ಚಿಕ್ಕಮಗಳೂರು: ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಪುನರ್‌ಸ್ಥಾಪನೆ ಮಾಡಬೇಕು ಎಂದು ಜಿಲ್ಲಾ ಹಾಲುಮತ ಮಹಾಸಭಾದ ತಾಲೂಕು ಅಧ್ಯಕ್ಷ ಹರ್ಷವರ್ಧನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮೂಲಕ ಒತ್ತಾಯಿಸಿದರು.
ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ತಾಲೂಕು ಆಡಳಿತ ತೆರವು ಮಾಡಿ ಅಪಮಾನ ಮಾಡಿದೆ. ಶಿಕಾರಿಪುರ ಈಸೂರು ದಂಗೆಯ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹೊತ್ತಿಸಿದ ಭೂಮಿ, ಮುಖ್ಯಮಂತ್ರಿಗಳು ಸಂಗೊಳ್ಳಿರಾಯಣ್ಣನಿಗೆ ಸರ್ಕಾರದಿಂದ ಗೌರವ ಸಮರ್ಪಣೆ ಮಾಡಬೇಕು, ಎಂದು ಆದೇಶ ಹೊರಡಿಸುತ್ತಾರೆ ಆದರೆ ಶಿಕಾರಿಪುರ ನಗರದಲ್ಲಿ ರಾತ್ರೋ ರಾತ್ರಿ ಸಂಗೊಳ್ಳಿರಾಯಣ್ಣನವರ ಪ್ರತಿಮೆ ತೆರವು ಮಾಡಲಾಗಿದೆ ಇದು ಅವರಿಗೆ ಮಾಡುವ ಅಪಮಾನ ತೀವ್ರ ಖಂಡನೀಯ ಎಂದರು.
ರಾಯಣ್ಣ ಅನೇಕ ಯುವಕರಿಗೆ ಸ್ಪೂರ್ತಿಯಾಗಿದ್ದು ಅವರ ಪ್ರತಿಮೆ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಬೇಕು ಬದಲಾಗಿ ಏಕಾಏಕಿ ತೆರವು ಮಾಡಲಾಗಿದೆ. ಹುತಾತ್ಮ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ತೆರವು ಮಾಡಿರುವ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಕ್ಷೇತ್ರದ ಮಾಜಿಮುಖ್ಯಮಂತ್ರಿ ಶಾಸಕರು ಆಗಿರುವ ಯಡಿಯೂರಪ್ಪ, ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ತಾಲೂಕು ಆಡಳಿತಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೆ.ಆರ್., ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ್, ಜಿಲ್ಲಾ ಅಧ್ಯಕ್ಷ ಅಡವೇಗೌಡ, ರಂಗನಾಥ್, ಸೋಮಶೇಖರ್, ರಘು ಡಿ.ಟಿ, ಮಧು ಸಿ.ಸಿ, ಸಿದ್ಧೇಶ್, ಮಹೇಶ್, ರಘು ಅಂಬಳೆ ಇದ್ದರು.

























Discussion about this post