ನವದೆಹಲಿ: ಆಥಿರ್ಕವಾಗಿ ಹಿಂದುಳಿದ ವರ್ಗಗಳ (ಇಡಬ್ಲೂಎಸ್) ಅಭ್ಯಥಿರ್ಗಳಿಗೆ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಈ ವರ್ಗದವರ ವಾರ್ಷಿಕ ಆದಾಯದ ಮಿತಿಯನ್ನು 8 ಲಕ್ಷ ರೂಪಾಯಿ ಒಳಗೆ ಸೀಮಿತ ಮಾಡಲು ಯಾವ್ಯಾವ ಮಾನದಂಡಗಳನ್ನು ಪರಿಗಣಿಸಲಾಯಿತು ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಸ್ನಾತಕೋತ್ತರ ವೈದ್ಯಕಿಯ ಶಿಕ್ಷಣದ ಪ್ರವೇಶಾತಿಯಲ್ಲಿ ಶೇ. 27ರಷ್ಟು ಸೀಟುಗಳನ್ನು ಇತರ ಹಿಂದುಳಿದ ವರ್ಗ (ಒಬಿಡಿ) ಮತ್ತು ಶೇ. 10 ಸೀಟನ್ನು ಇಡಬ್ಲೂಎಸ್ಗೆ ಮೀಸಲು ಇರಿಸಿ ವೈದ್ಯಕಿಯ ಕೌನ್ಸಲಿಂಗ್ ಸಮಿತಿ (ಎಂಸಿಸಿ) ನಿರ್ಧಾರ ಕೈಗೊಂಡಿತು. ಇದರ ಅನ್ವಯ ಸರ್ಕಾರ ಕಳೆದ ಜುಲೈ 29ರಂದು ಆದೇಶ ಹೊರಡಿಸಿತು.ಇದನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಇಡಬ್ಲೂಎಸ್ ಎಂಬುದರ ಮಾನದಂಡ ಕುರಿತು ತಿಳಿಯಲು ಬಯಸಿತು. ವಾರ್ಷಿಕ ಆದಾಯ 8 ಲಕ್ಷ ರೂಪಾಯಿಗೆ ಮಿತಿಗೊಳಿಸಲು ಪರಿಗಣಿತವಾದ ಡೇಟಾ, ಸಾಮಾಜಿಕ ಸ್ಥಿತಿಗತಿ ಮತ್ತು ಇನ್ನಿತರ ಮಾಹಿತಿ ಏನು ಎಂದು ಪ್ರಶ್ನಿಸಿತು. ಅಕ್ಟೋಬರ್ 28ರಂದು ನಡೆದ ವಿಚಾರಣೆಯಲ್ಲೂ ಚಾಟಿ ಬೀಸಿದ್ದ ನ್ಯಾಯಪೀಠ, 8 ಲಕ್ಷ ರೂಪಾಯಿ ಮಿತಿಯನ್ನು ಸುಖಾಸುಮ್ಮನೆ ನಿಗದಿ ಮಾಡಲಾಗದು ಎಂದು ಹೇಳಿತ್ತು.
ಸ್ನಾತಕೋತ್ತರ ವೈದ್ಯಕಿಯ ಶಿಕ್ಷಣದಲ್ಲಿ ಒಬಿಸಿ ಮತ್ತು ಇಡಬ್ಲೂಎಸ್ ಮೀಸಲಾತಿ ಪ್ರಶ್ನಿಸಿದ ತಕರಾರು ಅರ್ಜಿ ಇತ್ಯರ್ಥವಾಗದ ಕಾರಣ ನೀಟ್ ಕೌನ್ಸಲಿಂಗ್ಗೆ ತಡೆಯಾಗಿದೆ. ಇನ್ನೊಂದೆಡೆ ಸ್ಥಾನಿಕ ವೈದ್ಯರು ಕೂಡಲೇ ಕೌನ್ಸಲಿಂಗ್ ನಡೆಸಬೇಕು ಎಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬುಧವಾರ ದಿನಾಂಕ ಪ್ರಕಟಿಸದಿದ್ದರೆ ಸರ್ವ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
How did you arrive at Rs 8 lakh as annual income limit for EWS: SC asked Centre
ಇದನ್ನು ಓದಿ:ನೀಟ್ ಪದವಿ ಪ್ರವೇಶ ಪರೀಕ್ಷೆ- 2021 ರದ್ದುಗೊಳಿಸಿ ಹೊಸ ಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ಗೆ ಅರ್ಜಿ
ಇದನ್ನೂ ಓದಿ: ನೀಟ್ ಪಿಜಿ ಕೌನ್ಸಲಿಂಗ್ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ
Discussion about this post