ಫ್ರೆಂಚ್ ಗಯಾನಾ: ಜಗತ್ತಿನಲ್ಲೇ ಅತಿ ಬಲಶಾಲಿಯಾದ ಬಾಹ್ಯಾಕಾಶ ಟೆಲಿಸ್ಕೋಪ್ ಸ್ಯಾಟಲೈಟ್ ಅನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಫ್ರೆಂಚ್ ಗಯಾನಾದಿಂದ ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಭೂಮಿಯಿಂದ 9.30 ಲಕ್ಷ ಮೈಲಿ ಎತ್ತರ ಕಕ್ಷೆಗೆ ಹೋಗಲು ಒಂದು ತಿಂಗಳು ಪಯಣಿಸಲಿರುವ ರಾಕೆಟ್, ನಂತರ ಟೆಲಿಸ್ಕೋಪ್ ಅನ್ನು ಅಲ್ಲಿ ಸ್ಥಾಪಿಸಲಿದೆ.
ಅಂದಾಜು 75 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗನ್ನು ಯುರೋಪ್ ಹಾಗೂ ಕೆನಡಾದ ಬಾಹ್ಯಾಕಾಶ ಸಂಸ್ಥೆಗಳ ಜತೆಗೂಡಿ ನಾಸಾ ರೂಪಿಸಿದೆ. ಭೂಮಿ ಮೇಲೆ ಹಾರಾಡುತ್ತಿರುವ ಖೇಚರಗಳನ್ನು ಟೆಲಿಸ್ಕೋಪ್ ನಿಖರವಾಗಿ ಗುರುತಿಸುತ್ತದೆ. 1990ರಲ್ಲಿ ಉಡಾವಣೆ ಮಾಡಲಾದ ಹಬಲ್ ಟೆಲಿಸ್ಕೋಪ್ಗಿಂತ ಇದು 100 ಪಟ್ಟು ಬಲಶಾಲಿ ಆಗಿದೆ. 6 ತಿಂಗಳ ಹಿಂದೆ ಹಬಲ್ ತಾಂತ್ರಿಕ ಕಾರಣದಿಂದ ಕೆಲಸ ಮಾಡುತ್ತಿಲ್ಲ.
ಭೂಮಿಯ ಉಗಮಿಸಿದ ವೇಳೆ ಇದ್ದ ಆಕಾಂಶಗಂಗೆ, ಉಲ್ಕೆ, ಗ್ರಹಗಳ ಕುರಿತು ಅಧ್ಯಯನ ನಡೆಸುವುದು ಈ ಟೆಲೆಸ್ಕೋಪ್ನ ಪ್ರಮುಖ ಉದ್ದೇಶ ಇದು ಬ್ರಹ್ಮಾಂಡದ ಸೃಷ್ಟಿಯ ಕೌತುಕವನ್ನು ಬಹಿರಂಗಪಡಿಸುವ ನಿರೀಕ್ಷೆ ಇದೆ. ಅನ್ಯಗ್ರಹ ಜೀವಿಗಳ ಅಧ್ಯಯನಕ್ಕೂ ಟೆಲಿಸ್ಕೋಪ್ ನೆರವು ನೀಡಲಿದೆ. ಈ ಟೆಲೆಸ್ಕೋಪ್ಗೆ ನಾಸಾದ ಎರಡನೇ ಮುಖ್ಯಸ್ಥರಾಗಿದ್ದ ಜೇಮ್ಸ್ ವೆಬ್ ಅವರ ಹೆಸರು ಇಡಲಾಗಿದೆ.
James Webb Space Telescope Launched By Nasa
ಇದನ್ನು ಓದಿ: ಗುರುವಿನ ಕ್ಷುದ್ರಗ್ರಹ ಅನ್ವೇಷಣೆಗೆ ನಾಸಾದ ಗಗನನೌಕೆ
ಇದನ್ನೂ ಓದಿ: ಚಂದ್ರನಲ್ಲಿ ಕ್ಯೂಬ್ ಆಕಾರದ ನಿಗೂಢ ಮನೆ ಪತ್ತೆ ಮಾಡಿದ ಚೀನಾದ ರೋವರ್
Discussion about this post