ಪಂಜಾಬ್: ಎಲ್ ಇ ಡಿ ಬಳಸಿ ಆಯಿಲ್ ಟ್ಯಾಂಕ್ ಒಂದನ್ನು ಸುಟ್ಟುಹಾಕಲು ಯತ್ನಿಸಿದ ಐಎಸ್ ಐ ಪ್ರೇರಿತ ಪಾಕಿ ಉಗ್ರವಾದಿಗಳ ಬಂಧನದ ಬೆನ್ನಲ್ಲೇ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಂಜಾಬಿನಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ.
ಕಳೆದ ೪೦ ದಿವಸಗಳಲ್ಲಿ ಇದು ನಾಲ್ಕನೇ ಬಾರಿ ಪಾಕಿಸ್ತಾನಿ ಉಗ್ರರಿಂದ ರಾಜ್ಯದಲ್ಲಿ ಬೆಂಕಿ ಹಚ್ಚಿದ ಪ್ರಕರಣ ಕಂಡುಬಂದಿರುವುದು.
ಪದೇ ಪದೇ ಪಂಜಾಬಿನ ಶಾಂತಿ ಕದಡುವ ಪ್ರಯತ್ನಗಳಾಗುವ ಬೆನ್ನಲ್ಲೇ ಪಂಜಾಬಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಪೊಲೀಸರಿಗೆ ಹೈ ಅಲರ್ಟ್ ನಲ್ಲಿರುವಂತೆ ಸೂಚನೆ ರವಾನಿಸಿದ್ದಾರೆ.
ಶಾಲೆ ಮತ್ತು ಶೈಕ್ಷನಿಕ ಸಂಸ್ಥೆಗಳನ್ನು ಸದ್ಯದಲ್ಲೇ ತೆರೆಯುವುದು ಜೊತೆಗೆ ಹಬ್ಬಗಳ ಕಾರಣದಿಂದಲೂ ಈ ಸೂಚನೆ ಹೊರಬಂದಿದೆ.
ಮಾರುಕಟ್ಟೆ ಮುಂತಾದ ಜನದಟ್ಟಣೆ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆ ಡಿಜಿಪಿ ದಿನಕರ್ ಗುಪ್ತಾ (DGP, DINAKAR GUPTA) ಅವರಿಗೆ ಸೂಚಿಸಲಾಗಿದೆ.
ಪಾಕಿನ ಉಗ್ರವಾದಿಗಳನ್ನು ಗುರುತಿಸಲಾಗಿದ್ದು, ಅವರಲ್ಲಿ ಇಬ್ಬರು ಪಾಕಿ ಉಗ್ರವಾದಿಗಳು ಅದರಲ್ಲೊಬ್ಬ ಪಾಕಿನ ಇಂಟೆಲಿಜೆನ್ಸ್ ಆಫೀಸರ್ ಎನ್ನಲಾಗಿದೆ.
ಇಂಟರ್ ನ್ಯಾಷನಲ್ ಸಿಖ್ ಯೂಥ್ ಫೆಡರೇಷನ್ (ಐಎಸ್ ವೈ ಎಫ್) ಮುಖ್ಯಸ್ಥ ಲಖ್ಬೀರ್ ಸಿಂಗ್ ರೊಡೇ ಅಲಿಯಾಸ್ ಬಾಬಾ, ಈತ ಮೊಗಾ ಜಿಲ್ಲೆಯ ರೊಡೆ ಹಳ್ಳಿಯವನು. ಈತ ಪಾಕಿನಲ್ಲಿದ್ದು, ಖಾಸಿಂ ಜೊತೆಗೆ ಕೈಜೊಡಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

























Discussion about this post