸಿದರೆ, ನೀವು ಯಂಗ್ ಆಗಿ ಕಾಣುತ್ತೀರಿ.
====
ತುಪ್ಪದ ಸೇವನೆ ಮಾಡುವ ಸರಿಯಾದ ವಿಧಾನ ಇದೇ ನೋಡಿ..
ತುಪ್ಪದ ಸೇವನೆಯಿಂದ ದೇಹದ ತೂಕ ಹೆಚ್ಚಾಗುತ್ತದೆ. ಅದು ಆರೋಗ್ಯಕ್ಕೆ ಉತ್ತಮವಲ್ಲ ಅನ್ನೋ ಭ್ರಮೆ ಹಲವರಲ್ಲಿ ಇತ್ತು. ಆದರೆ ಇದೀಗ ತುಪ್ಪದ ಲಾಭವೇನು ಅನ್ನೋದು ಹಲವರಿಗೆ ತಿಳಿದಿದೆ. ಆದರೆ ನಾವು ಅದನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು. ತಪ್ಪಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ, ನಮ್ಮ ದೇಹದ ತೂಕ ಹೆಚ್ಚಾಗುತ್ತದೆ. ಹಾಗಾದ್ರೆ ತುಪ್ಪದ ಸೇವನೆ ಹೇಗೆ ಮಾಡಬೇಕು ಎಂದು ತಿಳಿಯೋಣ ಬನ್ನಿ..
ನಿಮ್ಮ ದೇಹದ ತೂಕ ಹೆಚ್ಚೂ ಆಗಬಾರದು, ಕಡಿಮೆ ಆಗಬಾರದು, ಸರಿಯಾಗಿ ಇರಬೇಕು ಅಂದ್ರೆ, ಪ್ರತಿದಿನ 1 ಸ್ಪೂನ್ ತುಪ್ಪವನ್ನು ಉಗುರು ಬೆಚ್ಚಗಿನ ನೀರಿಗೆ ಹಾಕಿ, ತಿಂಡಿಗೂ ಮುನ್ನ ಕುಡಿಯಿರಿ. ಇದರಿಂದ ತೂಕ ಸರಿಯಾಗಿ ಇರುತ್ತದೆ.
ಇನ್ನು ನೆನಪಿನ ಶಕ್ತಿ ಚೆನ್ನಾಗಿರಬೇಕು, ಓದಿದ್ದೆಲ್ಲ ನೆನಪಿರಬೇಕು ಅಂದ್ರೆ ಪ್ರತಿದಿನ 1 ಸ್ಪೂನ್ ತುಪ್ಪವನ್ನು ಮಕ್ಕಳ ಆಹಾರಕ್ಕೆ ಬೆರೆಸಿ ನೀಡಿ. ಇದರ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
ಅಲ್ಲದೇ ಪ್ರತಿದಿನ 1 ಸ್ಪೂನ್ ತುಪ್ಪದ ಸೇವನೆಯಿಂದ ನಿಮ್ಮ ತ್ವಚೆ ಮತ್ತು ಕೂದಲ ಸೌಂದರ್ಯ ಚೆನ್ನಾಗಿರುತ್ತದೆ. ಕೂದಲ ಬುಡವೂ ಧೃಡವಾಗುತ್ತದೆ. ಕೂದಲು ಉದುರುವುದು ನಿಲ್ಲುತ್ತದೆ. ಅಲ್ಲದೇ, ಮುಖದ ಮೇಲೆ ಹೆಚ್ಚು ಗುಳ್ಳೆಗಳಾಗುವುದಿಲ್ಲ.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ, ನೀವು ತುಪ್ಪದ ಸೇವನೆ ಮಾಡಬೇಕು. ಗರ್ಭಿಣಿಯರಿಗೆ ತುಪ್ಪ ತಿನ್ನಿಸಲಾಗುತ್ತೆ. ಇದಕ್ಕೆ ಕಾರಣ, ತಾಯಿ ಮತ್ತು ಮಗುವಿನ ಮೂಳೆ ಗಟ್ಟಿಯಾಗುತ್ತದೆ. ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಕೂದಲ ಬುಡ ಗಟ್ಟಿಯಾಗುತ್ತದೆ. ಮಗುವಿನ ಮತ್ತು ತಾಯಿಯ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಗರ್ಭಿಣಿಗೆ ತುಪ್ಪ ಸೇವಿಸಲು ಹೇಳಲಾಗುತ್ತದೆ.
ಇನ್ನು ತುಪ್ಪ ಹೇಗೆ ಬಳಸಬೇಕು ಅಂದ್ರೆ, ತುಪ್ಪವನ್ನು ಹೆಚ್ಚು ಬಿಸಿ ಮಾಡಬೇಡಿ. ಬಿಸಿ ಮಾಡಿದ ತಕ್ಷಣ ಏನಾದರೂ ಹುರಿಯುವುದಿದ್ದರೆ ಹುರಿಯಬಹುದು. ಆದರೆ ಅದನ್ನೇ ಹೆಚ್ಚು ಬಿಸಿ ಮಾಡಬಾರದು. ಇನ್ನು ತುಪ್ಪ ಬಿಸಿ ಮಾಡಿ ಅದರಲ್ಲಿ ಪದಾರ್ಥಗಳನ್ನು ಕರಿದು ತಿನ್ನಬಾರದು. ಅಲ್ಲದೇ, ದಿನಕ್ಕೆ 1ರಿಂದ 2 ಸ್ಪೂನ್ ತುಪ್ಪ ಸೇವಿಸಬಹುದು. ಇನ್ನು ತುಪ್ಪ ತಿಂದರೆ, ಅಲರ್ಜಿ ಎಂದರೆ, ವೈದ್ಯರನ್ನು ವಿಚಾರಿಸಿ, ಸೇವಿಸುವುದು ಉತ್ತಮ.
Discussion about this post