ಬೆಂಗಳೂರು: ನಗರದಲ್ಲಿನ ಹವಾನಿಯಂತ್ರಿತ (ವಜ್ರ) ಸೇವೆಗಳ ಮಧ್ಯಮ ಮತ್ತು ದೂರದ ಪ್ರಯಾಣ ದರಗಳು ಮತ್ತು ಬಸ್ ಪಾಸ್ ದರಗಳನ್ನು ಬಿಎಂಟಿಸಿ ಕಡಿಮೆ ಮಾಡಿ ಆದೇಶವನ್ನು ಹೊರಡಿಸಿದೆ.
ಡಿ. ರಿಂದ ಜಾರಿಗೆ ಬರುವಂತೆ ವಜ್ರ ಸೇವೆಗಳ ಮೊದಲ ಮೂರು ಹಂತಗಳು, ಅಂದ್ರೆ 6 ಕಿ.ಮೀ ವರೆಗೆ ಒಂದೇ ಆಗಿರುತ್ತದೆ. ಹಂತ 4 (8 ಕಿಮೀ) ಮತ್ತು ಆಚೆಗೆ ಪ್ರಯಾಣಿಸುವ ಪ್ರಯಾಣಿಕರು ಪ್ರಯಾಣಿಸುವ ದೂರವನ್ನು ಅವಲಂಬಿಸಿ ರೂ 5 ರಿಂದ ರೂ 40 ರವರೆ ಬೆಲೆ ಇಳಿಕೆಯಾಗಲಿದೆ ತಿಳಿಸಿದೆ.
ವಜ್ರ ದಿನದ ಪಾಸ್‌ನ ಬೆಲೆಯನ್ನು 120 ರೂ.ನಿಂದ 100 ರೂ.ಗೆ ಇಳಿಸಲಾಗಿದ್ದು, ಮಾಸಿಕ ಪಾಸ್ ಬೆಲೆಯು 2000 ರೂ.ನಿಂದ 1500 ರೂ.ಗೆ ಕಡಿತಗೊಂಡಿದೆ. ಆದರೆ ಈ ರಿಯಾಯಿತಿಯು ವಿಮಾನ ನಿಲ್ದಾಣದ ಬಸ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.
ಇನ್ನೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಾಮಾನ್ಯ ಮತ್ತು ವಾಯುವಜ್ರ ಸೇವೆಗಳ ಪ್ರಯಾಣದಲ್ಲಿ ಯಾವುದೇ ಬದಲಾವಣೆಗಳು ಇರೋದಿಲ್ಲ ಎಂದು ತಿಳಿಸಿದೆ. ಶುಕ್ರವಾರದಿಂದ 12 ಮಾರ್ಗಗಳಲ್ಲಿ 90 ಹೆಚ್ಚುವರಿ ಎಸಿ ಬಸ್ ಸೇವೆಗಳನ್ನು ಆರಂಭಿಸಲಾಗುವುದು ಅಂತ ತಿಳಿಸಿದ್ದು, ಇದರೊಂದಿಗೆ ನಗರದಲ್ಲಿ ಒಟ್ಟು 173 ಎಸಿ ಬಸ್‌ಗಳು ಸಂಚಾರ ಮಾಡಲಿದೆ.
Sun Volvo Fare, Touch down on pass

























Discussion about this post