- ಪೊಲೀಸ್ ಆಗಿದ್ದ ಗರ್ಭಿಣಿ ಹತ್ಯೆ
- ಮನೆಗೆ ನುಗ್ಗಿ ಮನೆಯವರ ಎದುರೇ ದುಷ್ಕೃತ್ಯ
- ಅಫ್ಘನ್ ಹೆಣ್ಣು ಮಕ್ಕಳಿಗೆ ಗುಂಡೇಟು, ಧರ್ಮದೇಟೇ ಗತಿಯೇ?
ಕಾಬೂಲ್ : ತಾಲಿಬಾನಿಗಳು ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ನಂತರದಲ್ಲಿ ಉಗ್ರರು ಜನರಿಗೆ ನಾನಾ ತರಹದ ಹಿಂಸೆ ನೀಡುತ್ತಿದ್ದಾರೆ ಎಂಬುದು ಮತ್ತೆ ಮತ್ತೆ ಸಾಬೀತಾಗ್ತಾನೇ ಇದೆ.
ಇದೀಗ ಮತ್ತೆ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದು 8 ತಿಂಗಳ ಗರ್ಭಿಣಿಯಾಗಿದ್ದ ಮಹಿಳಾ ಪೊಲೀಸ್ ಓರ್ವಳನ್ನು ಕುಟುಂಬದವರ ಕಣ್ಣೆದುರಲ್ಲೇ ಅಮಾನವೀಯವಾಗಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಬಾನು ನೆಗರ್ ಮೃತಪಟ್ಟ ಮಹಿಳಾ ಪೊಲೀಸ್ ಎಂದು ಗುರುತಿಸಲಾಗಿದೆ. ಆಫ್ಘಾನಿಸ್ತಾನದ ಘೋರ್ ಪ್ರಾಂತ್ಯದ ರಾಜಧಾನಿ ಫಿರೋಜ್ ಕೋಹ್ ನ ನಿವಾಸದದಲ್ಲಿದ್ದ ಬಾನು ನೆಗರ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುಟುಂಬದವರ ಎದುರಲ್ಲೇ ತಾಲಿಬಾನಿಗಳು ಈ ಕ್ರೌರ್ಯ ಮೆರೆದಿದ್ದಾರೆ.
ತಾಲಿಬಾನಿಗಳು ಗನ್ ಹಿಡಿದು ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿದ್ದಾರೆ. ಬಾನು ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಇದೇ ರೀತಿ ಹಲವು ಕಡೆಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಹಿಂಸಾಚಾರ ನಡೆಸುತ್ತಿರುವ ತಾಲಿಬಾನ್ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ.
ಮಹಿಳೆಯರ ಮೇಲೆ ಮಕ್ಕಳ ಮೇಲೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ತಾನೆ ಇದೆ.
Discussion about this post