ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ಫ್ಯೂಸ್ ಹೆಚ್ ಡಿ. ಕುಮಾರಸ್ವಾಮಿ ಕಿತ್ತು ಹಾಕೋ ಅವಶ್ಯಕತೆ ಇಲ್ಲ, ಅಲ್ಲಿರೋ ಒಬ್ಬೊಬ್ಬ ನಾಯಕರು ಮತ್ತೊಬ್ಬರ ಫ್ಯೂಸ್ ಕಿತ್ತುಹಾಕಿಕೊಳ್ತಾರೆ ಎಂದು ಬಹಿರಂಗ ಲೇವಡಿ ಮಾಡುವ ಮೂಲಕ ಈಶ್ವರಪ್ಪ ಮತ್ತೆ ಸುದ್ಧಿಯಲ್ಲಿದ್ದಾರೆ.
ಇತ್ತೀಚೆಗಷ್ಟೆ ಹೆಚ್.ಡಿ.ಕೆ ನೀಡಿದ್ದ ಕಾಂಗ್ರೆಸ್ ಪಕ್ಷದ ಫ್ಯೂಸ್ ಕಿತ್ತಿದ್ದೇನೆ ಎಂಬ ಹೇಳಿಕೆಗೆ ಅವರು ಪ್ರತ್ಯುತ್ತರಿಸಿದರು. “ಅಲ್ಲಿರೋ ನಾಲ್ಕೈದು ಜನ ನಾಯಕರು, ಒಬ್ಬರ ಕಂಡ್ರೆ ಮತ್ತೊಬ್ಬರಿಗೆ ಆಗಲ್ಲ, ನೇರ ಗುಂಪುಗಾರಿಕೆ ಇದೆ. ಅದೊಂದು ಸಲ ಬಹಿರಂಗವಾಯ್ತು. ಅದನ್ನ ತಲೆಮೇಲೆ ತಟ್ಟಿ ನಿಲ್ಲಿಸಿದ್ದಾರೆ, ಅದು ಮತ್ತೆ ಯಾವಾಗ ಪ್ರಜ್ವಲಿಸಿ ಸ್ಫೋಟ ಆಗುತ್ತೋ ಗೊತ್ತಿಲ್ಲ” ಎಂದು ಕುಟುಕಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಜನಗಣತಿಯ ಕಾಂತರಾಜು ಕಮಿಟಿ ವರದಿ ಏಕೆ ಬಿಡುಗಡೆ ಮಾಡಲಿಲ್ಲ? ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಸಹ ಏಕೆ ಬಿಡುಗಡೆ ಮಾಡಿಲ್ಲ, ಈಗ ಜಾತಿ ಜನಗಣತಿ ವರದಿ ತರಲಿಲ್ಲ ಬಿಜೆಪಿ ಎಂದು ಗಲಾಟೆ ಮಾಡುವುದು ಒಂದು ಕುತಂತ್ರ ಎಂದಿದ್ದಾರೆ.
ಬಿಜೆಪಿ ೨೦ ಜನ ದಲಿತರನ್ನು ಮಂತ್ರಿ ಮಾಡಿದ್ದಾರೆ, ೨೭ ಜನ ಹಿಂದುಳಿದವರಿಗೆ ಕೇಂದ್ರದ ಮಂತ್ರಿ ಮಾಡಲಾಗಿದೆ, ಈ ಹಿಂದೆ ಯಾವಾಗಲಾದರೂ ಇದು ಮಾಡಿದ್ದರಾ ಎಂದು ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಸಿದ್ದರಾಮಯ್ಯನವರಿಗೆ ಕೆಣಕಿದ್ದಾರೆ.

























Discussion about this post