ಕಾಬೂಲ್: ಸ್ಥಳೀಯ ಸರ್ಕಾರವನ್ನು ಏಕಾಏಕಿ ಪತನಗೊಳಿಸಿ ಇಡೀ ದೇಶವನ್ನು ನಾಶ ಮಾಡುತ್ತಿರುವ ತಾಲಿಬಾನಿಗಳ ದುಷ್ಕೃತ್ಯಗಳ ವಿರುದ್ಧ ಸ್ಥಳೀಯ ಅಫ್ಘಾನ್ ಹೋರಾಟಗಾರರು ತಲೆ ಎತ್ತಿನಿಂತಿದ್ದಾರೆ.
ಖೈರ್ ಮಹಮ್ಮದ್ ಅಂದರಾಬಿ ಎಂಬುವರ ನಾಯಕತ್ವದಲ್ಲಿ ಸ್ಥಳೀಯರು ತಾಲಿಬಾನ್ ಉಗ್ರರ ವಿರುದ್ಧ ಹೋರಾಟ ನಡೆಸಿದ್ದಾರೆ.
ಫೂಲ್-ಎ-ಹೆಸರ್, ದೆಹ್ ಸಲಾಹ್ ಹಾಗೂ ಬಾನು ಎಂಬ ಮೂರು ಜಿಲ್ಲೆಗಳನ್ನು ಅಫ್ಘಾನ್ ಬಂಡುಕೋರರು ತಮ್ಮ ವಶಕ್ಕೆ ತೆಗೆದುಕೊಂಡು, ಸ್ಥಳೀಯರನ್ನು ತಾಲಿಬಾನಿಗಳಿಂದ ಕಾಪಾಡಲು ಹರಸಾಹಸ ನಡೆಸುತ್ತಿದ್ದಾರೆ. ಖೈರ್ ಮಹಮ್ಮದ್ ಅಂದರಾಬಿಯ ನಾಯಕತ್ವದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅರವತ್ತಕ್ಕೂ ಹೆಚ್ಚು ತಾಲಿಬಾನಿಗಳು ಸತ್ತುಹೋಗಿದ್ದಾರೆಂದು ಅಂದಾಜು ಮಾಡಲಾಗಿದೆ.
ಸ್ಥಳೀಯರು ತಾಲಿಬಾನ್ ನಿಂದ ಇನ್ನಿತರ ಜಿಲ್ಲೆಗಳನ್ನು ಕಸಿದುಕೊಳ್ಳಲು ಪ್ರತಿರೋಧ ನೆಲೆಗಳನ್ನು ಪೊಲ್-ಎ-ಹೆಸರ್ ನ ಉತ್ತರ ಭಾಗದಲ್ಲಿ ಸ್ಥಾಪಿಸಿಕೊಂಡು, ಪಡೆಗಳನ್ನು ಪ್ರೇರೇಪಿಸುತ್ತಿದ್ದಾರೆ. ತಾಲಿಬಾನಿಗಳಿಗೆ ಅಭೇದ್ಯ ಕೋಟೆಯಾಗಿರುವ ಪಂಜ್ ಶೀರ್ ಕಣಿವೆಗಳು ಸಹ ಇಲ್ಲಿಗೆ ಹತ್ತಿರದಲ್ಲಿವೆ. ಜಗತ್ತೇ ಅಫ್ಘನ್ನರ ಸಂಕಟಕ್ಕೆ ಮೌನ ತಾಳಿರುವಾಗ, ಸ್ಥಳೀಯ ಹೋರಾಟ ಮುನ್ನುಗ್ಗುತ್ತಿರುವುದು ಆಶಾವಾದದಂತೆ ಕಂಡಿದೆ.
Discussion about this post