ಹೈದರಾಬಾದ್: ಗರ್ಭಿಣಿಯರು ಸಾರ್ವಜನಿಕ ಸಂಚಾರಿ ವಾಹನದಲ್ಲಿ ಪ್ರಸವಿಸುವುದು ಹೊಸದೇನೂ ಅಲ್ಲ. ವಿಮಾನದಲ್ಲಿ ಈ ರೀತಿ ಪ್ರಸವದಲ್ಲಿ ಜನಿಸಿದ ಮಗುವಿಗೆ ಆಜನ್ಮವಾಗಿ ಉಚಿತ ಸಂಚಾರದ ಕೊಡುಗೆ ನೀಡಲಾಗುತ್ತದೆ. ಇದೇ ಮಾದರಿಯನ್ನು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್ಆರ್ಟಿಸಿ) ಕೂಡ ಅನುಸರಿಸಿದೆ. ಬಸ್ನಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ಆಜನ್ಮ ಉಚಿತ ಪಯಣದ ಪಾಸ್ ಕೊಡುಗೆಯನ್ನು ಟಿಎಸ್ಆರ್ಟಿಸಿ ನೀಡಿದೆ.
ಮೆಹಬೂಬನಗರ ಜಿಲ್ಲೆಯ ಪೆದ್ದಕೋತಪಲ್ಲಿ ಬಳಿ (ನಾಗರಕರ್ನೂಲ್ ಡಿಪೊ) ಬಸ್ವೊಂದರಲ್ಲಿ ನವೆಂಬರ್ 30ರಂದು ಹೆಣ್ಣುಮಗುವೊಂದು ಜನಿಸಿತು. ಇನ್ನೊಂದು ಮಗು ಸಿದ್ದಿಪೇಟ್ ಬಳಿ (ಆಸಿಫಾಬಾದ್ ಡಿಪೊ) ಬಸ್ನಲ್ಲಿ ಡಿಸೆಂಬರ್ 7ರಂದು ಜನಿಸಿದೆ.
ಈ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯರಿಗೆ ಪ್ರಸವದ ಸಮಯವೇನೂ ಆಗಿರಲಿಲ್ಲ. ಆದರೂ ಇದ್ದಕ್ಕಿದ್ದಂತೆ ಪ್ರಸವ ವೇದನೆ ಕಾಣಿಸಿಕೊಂಡಿತು. ಬಸ್ನಲ್ಲಿದ್ದ ಮಹಿಳೆಯರ ಸಹಕಾರದಿಂದ ಸುಖ ಪ್ರಸವ ಆಯಿತು. ಬಸ್ ಚಾಲಕ ಮತ್ತು ನಿರ್ವಾಹಕರು ಪ್ರಸವಕ್ಕೆ ಅಗತ್ಯವಾದ ನೆರವನ್ನು ನೀಡಿದರು. ನಂತರ ಸಮೀಪದ ಅಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಟಿಎಸ್ಆರ್ಟಿಸಿ ತಿಳಿಸಿದೆ.
ಎರಡೂ ಹೆಣ್ಣುಮಕ್ಕಳು ಮತ್ತು ಬಾಣಂತಿಯರು ಆರೋಗ್ಯವಾಗಿದ್ದು, ಮಕ್ಕಳನ್ನು ಹೆತ್ತ ತಾಯಿ ಮತ್ತು ಆಕೆಯ ಪತಿಗೆ ಟಿಎಸ್ಆರ್ಟಿಸಿ ಅಭಿನಂದನೆ ತಿಳಿಸಿದೆ ಉಚಿತ ಪಾಸ್ ಅನ್ನು ಶೀಘ್ರದಲ್ಲೇ ವಿತರಿಸುವುದಾಗಿ ಹೇಳಿದೆ.
Two Baby Girls Born Aboard Telangana Buses Get Free Lifetime Passes
ಇದನ್ನು ಓದಿ: ಕಂದಮ್ಮಗಳಿಗೆ ಮುತುವರ್ಜಿಯ ಅಗತ್ಯತೆ; ಅವಧಿ ಪೂರ್ವ ಶಿಶುಗಳ ಆರೈಕೆಗೆ ಇಲ್ಲಿದೆ ಸಲಹೆ
ಇದನ್ನೂ ಓದಿ: ಹೆರಿಗೆ ಆಸ್ಪತ್ರೆಯಲ್ಲಿ ಬೆಂಕಿ: ಬಾಣಂತಿ-ಮಗುವಿಗೂ ರಕ್ಷಣೆಗೆ ಒದ್ದಾಟ
Discussion about this post