ಚಿಕ್ಕಮಗಳೂರು: ನಾಡಿನಲ್ಲಿ ರೈತರ ಮಗನಾಗಿ ಹುಟ್ಟಿ ರಷ್ಯಾವರೆಗೆ ಪ್ರವಾಸ ಹೋಗಿ ಅಧ್ಯಯನ ನಡೆಸಿ ಬಂದಿದ್ದ, ನೊಂದವರ ಪರ ದನಿಯಾಗಿ ಮಿಡಿದಿದ್ದ, ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಬಕ್ಕುಡಿ ಗ್ರಾಮದ ದಿ. ಕಾಳೇಗೌಡರ ಪತ್ನಿಯಾದ ಇವರು 93 ವರ್ಷಗಳ ಸುದೀರ್ಘ ಜೀವನ ನಡೆಸಿದ್ದರು.
ಬಿ.ಕೆ. ಸುಂದರೇಶ್ ಅವರ ತಾಯಿ ಕಾವೇರಮ್ಮನವರು ವಯೋಸಹಜ ಕಾರಣದಿಂದ ದೈವಾಧೀನರಾಗಿದ್ದಾರೆ. ಬಕ್ಕಡಿ ಗ್ರಾಮದ ಸ್ವಗೃಹದ ಬಳಿ ಅಂತ್ಯಕ್ರಿಯೆ ಏರ್ಪಡಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ. ಅಂದು ಮಗ ಸುಂದರೇಶ್ ಇಲ್ಲವಾದಾಗ ಸೊಸೆ ರಾಧಾ ಸುಂದರೇಶ್ ಅವರನ್ನೇ ಮಗ ಎಂದು ತಿಳಿಯುತ್ತೇನೆ ಎನ್ನುತ್ತಾ ದಿಟ್ಟತನ ಮೆರೆದಿದ್ದರು.
ನೂರಾರು ಚಿಂತಕರು, ಹೋರಾಟಗಾರರು, ನೊಂದವರು ಸುಂದರೇಶ್ ಜೊತೆಗೆ ಬಕ್ಕಡಿಯ ಮನೆಗೆ ಹೋದಾಗ ಅವರೆಲ್ಲರಿಗೂ ಅಕ್ಕರೆಯಿಂದ ಅತಿಥಿ ಸತ್ಕಾರ ಮಾಡುತ್ತಿದ್ದ ಹೆಗ್ಗಳಿಕೆ ಇವರದು. ನಾಡಿಗೆ ಕ್ರಾಂತಿಕಾರ ಮಗನನ್ನು ನೀಡಿದ ತಾಯಿಯ ಅಗಲಿಕೆಗೆ ಹಲವಾರು ಮಂದಿ ನಮನ ಸಲ್ಲಿಸಿದ್ದಾರೆ.

























Discussion about this post