ಚುರು (ರಾಜಸ್ಥಾನ): ವಿವಾಹ ಬೋಜನವಿದು ಅಂತ ಮದುವೆಗೆ ಹೋಗಿ ಆಹಾರ ಸೇವಿಸಿದ್ದ ೪೫ ಜನ ಮಕ್ಕಳು ಸೇರಿದಂತೆ, ೧೦೦ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಸರ್ಧಾರ್ ಶಹರ್ ಪಟ್ಟಣದಲ್ಲಿ ಘಟಿಸಿದೆ.
ಸ್ವಸ್ಥರಾದವರನ್ನು ಚಿಕಿತ್ಸಾಲಯಕ್ಕೆ ಕರೆದೊಯ್ಯಲಾಗಿದೆ. ಊಟ ತಿನ್ನುತ್ತಿದ್ದಂತೆ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದ್ದು, ಸ್ಥಳದಲ್ಲೇ ಅಸ್ವಸ್ಥರಾಗಿದ್ದರು ಎನ್ನಲಾಗಿದೆ. ರಾತ್ರಿಯಿಡಿ ಆಸ್ಪತ್ರೆಗೆ ಸೇರಿಸಲು ವೈದ್ಯ ಸಿಬ್ಬಂಧಿ ಕಾರ್ಯನಿರ್ವಹಿಸಿದ್ದಾರೆ.
ಒಂದೇ ಬೆಡ್ ನಲ್ಲಿ ಮೂರು ಜನ ಮಲಗಿಸಿ ತುರ್ತು ಚಿಕಿತ್ಸೆಗೆ ತಯಾರಿ ನಡೆಸಲಾಗಿದೆ. ಕೆಲವರನ್ನ ನೆಲದ ಮೇಲೆ ಸಹ ಮಲಗಿಸಲಾಗಿದೆ. ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಒಮ್ಮೆಲೆ ಚಿಕಿತ್ಸೆ ನೀಡಬೇಕಾಗಿರುವುದರಿಂದ ಆಸ್ಪತ್ರೆಯಲ್ಲೂ ತರಾತುರಿ ಸಮಸ್ಯೆಗಳಾಗಿವೆ.
ಘಟನೆ ಕುರಿತು ಸರ್ದಾರ್ ಶರ್ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಯಾವುದೇ ಪ್ರಣಾಪಾಯದ ತೊಂದರೆ ಕಂಡುಬಂದಿಲ್ಲ ಎಂದು ಖಚಿತಪಡಿಸಿದ್ದಾರೆ.

























Discussion about this post