ನವದೆಹಲಿ: ಈ ವರ್ಷಾಂತ್ಯದಲ್ಲಿ ಖಾದ್ಯತೈಲಗಳ ಬೆಲೆ ಇಳಿಮುಖ ಹೊಂದಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯತೈಲಗಳ ಬೆಲೆ ಶೇ. ೬೪ ಹೆಚ್ಚಾಗಿದೆ, ಹೀಗಾಗಿ ಏಕಾಏಕಿ ಬೆಲೆ ಇಳಿಮುಖವಾಗದು. ಹಂತ ಹಂತವಾಗಿ ಕಡಿಮೆ ಆಗುವುದು ಎಂದು ಭರವಸೆ ನೀಡಿದ್ದಾರೆ.
ಈ ಮಾನ್ಸೂನ್ ಬೆಳೆಗಳಲ್ಲಿ ಬೆಳೆದ ಎಣ್ಣೆ ಕಾಳುಗಳು ಈ ವರ್ಷಾಂತ್ಯದಲ್ಲಿ ಮಾರುಕಟ್ಟೆಯಲ್ಲಿ ಬರುವುದರಿಂದ, ದೇಶದಲ್ಲಿ ಲಭ್ಯವಾಗುವ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗುವುದು ಎಂದವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

























Discussion about this post