- ಮೇರಿಕಾ ದೇಶದಲ್ಲಿ ಘಟನೆ
- 14 ವರ್ಷದ ವಿದ್ಯಾರ್ಥಿ ಮೇಲೆ ಅತ್ಯಾಚಾರ
- ಟ್ಯೂಷನ್ ಕೊಡುವ ವೇಳೆ ಘಟನೆ
ಕ್ಯಾಲಿಪೋರ್ನಿಯಾ : ಗುರು ದೇವೋಭವ ಅಂತಾರೆ, ಶಿಕ್ಷಕಿ ತಾಯಿ ತರ ಅಂತಾರೆ. ಇಲ್ಲಿ ಒಬ್ಬ ಶಿಕ್ಷಕಿ ಇಡೀ ಶಿಕ್ಷಕರ ಸಮುದಾಯ ಅಪಚಾರವೆಸಗುವ ಕೆಲಸ ಮಾಡಿದ್ದಾಳೆ. ಟ್ಯೂಷನ್ಗೆ ಬರುತ್ತಿದ್ದ 14 ವರ್ಷದ ಬಾಲಕನ ಮೇಲೆ ಟ್ಯೂಷನ್ ಮಾಡೋ ಸಮಯದಲ್ಲಿ ಮೂರು ಬಾರಿ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿದೆ.
ಇನ್ನೆಲ್ಲೂ ಅಲ್ಲ, ಅಮೇರಿಕಾದ ಕ್ಯಾಲಿಪೋರ್ನಿಯಾದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮೌಂಟೇನ್ ವ್ಯೂ ಇಂಡಿಪೆಂಡೆಂಟ್ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಕ್ರಿಸ್ಟಲ್ ಜಾಕ್ಸನ್ (39)ವಿದ್ಯಾರ್ಥಿ ಮೇಲೆ ಅತ್ಯಾಚಾರವೆಸಗಿರುವ ಶಿಕ್ಷಕಿ.
ಶಿಕ್ಷಕಿಯಾಗಿದ್ದ ಈ ಕ್ರಿಸ್ಟಲ್ ಶಾಲಾ ಅವಧಿಯ ನಂತರ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಳು. ಟ್ಯೂಷನ್ಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಕಣ್ಣು ಹಾಕಿದ್ದ ಕ್ರಿಸ್ಟಲ್, ವಿದ್ಯಾರ್ಥಿಯ ಮೇಲೆ ೩ ಬಾರಿ ಅತ್ಯಾಚಾರವೆಸಗಿದ್ದಾಳೆ.
ವಿದ್ಯಾರ್ಥಿ ನಡೆದ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆಯ ವೇಳೆಯಲ್ಲಿ ಹಲವು ವಿಚಾರಗಳನ್ನು ಆರೋಪಿ ಬಾಯ್ಬಿಟ್ಟಿದ್ದಾಳೆ. ಇದೀಗ ಶಿಕ್ಷಕಿ ವಿರುದ್ದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಸಹ ವರದಿಯಾಗಿದೆ.
Discussion about this post