ಚಿಕ್ಕಮಗಳೂರು: ಕಾಡಾನೆಗಳು ಮೂಡಿಗೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಬೆನ್ನಲ್ಲೇ ಕುಂದೂರಿನ ಅರಣ್ಯ ಪ್ರದೇಶದಲ್ಲಿ ಕಾಡಾನೆಯೊಂದು ಒಮ್ನಿ ಗಾಡಿಗೆ ಧಾಳಿ ನಡೆಸಿದೆ.
ಇಂದು ಬೆಳಗಿನ ಜಾವ ಅಲ್ದೂರು ವಲಯ ವ್ಯಾಪ್ತಿಯಲ್ಲಿ ಬರುವ ಕುಂದೂರು ಅರಣ್ಯ ದಲ್ಲಿ ಒಮ್ನಿಯಲ್ಲಿ ಸಂಚರಿಸುತ್ತಿದ್ದ ವೇಳೆ ವಾಹನದಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು ಓರ್ವನ ಸ್ಥಿತಿ ಚಿಂತಾಜನಕವಾಗಿದೆ.
ತೀವ್ರ ಗಾಯಗೊಂಡ ಚಂದ್ರೇಗೌಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಚಂದ್ರೇಗೌಡರ ಪತ್ನಿ ಮೋಹಿನಿ, ಮಗ ಅವನೀಶ್ ಮತ್ತು ರಾಜಮ್ಮನವರಿಗೆ ಗಾಯವಾಗಿದ್ದು ಮೂಡಿಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೋಳ್ ದಾಳ್ ಗ್ರಾಮದವರಾದ ಇವರುಗಳು ಹೊರನಾಡಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ಸ್ಥಳಕ್ಕೆ ಆಲ್ದೂರು ವಲಯ ಅರಣಾಧಿಕಾರಿ ಸಿಬ್ಬಂದಿ ತೆರಳಿದ್ದಾರೆ. ಘಟನೆ ವಿವರ ತಿಳಿದು ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

























Discussion about this post