ಚಿಕ್ಕಮಗಳೂರು: ರೈತರು ತಮ್ಮ ಜಮೀನುಗಳಲ್ಲಿ ಮರ ಆಧಾರಿತ ಕೃಷಿಯನ್ನು ಅಳವಡಿಸಿಕೊಂಡು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಕಾವೇರಿ ಕೂಗು ಎಂಬ ಅಧಿಕೃತವಾಗಿ ಆಪ್‌ನ್ನು ಬಿಡುಗಡೆಗೊಳಿಸಲಾಯಿತು.
ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಈಶಾ ಪೌಂಡೇಷನ್ ವತಿಯಿಂದ ನದಿಪುನರುಜ್ಜೀವನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾವೇರಿ ಕೂಗಿನಿಂದ ’ಸ್ಟೇಟ್ ಆಫ್ ದಿ ಆರ್ಟ್’ ಎಂಬ ಅಧಿಕೃತ ಆಪ್‌ನ್ನು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ ಬಿಡುಗಡೆಗೊಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇಶಾ ಫೌಂಡೇಷನ್ ಕಾವೇರಿ ಕೂಗು ಎನ್ನುವ ಹೆಸರಿನಲ್ಲಿ ಪರಿಸರದ ಉಳಿವಿಗಾಗಿ ಕಾವೇರಿ ನದಿ ತಪ್ಪಲಿನ ಪ್ರದೇಶಗಳಲ್ಲಿ ಮರಗಿಡಗಳನ್ನು ಬೆಳೆಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾವೇರಿ ಕೂಗು ಎಂಬ ಬೃಹತ್ ಅಭಿಯಾನ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿಯಾಗುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಹೆಚ್ಚಿನ ಪ್ರಮಾಣದಲ್ಲಿ ರೈತ ಸಮುದಾಯಕ್ಕೆ ಅನುಕೂಲವಾಗುವಂತೆ ಕಾವೇರಿಕೂಗು ಎಂಬ ಆಪ್ ತಂತ್ರಾಶ ಪರಿಚಯಿಸುತ್ತಿದ್ದು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಮರ ಆಧಾರಿತ ಕೃಷಿಗೆ ಇದು ಮಹತ್ವದ ಹೆಜ್ಜೆಯಾಗಲಿದೆ. ಮಣ್ಣಿನಲ್ಲಿರುವ ಪೋಷಕಾಂಶಗಳು, ಅಂತರ್ಜಲ, ಮಣ್ಣಿನ ವಿಧಕ್ಕೆ ಪೂರಕವಾಗುವಂತೆ ಯಾವ ಗಿಡಗಳನ್ನು ಬೆಳೆಯಬೇಕು ಎಂಬುದರ ಬಗ್ಗೆ ಸಮಗ್ರ ಮಾಹಿತಿ ಸಿಗಲಿದೆ ಎಂದರು.
ಜಿಲ್ಲೆಯ ವಿವಿಧ ಗ್ರಾ.ಪಂಗಳಲ್ಲಿ ಕಾವೇರಿ ಕೂಗಿನ ೮೯೦ ಮರಮಿತ್ರರು ಕಾರ್ಯನಿರ್ವಹಿಸುತ್ತಿದ್ದ್ದು ರೈತರ ಬೇಡಿಕೆ ಆಧಾರಿಸಿ ಮೊಬೈಲ್ ತಂತ್ರಾಂಶದ ಮೂಲಕ ನೊಂದಣಿ ಮಾಡಿಕೊಳ್ಳಲಿದ್ದಾರೆ. ಸಮೀಪದಲ್ಲಿರುವ ಮರಮಿತ್ರರಿಂದ ಸಲಹೆ ಸೂಚನೆ ಪಡೆದುಕೊಳ್ಳಲು ಈ ಆಪ್ ಅನುಕೂಲವಾಗಲಿದೆ. ಯಾವ ಮಣ್ಣಿನಲ್ಲಿ ಯಾವ ಗಿಡಗಳನ್ನು ಬೆಳೆಸಬೇಕು, ಯಾವ ಪೋಷಕಾಂಶಯುತ ಗೊಬ್ಬರ ನೀಡಬೇಕು ಎಂಬೆಲ್ಲ ವಿಧಾನಗಳ ಬಗ್ಗೆ ತಿಳಿಸಲಿದ್ದಾರೆ ಎಂದರು.
ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವಿವಿಧ ಪ್ರಬೇಧದಿಂದ ಕೂಡಿದ ಗಿಡಮರಗಳಿವೆ. ಆದರೂ ರೈತರು ತಮ್ಮ ಜಮೀನುಗಳಲ್ಲಿ ಯಾವ ಮಣ್ಣಿಗೆ ಸೂಕ್ತವಾದ ಗಿಡಗಳನ್ನು ಬೆಳೆಯಬೇಕು ಎಂಬುದರ ಬಗ್ಗೆ ಈಶಾ ಪೌಂಡೇಷನ್‌ನ ಮರಮಿತ್ರರು ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಮಣ್ಣಿಗೆ ಪೂರಕವಾದ ಗಿಡಮರಗಳನ್ನು ಬೆಳೆಯಲು, ಜತೆಗೆ ರೈತರಿಗೆ ಬೇಕಾಗುವ ಸಸಿಗಳ ನೊಂದಣಿ. ಪೋಷಣೆ ಕುರಿತು ವಿಷಯಗಳನ್ನು ಆಪ್ ಮೂಲಕ ಅಪ್‌ಲೋಡ್ ಮಾಡಬಹುದು ಇದರಿಂದಾಗಿ ರೈತರಿಗೆ ಆದಾಯದೊಂದಿಗೆ ಪರಿಸರ ಸಂರಕ್ಷಣೆಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು ೯ ಲಕ್ಷ ಸಸಿಗಳನ್ನು ನೆಡಲಾಗಿದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಗಿಡಮರಗಳನ್ನು ಬೆಳೆಸುವ ಬಗ್ಗೆ ಜಾಗೃತಿ ಅಭಿಯಾನ ಮೂಡಿಸಬೇಕು, ಪ್ರತಿ ವಿದ್ಯಾರ್ಥಿಗೆ ಕನಿಷ್ಟ ಮೂರರಂತೆ ಗಿಡಗಳನ್ನು ನೀಡಿ ಬೆಳೆಸಿ ಪೋಷಿಸುವಂತೆ ತಿಳಿಸಬೇಕು, ಈ ಮೂಲಕ ಪರಿಸರ ಉಳಿವಿಗೆ ಸಂಕಲ್ಪ ಮಾಡುವಂತೆ ಸಲಹೆ ನೀಡಿದರು.
ವೈಲ್ಡ್‌ಲೈಪ್‌ನ ಅಧಿಕಾರಿ ವೀರೇಶ್ ಮಾತನಾಡಿ ಅರಣ್ಯ ಮತ್ತು ಪರಿಸರ ಮಾನವನ ಬದುಕಿಗೆ ತುಂಬಾ ಅಗತ್ಯ. ಇತ್ತೀಚಿನ ದಿನಗಳಲ್ಲಿ ಮಾನವನ ದುರಾಸೆಯಿಂದಾಗಿ ಕಾಡುಗಳ ನಾಶವಾಗುತ್ತಿದ್ದು ಇದು ಮುಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದರು.
ಕಾವೇರಿ ಕೂಗು ಅಭಿಯಾನವು ಮರ ಆಧಾರಿತ ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು ಇದು ರೈತರಿಗೆ ಹೆಚ್ಚು ವರದಾನವಾಗಲಿದೆ. ಪರಿಸರ ಉಳಿಯುವ ಮೂಲಕ ಜೀವವೈವಿದ್ಯತೆ ಹೆಚ್ಚಲಿದೆ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವೇದಮೂರ್ತಿ, ಕಾಲೇಜು ಪ್ರಾಧ್ಯಪಕರಾದ ಹೆಚ್.ಎಸ್.ಸುಂದರೇಶ್, ಈಶಾಪೌಂಡೇಷನ್‌ನ ಸ್ವಯಂ ಸೇವಕಿ ವೈಶಾಲಿ, ನಿಹಾರಿಕಾ, ಪೂರ್ಣಿಮಾ, ಅಶ್ವಿನ್, ಆಕಾಶ್ ಸೇರಿದಂತೆ ಮತ್ತಿತರರು ಇದ್ದರು.

























Discussion about this post