ಶೃಂಗೇರಿ: ತಾಲ್ಲೂಕಿನ ನೂರು ಬೆಡ್ ಅಸ್ಪತ್ರೆ ಹೋರಾಟ ಸಮಿತಿ ಶುಕ್ರವಾರ ನೀಡಿದ ಬಂದ್ ಕರೆಗೆ ಶೃಂಗೇರಿ ತಾಲ್ಲೂಕಿನ ಎಲ್ಲಾ ಅಂಗಡಿಮುಂಗಟ್ಟು, ಹೊಟೇಲ್‌ಗಳು, ಶಾಲಾ-ಕಾಲೇಜು, ಬಸ್ಸು, ಟ್ಯಾಕ್ಸಿ, ಆಟೋ, ಲಾರಿ ಮಾಲೀಕರು ಹಾಗೂ ಚಾಲಕರು ಬಂದ್ ಆಚರಿಸಿ ಸಮಿತಿಯ ಆಶಯಕ್ಕೆ ನೈತಿಕ ಬೆಂಬಲ ಸೂಚಿಸಿದವು.
ಪಟ್ಟಣ ಹಾಗೂ ಗ್ರಾಮಾಂತರ ಭಾಗ ಶುಕ್ರವಾರ ಸಂಪೂರ್ಣ ಸ್ತಬ್ಧವಾಗಿತ್ತು. ಶುಕ್ರವಾರ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆ ವೆಲ್‌ಕಮ್‌ಗೇಟ್‌ನಿಂದ ಮುಖ್ಯರಸ್ತೆಗಳಲ್ಲಿ ಸಾಗಿ ಸಂತೆಮಾರ್ಕೆಟ್ ಸಮೀಪ ತನಕ ಸಾಗಿಬಂತು.ಸುಮಾರು ೨೫ಕ್ಕೂ ಸಂಘಟನೆಗಳು ಬಂದ್‌ಗೆ ಸಾಥ್ ನೀಡಿದವು.
ಸಂತೆಮಾರ್ಕೆಟ್‌ನ ಸಮೀಪ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಮಿತಿಯ ರಂಜಿತ್ ಅವರು ಮಾತನಾಡಿ”ನೂರು ಬೆಡ್ ಅಸ್ಪತ್ರೆಗಾಗಿ ಮಾಡುತ್ತಿದ್ದ ಹೋರಾಟಕ್ಕೆ ವರುಷ ಉರುಳಿವೆ.೨೦೦೭ರಂದು ತಾಲ್ಲೂಕಿನ ಆರೋಗ್ಯಕೇಂದ್ರವನ್ನು ೧೦೦ಬೆಡ್ ಅಸ್ಪತ್ರೆಯನ್ನಾಗಿಸಿ ಮೇಲ್ದರ್ಜೆಗೆ ಏರಿಸಬೇಕು ಎಂದು ಸರಕಾರ ಆದೇಶ ಹೊರಡಿಸಿದೆ.
ಆದರೆ ಪ್ರಸ್ತುತ ಸಾರ್ವಜನಿಕ ಅಸ್ಪತ್ರೆಯಲ್ಲಿ ಜಾಗದ ಕೊರತೆ ಇದೆ.ಕಳೆದ ವರುಷ ಸಾಮಾಜಿಕ ಜಾಲತಾಣದ ಮೂಲಕ ಸುಸಜ್ಜಿತ ಅಸ್ಪತ್ರೆಗಾಗಿ ಮಾಡಿದ ಹೋರಾಟ ಆರಂಭಿಸಿದ್ದೆವು.ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದೆವು.ಆದರೆ ಹೋರಾಟ ಫಲಪ್ರದವಾಗಲು ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.
ಮನವಿ ಸ್ವೀಕರಿಸಿ ಎ.ಸಿ ಡಾ.ನಾಗರಾಜ್ ಅವರು ಮಾತನಾಡಿ ಶೃಂಗೇರಿಗೆ ನೂರು ಬೆಡ್ ಅಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಆಗಬೇಕು ಎಂಬ ಕನಸು ನಮಗೂ ಇದೆ .ಇದಕ್ಕಾಗಿ ಕೂಡಲೇ ಜಾಗವನ್ನು ಗುರುತಿಸಿ ೧೫ ದಿನಗಳ ಒಳಗೆ ಮೊದಲು ಅಸ್ಪತ್ರೆಗೆ ಜಾಗಮಂಜೂರಾತಿ ಮಾಡಲು ಸಿದ್ಧರಾಗಿದ್ದೇವೆ ಎಂದರು.
ಜಿಲ್ಲಾಧಿಕಾರಿಗಳು ರಮೇಶ್ ಅವರು ಕೂಡಾ ಈ ಕುರಿತು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.ಸೋಮವಾರ ಡಿ.ಸಿ ಅವರು ಶೃಂಗೇರಿಗೆ ಭೇಟಿ ನೀಡಲಿದ್ದು ಸಮಿತಿಯ ಸದಸ್ಯರು ಅವರ ಜೊತೆ ಮಾತನಾಡಲು ಅವಕಾಶವಿದೆ ಎಂದರು.ತಹಶೀಲ್ದಾರ್ ಅಂಬುಜಾ ಹಾಜರಿದ್ದರು.
ಪ್ರತಿಭಟನಾ ಮೆರವಣಿಗೆಯಲ್ಲಿ ತಾಲೂಕಿನ ೨೫ ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದವು.ಹೋರಾಟ ಸಮಿತಿಯ ಅನಿರುದ್ಧ್,ಶ್ರೇಯಸ್ಸು,ಆದರ್ಶ್,ಅಭಿಲಾಶ್ ಮೇಗೂರು, ಪ್ರವೀಣ್,ಅಂಜನ್, ಶಿವಪ್ರಸಾದ್,ಲಕ್ಷ್ಮೀಶ,ಅಭಿಲಾಷ್ ಹೆಗಡೆ,ನಿರಂಜನ್ ಇದ್ದರು.

























Discussion about this post