ಚಿಕ್ಕಮಗಳೂರು: ನಗರದಲ್ಲಿ ಅನಧಿಕೃತವಾಗಿ ಜಾಗವನ್ನು ಒತ್ತುವರಿ ಮಾಡಿ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿರುವ ಜಾಗದಲ್ಲಿ ಮನೆ ಕಾಂಪೌಂಡ್ ಕಟ್ಟಡ, ಶೆಡ್ ನಿರ್ಮಾಣ ಮಾಡಿದ್ದ ದೂರಿನ ಹಿನ್ನಲೆ ಶುಕ್ರವಾರ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆಯ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ತೆರವುಗೊಳಿಸಿದರು.
ನಗರದ ರಾಮನಹಳ್ಳಿಯ ಹನುಮಂತನಗರ ವಾರ್ಡ್ನಲ್ಲಿ ಅನಧೀಕೃತವಾಗಿ ಜಾಗ ಒತ್ತುವರಿ ಮಾಡಿ ನಿರ್ಮಾಣ ಮಾಡಿದ್ದ ೪ ಶೆಡ್ ಹಾಗೂ ೩ ಕಾಂಪೌಂಡ್ ಕಟ್ಟಡಗಳನ್ನು ತೆರವುಗೊಳಿಸಿ ಅನಧಿಕೃತವಾಗಿ ಜಾಗ ಒತ್ತುವರಿ ಮಾಡಿದವರಿಗೆ ಖಡಕ್ ಎಚ್ಚರಿಕೆ ನೀಡಿದರು.
ಈ ಸಂಬಂಧ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಸದಸ್ಯ ಶಿವಕುಮಾರ್ ಮಾತನಾಡಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆಯಿಂದ ಯಾವುದೇ ಅನುಮತಿ ಪಡೆಯದೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಕಾಂಪೌಂಡ್ ಹಾಗೂ ಶೆಡ್ಗಳನ್ನು ನಿರ್ಮಿಸಿರುವ ಬಗ್ಗೆ ಜೊತೆಗೆ ಹೈಪರ್ಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿರುವ ಜಾಗದಲ್ಲಿಯೇ ಅನದೀಕೃತ ಶೆಡ್ ನಿರ್ಮಾಣ ಮಾಡಿದ್ದ ಹಿನ್ನಲೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದಾಗ್ಯೂ ತೆರವು ಮಾಡದ ಕಾರಣ ಇಂದು ಪ್ರಾಧಿಕಾರ, ನಗರಸs ಸಿಬ್ಬಂದಿಗಳು ಹಾಗೂ ಪೊಲೀಸರ ಸಹಕಾರದಿಂದ ತೆರವು ಮಾಡಲಾಗಿದೆ ಎಂದು ತಿಳಿಸಿದರು.
ನಗರಸಭೆ ಕಂದಾಯಾಧಿಕಾರಿ ಬಸವರಾಜ್ ಮಾತನಾಡಿ ಹೈಪರ್ಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿರುವ ಜಾಗದಲ್ಲಿಯೇ ಅನದೀಕೃತ ಶೆಡ್ ನಿರ್ಮಾಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು ಅದರಂತೆ ಶೀಘ್ರವಾಗಿ ತೆರವು ಮಾಡಲು ಸೂಚನೆ ನೀಡಿದ ಹಿನ್ನಲೆ ನೋಟಿಸ್ ನೀಡಿ ತೆರವು ಮಾಡಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಜಾಗವನ್ನು ಒತ್ತುವರಿ ಮಾಡುವುದು ಅಪರಾಧ, ಸಾರ್ವಜನಿಕ ಸ್ವತ್ತು ಕಾಪಾಡುವುದು ನಮ್ಮ ಜವಾಬ್ದಾರಿ ಉದ್ಯಾನ, ರಸ್ತೆ ಒಳಗೊಂಡಂತೆ ಸರ್ಕಾರದ ವ್ಯಾಪ್ತಿಯ ಜಾಗವನ್ನು ಒತ್ತುವರಿ ಮಾಡಿದ್ದಲ್ಲಿ ಅಂತವರ ವಿರುದ್ದ ಸೂಕ್ತ ಕ್ರಮವಹಿಸಲಾಗುವುದು ಜೊತೆಗೆ ಹಂತ ಹಂತವಾಗಿ ತೆರವು ಮಾಡಲಾಗುವುದರು ಎಂದರು.
ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ರಶ್ಮಿ ಮಾತನಾಡಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದಿರುವ ನಕ್ಷೆಯ ಅನುಸಾರ ಕಟ್ಟಡ ನಿರ್ಮಾಣ ಮಾಡಬೇಕು, ಆದರೆ ನಗರದ ಕೆಲವೆಡೆ ಸರ್ಕಾರಿ ರಸ್ತೆ, ಜಾಗವನ್ನು ಒತ್ತುವರಿ ಮಾಡಿ ಅನಧೀಕೃತವಾಗಿ ಶೆಡ್, ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ ರಾಮನಹಳ್ಳಿಯಲ್ಲಿ ಹೈಪರ್ಟೆನ್ಷನ್ ತಂತಿ ಹಾದು ಹೋಗಿರುವ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದ ಹಿನ್ನಲೆ ತೆರವುಗೊಳಿಸಲು ನೋಟಿಸ್ ನೀಡಲಾಗಿತ್ತು. ಅದಕ್ಕೆ ಸ್ಪಂದಿಸದ ಕಾರಣಕ್ಕೆ ಇಂದು ತೆರವು ಮಾಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನಗರಸಭೆ ಹಾಗೂ ನಗರಾಭಿವೃದ್ಧೀ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸರು ಸೇರಿದಂತೆ ಮತ್ತಿತರರು ಇದ್ದರು.
Need a quick and reliable Bangalore airport drop? Aishwarya Taxi ensures on-time service with professional drivers and comfortable vehicles. Trust us to make your airport journey safe, convenient, and stress-free.
An airport taxi is the best way to ensure a hassle-free journey to and from the airport. Arjun Cabs provides a reliable, affordable, and comfortable airport taxi service for travelers. Whether you’re traveling for business, leisure, or in a group, we have the perfect solution for you. Book your ride today and experience the convenience of a premium airport taxi service with Arjun Cabs!

























Discussion about this post