ಚಿಕ್ಕಮಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಕ್ಟೋಬರ್ ೭ಕ್ಕೆ ಗುಜರಾತಿನ ಮುಖ್ಯಮಂತ್ರಿಯಾಗಿ ೨೦ ವರ್ಷಗಳು ಪೂರ್ಣಗೊಂಡ ಸವಿನೆನಪಿನಲ್ಲಿ ಪತ್ರ ಬರೆಯುವ ಮುಖೇನ ಪ್ರಧಾನಿಗಳಿಗೆ ಶುಭಕೋರುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್ ತಿಳಿಸಿದರು.
ನಗರದಲ್ಲಿ ಪ್ರದಾನ ಅಂಚೆ ಕಛೇರಿಯಲ್ಲಿ ಪತ್ರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆಡಳಿತವಧಿಯಲ್ಲಿ ಉತ್ತಮ ಯೋಜನೆಗಳನ್ನು ರೂಪಿಸುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯುತ್ತಿದ್ದಾರೆ. ಯುವಕರಿಗೆ ಮಾದರಿಯಾಗಿರುವ ಅವರು ಅವರ ಆಡಳಿತ ಸಾಧನೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಜತೆಗೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದು ಆಡಳಿತ ನಡೆಸಿ ೨೦ ವರ್ಷಗಳು ಪೂರ್ಣಗೊಂಡ ಹಿನ್ನಲೆ ಬಿಜೆಪಿ ಬೂತ್ ಮಟ್ಟದಲ್ಲಿ ಪತ್ರಬರೆಯುವ ಮೂಲಕ ಅಭಿನಂದನೆ ಸಲ್ಲಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು
ಪ್ರತಿ ಬೂತ್ಗಳಲ್ಲಿ ೫೦ ರಂತೆ ಜಿಲ್ಲೆಯ ಎಲ್ಲಾ ಬಿಜೆಪಿ ಬೂತ್ ಮಟ್ಟದಲ್ಲೂ ಕಾರ್ಯಕರ್ತರು ಹಾಗೂ ಜನತೆಯ ಸಹಕಾರದಲ್ಲಿ ಪತ್ರ ಬರೆಯುವ ಅಭಿಯಾನ ಹಮ್ಮಿಕೊಂಡಿದ್ದು ಇಂದಿನಿAದ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಸಂಘಟನಾ ಕಾರ್ಯದರ್ಶಿ ಸೀತಾರಾಮ ಭರಣ್ಯ ಮಾತನಾಡಿ ಸೆ.೧೭ ರಿಂದ ಅಕ್ಟೋಬರ್ ೭ ರವರೆಗೆ ಬಿಜೆಪಿ ಸೇವಾ ಹೀ ಸಂಘಟನ್ ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಪ್ರಧಾನಿಗಳು ಗುಜರಾತಿನ ಮುಖ್ಯಮಂತ್ರಿಯಾಗಿದ್ದು ಆಡಳಿತ ಸೇವೆ ಸಲ್ಲಿಸಿ ಅ.೦೭ಕ್ಕೆ ೨೦ ವರ್ಷ ಪೂರ್ಣಗೊಳ್ಳಲಿದ್ದು ಆ ಸವಿನೆನಪಿಗಾಗಿ ಪ್ರಧಾನಿಗಳ ಕಛೇರಿಗೆ ಪತ್ರ ಬರೆಯುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಸವರಾಜ್, ಧನಂಜಯ್ಗೌಡ, ಮಹಿಳಾ ಮೋರ್ಚಾದ ಅಧ್ಯಕ್ಷೆ ಶೋಭಾ ರಾಜೇಶ್, ಪ್ರಧಾನ ಕಾರ್ಯದರ್ಶಿ ಪವಿತ್ರಾ, ರಾಜೇಶ್, ಸಮೃದ್ ಪೈ, ಹಿರೇಮಗಳೂರು ಕೇಶವ್, ಮಂಜು, ನಿಶಾಂತ್, ಜಗದೀಶ್ ಸೇರಿದಂತೆ ಮತ್ತಿತರರು ಇದ್ದರು.

























Discussion about this post