ಚಿಕ್ಕಮಗಳೂರು: ತಮ್ಮನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಇದರ ಹಿಂದೆ ತಮ್ಮದೇ ಪಕ್ಷದ ಮಾಜಿ ಸಚಿವರೊಬ್ಬರ ಕೈವಾಡವಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಅಧ್ಯಯನ ಶಿಬಿರಕ್ಕೆ ತಮಗೆ ಆಹ್ವಾನ ನೀಡದೆ ಇರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿ ತಮ್ಮನ್ನು ಮೂಲೆ ಗುಂಪು ಮಾಡಲು ಭಾರೀ ಪ್ರಯತ್ನ ಮಾಡಲಾಗಿದೆ ಅದಕ್ಕೆ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡಲಿದ್ದೇನೆ ಎಂದರು.
ತಮಗೆ ತಮ್ಮದೇ ಆದ ಬಳಗವಿದ್ದು ಜೆಡಿಎಸ್ ಬಿಟ್ಟು ರಾಜಕಾರಣ ಮಾಡುವ ಶಕ್ತಿ ಇದೆ. ಹೋರಾಟದ ನೆಲೆಗಟ್ಟಿನಿಂದ ನಾಯಕತ್ವ ಗುಣ ಬೆಳೆಸಿಕೊಂಡು ಜೆಡಿಎಸ್ಗೆ ಸೇರಿದ್ದೇನೆ, ಹೊರತು ಜೆಡಿಎಸ್ಗೆ ಬಂದ ನಂತರ ಬೆಳೆದಿಲ್ಲ ಎಂದು ಸ್ಪಷ್ಟಪಡಿಸಿದರು.

























Discussion about this post