ಮುಂಬೈ: ಸಾಕಿನಾಕಾ ಪ್ರದೇಶದಲ್ಲಿ ಟೆಂಪೋ ಒಂದರಲ್ಲಿ ಅತ್ಯಾಚಾರಕ್ಕೆ ಈಡಾಗಿ, ಮರ್ಮಾಂಗಕ್ಕೆ ರಾಡ್ ನಿಂದ ಇರಿಯಲ್ಪಟ್ಟಿದ್ದ ಮನಕಲಕುವ ಧಾರುಣ ಘಟನೆ ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ನಡೆದಿತ್ತು ಎಂದು ಇದಕ್ಕೂ ಮುನ್ನ ಕನ್ನಡ ನಾಡಿ ವರದಿ ಮಾಡಿತ್ತು.
ಇದೀಗ ಆ ಸಂತ್ರಸ್ತ ಯುವತಿಯು ಸುಮಾರು ೩೩ ಗಂಟೆ ಜೀವನ್ಮರಣ ಹೋರಾಟದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿದೆ. ಘಾಟ್ಕೋಪರ್ ನ ರಾಜವಾಡಿ ಆಸ್ಪತ್ರೆಗೆ ಸಂತ್ರಸ್ತೆಯನ್ನು ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂಧಿಸದಷ್ಟು ನೋವುಂಡಿದ್ದ ಸಂತ್ರಸ್ತೆ ಕೊನೆಗೂ ಇನ್ನಿಲ್ಲವಾಗಿದ್ದಾಳೆ ಎಂದು ಆಸ್ಪತ್ರೆ ತಿಳಿಸಿದೆ.
೩೪ ವರ್ಷದ ಮಹಿಳೆಯ ಮೇಲೆ ದುಷ್ಕರ್ಮಿಯೊಬ್ಬ ಶುಕ್ರವಾರ ಬೀಕರ ಅತ್ಯಾಚಾರ ಎಅಸಗಿದ್ದ. ಚಲಿಸುತ್ತಿದ್ದ ಟೆಂಪೊದಲ್ಲೇ ಈ ಘಟನೆ ನಡೆಸಿದ್ದ.ನಿರ್ಭಯಾ ಪ್ರಕರಣದಂತೆ ಕ್ರೌರ್ಯದ ಪರಾಕಾಷ್ಟೆ ಮೆರೆಯಲಾಗಿತ್ತು. ಇದು ಸಾಮೂಹಿಕ ಅತ್ಯಾಚಾರವೇ ಇರಬಹುದು ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಹೆಚ್ಚಿನ ತನಿಖೆಯಿಂದ ಸತ್ಯ ಬಯಲಾಗಬೇಕಿದೆ.
ಬಂಧಿತ ಆರೋಪಿಯ ಮೇಲೆ ಸೆಕ್ಷನ್ ೩೦೭, ೩೭೬, ೩೨೩, ೫೦೪ ಅಡಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಘವ್ ಠಾಕ್ರೆ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ

























Discussion about this post