ಚಿಕ್ಕಮಗಳೂರು : ವಿದ್ಯುತ್ ತಂತಿ ಕಾಲಿಗೆ ಸ್ಪರ್ಶಿಸಿ ಆನೆಯೊಂದು ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣವಾದ ಘಟನೆ ಭದ್ರಾ ಆಭಯಾರಣ್ಯದ ತಣಿಗೆ ಬೈಲು ವ್ಯಾಪ್ತಿಯ ನಂದಿಬಟ್ಟಲು ಗ್ರಾಮದಲ್ಲಿ ನಡೆದಿದೆ.
ಪರಮೇಶ್ ಎಂಬುವವರ ಜೋಳದ ಜಮೀನಿನಲ್ಲಿ ಆನೆ ಮೃತಪಟ್ಟಿದೆ. ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಹಾಕಿದ್ದ ಅಕ್ರಮ ವಿದ್ಯುತ್ ತಂತಿ ತಗುಲಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ನವೀನ್, ವನ್ಯಜೀವಿ ಪರಿಪಾಲಕ ವಿರೇಶ್, ಭದ್ರಾ ವನ್ಯಜೀವಿ ಪಶುವೈದ್ಯಾಧಿಕಾರಿ ಯಶಸ್, ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ಆನೆಯ ಮರಣೋತ್ತರ ಪರೀಕ್ಷೆ ಕ್ರಮ ಕೈಗೊಳ್ಳಲಾಗಿದೆ.
Salag dies after touching power line

























Discussion about this post