ನವದೆಹಲಿ: ದೇಶದ ವಾಯವ್ಯ ಮತ್ತು ಉತ್ತರ ಭಾಗದ ರಾಜ್ಯಗಳಲ್ಲಿ ಮುಂದಿನ ಮೂರು ದಿನ ಚಳಿ ಅಧಿಕವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ, ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಉತ್ತರಾಖಂಡ, ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್, ಮುಜಾರಾಬಾದ್ಗಳಲ್ಲೂ ಚಳಿ ಹೆಚ್ಚಿರುತ್ತದೆ ಎಂದು ಅದು ತಿಳಿಸಿದೆ. ಉತ್ತರಾಖಂಡ, ಪಂಜಾಬ್, ಹರಿಯಾಣಗಳಲ್ಲಿ ದಟ್ಟ ಮಂಜು ಆವರಿಸಲಿದ್ದು, 1ರಿಂದ 50 ಮೀಟರ್ವರೆಗೆ ಅತಿ ದಟ್ಟ ಮಂಜು, 51ರಿಂದ 200 ಮೀಟರ್ವರೆಗೆ ದಟ್ಟ ಮಂಜು, 201ರಿಂದ 500 ಮೀಟರ್ವರೆಗೆ ಸಾಧಾರಣ ಮಂಜುಕವಿದ ವಾತಾವರಣ ಇರಲಿದೆ. ಶೀತಗಾಳಿಯು ಗಂಟೆಗೆ 15 ಕಿ.ಮೀ. ವೇಗದಲ್ಲಿ ಬೀಸಲಿದ್ದು, ಮುಂದಿನ ಗುರುವಾರದವರೆಗೆ ವಾಯವ್ಯ ಭಾರತದಲ್ಲಿ ಇದು ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆಯ ವರ್ತಾ ಪತ್ರದಲ್ಲಿ ತಿಳಿಸಿದೆ.
ಶ್ರೀನಗರದಲ್ಲಿ ಮೈನಸ್ 6 ಡಿಗ್ರಿ ಸೆಲ್ಷಿಯಸ್ ಕಡಿಮೆ ತಾಪಮಾನ:
ಜಮ್ಮು ಮತ್ತು ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ತಾಪಮಾನದಲ್ಲಿ ಭಾರಿ ಇಳಿಕೆ ಕಂಡುಬರುತ್ತಿದ್ದು, ಶ್ರೀನಗರದಲ್ಲಿ ಈ ಋತುವಿನ ಈವರೆಗಿನ ಅತ್ಯಂತ ಕಡಿಮೆ ತಾಪಮಾನ ಮೈನಸ್ 6.0 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಕೆರೆಕೊಳ್ಳಗಳು ಮತ್ತು ನೀರಿನ ಪೈಪುಗಳು ಚಳಿಯಿಂದ ಮರಗಟ್ಟಿದೆ. ಉತ್ತರ ಭಾಗದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮೈನಸ್ 8.5 ಡಿಗ್ರಿ ಸೆಲ್ಷಿಯಸ್ ದಾಖಲಾಗಿದ್ದು, ಲಡಾಖ್ ದ್ರಾಸ್ ಪಟ್ಟಣದಲ್ಲಿ ಮೈನಸ್ 20.3 ಮತ್ತು ಲೇಹ್ನಲ್ಲಿ ಮೈನಸ್ 15.3 ಡಿಗ್ರಿ ಸೆಲ್ಷಿಯಸ್ ರಾತ್ರಿ ತಾಪಮಾನ ದಾಖಲಾಗಿವೆ ಎಂದು ವರದಿ ತಿಳಿಸಿದೆ.
ರಾಜಸ್ಥಾನದ ಚುರು ಎಂಬಲ್ಲಿ ಮೈನಸ್ 2.6 ಡಿಗ್ರಿ ಸೆಲ್ಷಿಯಸ್, ಸಿಕಾರ್ನಲ್ಲಿ ಮೈನಸ್ 2.5 ಡಿಗ್ರಿ ಸೆಲ್ಷಿಯಸ್ , ಅಮೃತಸರದಲ್ಲಿ ಮೈನಸ್ 0.5 ಡಿಗ್ರಿ ಸೆಲ್ಷಿಯಸ್ , ದೆಹಲಿಯಲ್ಲಿ 4.6 ಡಿಗ್ರಿ ಸೆಲ್ಷಿಯಸ್ ಕಡಿಮೆ ತಾಪಮಾನ ಭಾನುವಾರ ದಾಖಲಾಗಿದೆ.
Northwest-India-No- severe -Cold-3-Days-Imd
ಇದನ್ನು ಓದಿ: Temperatures below zero: ಚಳಿಗಾಳಿಗೆ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಶೂನ್ಯಕ್ಕಿಂತ ಕೆಳಗಿಳಿದ ತಾಪಮಾನ
ಇದನ್ನೂ ಓದಿ: Vatavarana: ಕಾಫಿನಾಡಿನಾದ್ಯಂತ ಮೋಡಕವಿದ ವಾತವರಣ
Discussion about this post