ಚಿಕ್ಕಮಗಳೂರು: ಬಿಲ್ ಕಲೆಕ್ಟರ್ ಹರ್ಷ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದು ತನಿಖೆ ವೇಳೆ ಸಾಬೀತಾಗಿದ್ದು, ಆತನೇ ಮಾಡಿದ್ದೆಂದು ಒಪ್ಪಿಕೊಂಡ ಹಿನ್ನೇಲೆ, ಆತನ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಅದಕ್ಕೂ ಮೊದಲು ಕೊಪ್ಪ ಪಟ್ಟಣ ಪಮ್ಚಾಯಿತಿ ಮುಖ್ಯಾಧಿಕಾರಿ ಸುಬ್ಬಣ್ಣ ಶೆಟ್ಟಿ ಅವರ ಮೇಲೆ ಆರೋಪವಿದ್ದು, ಅದು ತನಿಖೆ ವೇಳೆ ಸತ್ಯವಲ್ಲವೆಂದು ತಿಳಿದುಬಂದಿತ್ತು. ಪೊಲೀಸರು ಆರೋಪಿಯನ್ನು ಅಮಾನತಿನಲ್ಲಿಟ್ಟು ಕೊಲಂಕುಶವಾಗಿ ಇನ್ನಷ್ಟು ತನಿಖೆ ನಡೆಸುವ ಸಲುವಾಗಿ ಅವಕಾಶವನ್ನು ಕೇಳಿಕೊಂಡಿದ್ದು, ಜಿಲ್ಲಾಧಿಕಾರಿಗಳಾದ ಕೆ.ಎನ್. ರಮೇಶ್ ಅವರು ಆರೋಪಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸಂಪೂರ್ಣ ತನಿಖೆಯ ನಂತರವಷ್ಟೇ ಕಹಾನಿಯ ಅಸಲಿ ಕತೆ ಹೊರಗೆ ಬರಲಿದೆ.

























Discussion about this post