ಚಂಡೀಗಢ: ಯುಕ್ತಾಯುಕ್ತತೆಯನ್ನು ವಿವೇಚಿಸಬಲ್ಲ ಪ್ರೌಢಾವಸ್ಥೆ ತಲುಪಿದ ಮುಸ್ಲಿಂ ಹೆಣ್ಣುಮಗಳು ತನ್ನಿಚ್ಛೆಯಂತೆ ಮದುವೆ ಆಗಬಹುದು. ಇದಕ್ಕೆ ಆಕೆಯ ತಂದೆ-ತಾಯಿ ಅಥವಾ ಪೋಷಕರು ಅಡ್ಡಿ ಮಾಡುವಂತಿಲ್ಲ ಎಂದು ಹಿಂದು ಯುವಕನನ್ನು ಮದುವೆಯಾದ ಮುಸ್ಲಿಂ ಹೆಣ್ಣುಮಗಳು ರಕ್ಷಣೆ ಕೋರಿದ ಪ್ರಕರಣದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಜತೆಗೆ ನವದಂಪತಿಗೆ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನ (ದಿನ್ ಶಾ ರ್ದುಂಜಿ ಮುಲ್ಲಾ ರಚಿಸಿರುವ ಮೊಹಮದೀಯ ಕಾನೂನಿನ ತತ್ವಗಳು ಪುಸ್ತಕ) 195ನೇ ಕಲಂನಲ್ಲಿ ಪ್ರೌಢಾವಸ್ಥೆಗೆ ಬಂದ ಸ್ತ್ರೀ ತನ್ನಿಚ್ಛೆಯಂತೆ ಮದುವೆಯಾಗಬಹುದು ಎಂದು ಸುಸ್ಪಷ್ಟವಾಗಿದೆ. ಕುಟುಂಬ ಸದಸ್ಯರ ಅಭಿಪ್ರಾಯಕ್ಕೆ ವಿರುದ್ಧವಾಗಿ ವಿವಾಹವಾಗಿದ್ದಾಳೆಂಬ ಕಾರಣಕ್ಕೆ ಆಕೆಗೆ ಇರುವ ಹಕ್ಕನ್ನು ಹತ್ತಿಕ್ಕಲು ಆಗದು. ಈ ವಿಷಯದಲ್ಲಿ ಪೋಷಕರೂ ಮಧ್ಯಪ್ರವೇಶಿಸುವಂತಿಲ್ಲ ಎಂದು ನ್ಯಾಯಮೂರ್ತಿ ಹರನರೇಶ್ ಸಿಂಗ್ ಗಿಲ್ ಅಭಿಪ್ರಾಯ ಪಟ್ಟಿದ್ದಾರೆ.
ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಬಾಲಕಿಯರು ಪ್ರೌಢಾವಸ್ಥೆ ಬರುವ ಮತ್ತು ವಯಸ್ಕಳೆಂಬುದನ್ನು ಬೇರೆ ಬೇರೆಯಾಗಿ ವಿಂಗಡಿಸಿಲ್ಲ. 15 ವರ್ಷ ದಾಟಿದ ಬಾಲಕಿಯನ್ನು ವಯಸ್ಕಳೆಂದು ಭಾವಿಸಲಾಗುತ್ತದೆ. ಮುಸ್ಲಿಂ ಪುರುಷನಿಗೂ ಇದೇ ನಿಯಮ ಲಾಗೂ ಆಗುತ್ತದೆ ಎಂದು ಅಜಿರ್ದಾರಳ ಪರ ವಕೀಲರು ವಾದಮಂಡಿಸಿದ್ದರು.
17 ವರ್ಷದ ಮುಸ್ಲಿಂ ಯುವತಿ 33 ವರ್ಷದ ಹಿಂದು ಪುರುಷನನ್ನು ಕುಟುಂಬದ ವಿರೋಧದ ಮಧ್ಯೆಯೂ ಮದುವೆ ಆಗಿದ್ದಳು. ಕುಟುಂಬದಿಂದ ಬೆದರಿಕೆ ಇದ್ದ ಕಾರಣ ಎಂದು ಈ ಜೋಡಿ ರಕ್ಷಣೆ ಕೋರಿ ಹೈಕೋರ್ಟ್ ಮೊರೆ ಹೋಗಿತ್ತು.
Muslim girl free to marry on attaining puberty- HC
ಇದನ್ನು ಓದಿ: ಸಾರ್ವಜನಿಕ ನೈತಿಕತೆಯು ಸಾಂವಿಧಾನಿಕ ನೈತಿಕತೆಯನ್ನು ಮರೆಮಾಡಬಾರದು ಎಂದ ರಾಜಸ್ಥಾನ ಹೈಕೋರ್ಟ್
Discussion about this post