ಚಿಕ್ಕಮಗಳೂರು: ನಿರಂತರ ಮಳೆಯಿಂದಾಗಿ ಚಾರ್ಮುಡಿ ಘಾಟಿಯ ೭ನೇ ತಿರುವಿನಲ್ಲಿ ಸಣ್ಣ ಪ್ರಮಾಣದ ಭೂಕುಸಿತ ಉಂಟಾಗಿದೆ.
ಚಾರ್ಮುಡಿಯಲ್ಲಿ ನಿರಂತರ ಮೂರ್ನಾಲ್ಕು ದಿವಸದ ಮಳೆ ಇದಕ್ಕೆ ಕಾರಣ ಇರಬಹುದು. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಬರುವ ೭ನೇ ತಿರುವಿನಲ್ಲಿ ತುಸು ದೊಡ್ಡ ಬಂಡೆಯೊಂದು ರಸ್ತೆಗೆ ಉರುಳಿ ಬಂದಿದೆ.
ರಸ್ತೆ ಸಂಚಾರಕ್ಕೆ ಯಾವುದೇ ಆತಂಕ, ಅಡ್ಡಿ ಇಲ್ಲದೇ ಇದ್ದರೂ ಸಹ, ಮಂಜು ಕವಿದ ಮಳೆ ವಾತಾವರಣ, ರಾತ್ರಿವೇಳೆಯ ಪ್ರವಾಸಿಗರಲ್ಲಿ ಆತಂಕ ಮೂಡಿಸುತ್ತದೆ. ಇದರಿಂದ ಸಾರ್ವಜನಿಕರು ಬಂಡೆ ತೆರವಿಗೆ ಒತ್ತಾಯಿಸಿದ್ದಾರೆ.

























Discussion about this post