ಚಿಕ್ಕಮಗಳೂರು: ದೇಶ ಮೊದಲು, ಕಾನೂನು, ರಾಷ್ಟ್ರದ ಬಾವುಟ ಮತ್ತು ಸಂವಿಧಾನ ವಿರೋಧಿಸುವ ಶಕ್ತಿಯನ್ನು ಸರ್ಕಾರ ನಿಷೇಧಿಸಬೇಕು ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ರಾಷ್ಟ್ರದ ಬಾವುಟವನ್ನು ವಿರೋಧಿಸುವ ತಾಲಿಬಾನ್ ಸಂಸ್ಕೃತಿ ಸಹಿಸುವುದಿಲ್ಲ ಎಂದು ಮತ್ತೆ ಹೇಳಿರುವ ಸಚಿವರು ಎಸ್ ಡಿಪಿಐ ಗುರಿಯಾಗಿಸಿ ಎಚ್ಚರಿಕೆ ಕೊಟ್ಟಿದ್ದಾರೆ. ರಾಷ್ಟ್ರೀಯತೆ ವಿರೋಧ ಮಾಡುವವರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧ ಎಂದವರು ತಿಳಿಸಿದ್ದಾರೆ.
ಬಾಬಾ ಬುಡನ್ ಗಿರಿ ದತ್ತಪೀಠಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪಿನ ನಂತರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು, ದತ್ತ ಪೀಠಕ್ಕೆ ಹಿಂದೂ ಅರ್ಚಕರ ನೇಮಕ ಚರ್ಚೆಯಲ್ಲಿದೆ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಬಿಜೆಪಿ ಸರ್ಕಾರ ಸುಭದ್ರ, ಸುಸ್ಥಿರ, ಸರ್ಕಾರ ಬೀಳುತ್ತೆ ಎಂದು ಕನಸು ಕಾಣುವವರದ್ದು ತಪ್ಪಲ್ಲ, ಆದರೆ ಬಿಜೆಪಿ ವಿಷಯದಲ್ಲಿ ಯಾರ ಕನಸು ನನಸಾಗಲ್ಲ ಎಂದು ಹೇಳಿಕೆ ನೀಡಿದ್ದಾರೆ.

























Discussion about this post