ಯುಎಇ (ಕನ್ನಡನಾಡಿ ಸುದ್ದಿಜಾಲ): ಎಮಿರೇಟ್ಸ್ ವಿಮಾನ ಯಾನ ಸಂಸ್ಥೆಯ ಯೂನಿಫಾರಂ ನಲ್ಲಿರುವ ಮಹಿಳಯೊಬ್ಬರು ಬುರ್ಜ್ ಖಲೀಫಾದ ಮೇಲೆ ಧೈರ್ಯವಾಗಿ ನಿಂತು ಸಂಸ್ಥೆಯ ಜಾಹಿರಾತು ಪ್ರಚಾರ ನೀಡಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ. ಸದಾ ಜಗತ್ತನ್ನು ತನ್ನತ್ತ ಆಕರ್ಷಿಸುವ ಕೆಲಸ ಮಾಡುವ ದುಬೈನಲ್ಲಿ ಇಂಥದೊಂದು ಪ್ರಯತ್ನ ನಡೆದಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನ ಅತಿದೊಡ್ಡ ವಿಮಾನಯಾನ ಸಂಸ್ಥೆ ಎಮಿರೇಟ್ಸ್, ದುಬೈನ ಬುರ್ಜ್ ಖಲೀಫಾದ ಶೂಟ್ ಮಾಡಲಾದ ಈ ವಿಡಿಯೋ ನೋಡಿದರೆ ಒಮ್ಮೇಲೆ ನಿಮಗೂ ಷಾಕ್ ಆಗೋದಂತು ಗ್ಯಾರೆಂಟಿ.
ಬುರ್ಜ್ ಖಲೀಪಾದ ತುತ್ತತುದಿಗೆ ಏರಿ ನಿಲ್ಲುವ ಸಾಹಸ ಮಾಡಿದ ಮಹಿಳೆ, ವೃತ್ತಿಪರ ಸ್ಕೈಡೈವಿಂಗ್ ಬೋಧಕರಾದ ನಿಕೋಲ್ ಸ್ಮಿತ್ ಲುಡ್ವಿಕ್. ಈಕೆ ಓರ್ವ ಸಾಹಸಿ ಕೂಡಾ ಆಗಿದ್ದಾರೆ.
ಅಷ್ಟು ಎತ್ತರದ ಗೋಪುರದ ಮೇಲೆ ನಿಂತ ಅವರು, ನಗುತ್ತ..ನಾನೀಗ ಜಗತ್ತಿಗಿಂತ ಎತ್ತರದಲ್ಲಿದ್ದೇನೆ ಎನ್ನುತಿದ್ದಾರೆ. ಇಷ್ಟುದಿನ ಯುಕೆ (ಇಂಗ್ಲೆಂಡ್)ಯ ಕೆಂಪು ಲಿಸ್ಟ್ನಲ್ಲಿದ್ದ ಯುಎಇಯನ್ನು ಇತ್ತೀಚೆಗಷ್ಟೇ ಯುಕೆ ಅಂಬರ್ ಲಿಸ್ಟ್ಗೆ ಸೇರ್ಪಡೆಗೊಳಿಸಿದೆ. ಅದನ್ನು ಜಗತ್ತಿಗೆ ತಿಳಿಸಿ, ನೀವೂ ಎಮಿರೇಟ್ಸ್ನಲ್ಲಿ ಪ್ರಯಾಣಿಸಿ ಎಂದು ಹೇಳುವ ಜಾಹೀರಾತು ಇದು.
ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ 828 ಮೀಟರ್ ಎತ್ತರವಾಗಿದೆ. ತುತ್ತ ತುದಿಯಲ್ಲಿ ಕೇವಲ 1.2 ಮೀಟರ್ ನಷ್ಟು ಮಾತ್ರ ಜಾಗವಿದ್ದು ಇಲ್ಲಿ ಗಾಳಿಯ ಒತ್ತಡಕ್ಕೆ ಹೊಂದಿಕೊಂಡು ನಿಲ್ಲಬೇಕಾಗಿದೆ. ಹಾಗಾಗಿ ಕೆಲವು ದಿನಗಳ ತಾಲೀಮು ನಡೆಸಲಾಗಿದೆ.
ನಿಕೋಲ್ ತಮ್ಮ ಜೀವನದಲ್ಲೇ ಇದೊಂದು ಅಧ್ಬುತ, ಆಶ್ಚರ್ಯಕರ ಸಾಹಸ ಎಂದು ಬಣ್ಣಿಸಿದ್ದಾರೆ.
Discussion about this post