ಚಿಕ್ಕಮಗಳೂರು : ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುವ ದುರುದ್ದೇಶದಿಂದಲೇ ಇಂದಿರಾ ಕ್ಯಾಂಟೀನ್ ಆರಂಭಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆರೋಪಿಸಿದರು.
ಶುಕ್ರವಾರ ಅಯ್ಯನ ಕೆರೆಯಲ್ಲಿ ಬಾಗಿನ ಸಮರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇಂದಿರಾ ಕ್ಯಾಂಟೀನ್ ಆರಂಭಿಸಿರುವುದು ರಾಜಕಾರಣದ ಉದ್ದೇಶಕ್ಕಾಗಿ, ಬಡವರ ಯೋಜನೆ ಹೆಸರಲ್ಲಿ ದುಡ್ಡು ಹೊಡೆಯುವ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಬದಲಾಗಿ ಅನ್ನಕ್ಕೆ ಅಧಿದೇವತೆಯಾದ ಅನ್ನಪೂರ್ಣೇಶ್ವರಿ ಹೆಸರು ಇಡಿ ಎಂದು ಕೇಳುವುದರಲ್ಲಿ ತಪ್ಪೇನಿದೆ? ಕಾಂಗ್ರೆಸ್ ಪಕ್ಷ ಇಂದಿರಾ ಹೆಸರಲ್ಲಿ ರಾಜಕಾರಣ ಮಾಡಲು ಇದನ್ನು ದುರ್ಬಳಕೆ ಮಾಡಿಕೊಂಡಿದೆ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.
ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರಿನಲ್ಲಿ ನಾನು ಯಾವತ್ತೂ ಬೆಂಕಿ ಹಚ್ಚುವ ರಾಜಕಾರಣ ಮಾಡಲ್ಲ ಸೌಹಾರ್ದತೆ ರಾಜಕಾರಣ ಮಾಡುವವನು, ವಿವಾದಗಳು ಉಂಟಾದಾಗ ಬಗೆಹರಿಸುವುದು ನ್ಯಾಯಾಲಯದ ಕೆಲಸ ಕುಡಿಯುವ ನೀರಿನಲ್ಲಿ ರಾಜಕಾರಣ ಮಾಡುವ ದುರುದ್ದೇಶ ನನಗಿಲ್ಲ ಯಾವ ರಾಜ್ಯಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಸೇರಬೇಕು ಎಂಬುದನ್ನು ನ್ಯಾಯಾಲಯ ತೀರ್ಮಾನಿಸಿದೆ. ನೀರಿನ ಬಳಕೆಯಲ್ಲಿ ಆಯಾ ರಾಜ್ಯಗಳು ಸರ್ವಸ್ವತಂತ್ರ ಎಂದರು.
ಇಂದಿರಾ ಕ್ಯಾಂಟೀನ್ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು ಯಾರ್ಯಾರು ಯಾವ ದೃಷ್ಟಿಕೋನದಲ್ಲಿ ಚಿಂತನೆ ಮಾಡುತ್ತಾರೆ ಅದೇ ಆಗಿರುತ್ತಾರೆ ಎಂದು ಅವರು ದೂಷಿಸಿದ್ದಾರೆ. ಕಾಂಗ್ರೆಸ್ನಲ್ಲಿ ಜವಾಹರ್ಲಾಲ್ ನೆಹರು ವ್ಯಕ್ತಿತ್ವ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತು ಹುಕ್ಕಾ ಸೇವನೆ ಬಗ್ಗೆ ಅವರು ಪ್ರತಿಕ್ರಿಯಿಸಲಿ ಎಂದು ಸವಾಲೆಸೆದರು.
ನಾನೇನು ಕುಡುಕನಲ್ಲ ನನಗೆ ಯಾವುದೇ ಮಧ್ಯಪಾನ ಮಾಡುವ ಸಿಗರೇಟು ಸೇದುವ ದುಶ್ಚಟಗಳಿಲ್ಲ ನಾನೊಬ್ಬ ಸಭ್ಯ ರಾಜಕಾರಣ ಮಾಡಿಕೊಂಡು ಬಂದವನು. ರಾಜ್ಯದಲ್ಲಿ ಯಾರ್ಯಾರು ಮೈಸೂರಿಗೆ ಗೆಸ್ಟ್ ಹೌಸ್ ನಲ್ಲಿ ಏನೇನು ಮಾಡಿದ್ದಾರೆ ಎಂಬುದನ್ನು ಬಿಚ್ಚಿಡಲೇ ಎಂದು ಖಾರವಾಗಿ ಕುಟುಕಿದರು.

























Discussion about this post