ಅಟ್ಲಾಂಟಾ: ಇಲ್ಲಿನ ಪ್ರಾಣಿ ಸಂಗ್ರಹಾಲಯದಲ್ಲಿದ್ದ ೧೩ಕ್ಕೂ ಹೆಚ್ಚು ಗೊರಿಲ್ಲಾಗಳಿಗೆ ಕೊವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ೬೦ ವರ್ಷದ ಒಜ್ಜಿ ಸೇರಿದಂತೆ ೧೩ಕ್ಕೂ ಹೆಚ್ಚು ಗೊರಿಲ್ಲಾಗಳು ಕೊರೊನಾ ಸೋಂಕಿಗೆ ತುತ್ತಾಗಿದೆ.
ಶೀತ, ಕೆಮ್ಮು, ಸೀನುತ್ತಾ ತೊಂದರೆ ಪಡುತ್ತಿದ್ದ ಗೊರಿಲ್ಲಾಗಳನ್ನು ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿಗಳು ಗಮನಿಸಿದ್ದಾರೆ. ಆಹಾರವನ್ನು ನೀಡಲು ಹೋದಾಗ ಗಮನಿಸಿದ್ದಾರೆ. ಆದರೆ ಸರಿಯಾಗಿ ಆಹಾರ ಸೇವಿಸದ ಗೊರಿಲ್ಲಾಗಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವು. ಗೊರಿಲ್ಲಾಗಳ ವೈದ್ಯಕೀಯ ವರದಿಯನ್ನು ಜಾರ್ಜಿಯಾ ವಿಶ್ವವಿದ್ಯಾಲಯದ ಪಶು ವೈದ್ಯಕೀಯ ಲ್ಯಾಬ್ ಗೆ ಕಳಿಸಿದ್ದರು.
ಜಾರ್ಜಿಯಾದ ಪಶುವೈದ್ಯಕೀಯ ಲ್ಯಾಬ್ ಗೊರಿಲ್ಲಾಗಳಿಗೆ ಕೊವಿಡ್ ಪಾಸಿಟಿವ್ ಇರೋದನ್ನ ಖಚಿತಪಡಿಸಿದೆ. ಸಿಬ್ಬಂದಿ ವರ್ಗಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದ್ದು, ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಪ್ರಾಣಿ ಸಂಗ್ರಹಾಲಯ ಸೂಚಿಸಿದೆ.
Discussion about this post