ನವದೆಹಲಿ: ಒಂದು ಕಡೆ ಬಿಸಿಯೂಟಕ್ಕೆ ಅನುದಾನ ಬಿಡುಗಡೆ ಮಾಡದಿದ್ದರೂ ಸಹ ಹೆಸರು ಬದಲಾವಣೆ ಮಾಡಿ ವಿವಾದಕ್ಕೆ ಕೇಂದ್ರ ಗುರಿಯಾಗಿದೆ. ಮತ್ತೊಂದೆಡ ಕೇಂದ್ರ ಬದಲಾಯಿಸಿದ ಹೆಸರೇ ಟ್ರೋಲ್ ಆಗ್ತಾ ಇದೆ.
ನಮ್ಮ ಕನ್ನಡದಲ್ಲಿ ‘ತಿಥಿ ಭೋಜನ’ ಎಂದರೆ, ಸಾವು ನಡೆದ ಮನೆಯಲ್ಲಿ ಕೆಲವು ದಿನಗಳು ಕಳೆದು, ಧಾರ್ಮಿಕ ಆಚರಣೆಯೊಂದಿಗೆ ಬಂಧುಮಿತ್ರಾದಿಗಳನ್ನು ಕರೆದು ಊಟ ಹಾಕಿಸುವುದಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಜನರು ಒಕ್ಕೂಟ ಸರ್ಕಾರವನ್ನು ಮತ್ತು ಬಿಜೆಪಿ ಪ್ರತಿನಿಧಿಗಳನ್ನು ಟ್ರೋಲ್ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರವು ಬುಧವಾರವಷ್ಟೇ ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಹೆಸರನ್ನು ಬದಲಿಸಿದೆ. ಯೋಜನೆಗೆ ‘ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್’ ಯೋಜನೆ ಅಥವಾ ‘ಪಿಎಂ ಪೋಷಣ್’ ಎಂದು ಕರೆದಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) (CCEA) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಸದರಿ ಯೋಜನೆಯ ಅಡಿಯಲ್ಲಿ ‘ತಿಥಿ ಭೋಜನ’ ಎಂದು ಕರೆಯಲಾಗುವ ಕಾರ್ಯಕ್ರಮವೂ ಸೇರಿದ್ದು, ಈ ಬಗ್ಗೆ ನೆಟ್ಟಿಗರು ಒಕ್ಕೂಟ ಸರ್ಕಾರವನ್ನು ಮತ್ತು ಬಿಜೆಪಿ ಪ್ರತಿನಿಧಿಗಳನ್ನು ಟ್ರೋಲ್ ಮಾಡುತ್ತಿದ್ದಾರೆ.
ಪಿಎಂ ಪೋಷಣ್ ಅಡಿಯಲ್ಲಿ, ವ್ಯಕ್ತಿಗಳು ಅಥವಾ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಹಬ್ಬದೂಟವನ್ನು ನೀಡುವ ಕಾರ್ಯಕ್ರಮವಾಗಿದೆ ‘ತಿಥಿ ಭೋಜನ್’. ಇದರಲ್ಲಿ ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ, ಹಬ್ಬಗಳಂದು ಯಾವುದೇ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮಕ್ಕಳಿಗೆ ಸಿಹಿತಿಂಡಿ, ಹಣ್ಣುಗಳು ಇತ್ಯಾದಿಗಳನ್ನು ವಿತರಿಸುವುದಾಗಿದೆ.
‘ತಿಥಿ ಭೋಜನ’ ಯೋಜನೆಯನ್ನು ಗುಜರಾತ್ ರಾಜ್ಯದಲ್ಲಿ ಮೊದಲು ಆರಂಭಿಸಿದ್ದು ಗುಜರಾತ್‌ನಲ್ಲಿ ಈ ಯೋಜನೆ ಯಶಸ್ವಿಯಾದ ನಂತರ, ಒಕ್ಕೂಟ ಸರ್ಕಾರವು ಈ ಯೋಜನೆಯನ್ನು ಎಲ್ಲಾ ರಾಜ್ಯಗಳಲ್ಲಿ ಆರಂಭಿಸಲು ನಿರ್ದೇಶಿಸಿದೆ.

























Discussion about this post