ಚಿಕ್ಕಮಗಳೂರು: ಪ್ರಸ್ತುತದ ಅಂತರ್ಜಲ ಸಮಸ್ಯೆಗೆ ಮಳೆ ನೀರು ಕೊಯ್ಲು ಪರಿಹಾರ ಆಗಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಹಾದಿಹಳ್ಳಿ ಗ್ರಾಮದಲ್ಲಿರುವ ರೈನಿ ಸಂಶೋಧನಾ ಮತ್ತು ತಯಾರಿಕಾ ಕೇಂದ್ರಕ್ಕೆ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಜನರು ನೀರಿನ ಮಹತ್ವವನ್ನು ಅರಿಯದೇ ಗೊತ್ತುಗುರಿಯಿಲ್ಲದೆ ಕೊಳವೆ ಬಾವಿಗಳನ್ನು ಕೊರೆಸುತ್ತಿರುವುದು ಮತ್ತು ನೀರನ್ನು ಅತಿಯಾಗಿ ಬಳಕೆ ಮಾಡುತ್ತಿರುವುದರಿಂದ ಅಂತರ್ಜಲ ಕೊರತೆ ಉಂಟಾಗಲು ಕಾರಣವಾಗಿದೆ. ಈ ಸಮಸ್ಯೆ ತೀವ್ರ ಸ್ವರೂಪ ಪಡೆದು ಜನರು ಸಂಕಷ್ಟಕ್ಕೆ ಸಿಲುಕುವ ಮೊದಲು ಜಾಗೃತರಾಗುವ ಅಗತ್ಯವಿದೆ ಎಂದು ಹೇಳಿದರು.
ವಿವೈಯರ್ ತಂತ್ರಜ್ಞಾನದ ಮೂಲಕ ಮಳೆಯ ಹನಿ ಹನಿಯನ್ನೂ ಸಂಗ್ರಹಿಸಿ, ಅದನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಈ ಕೇಂದ್ರದಲ್ಲಿ ಸಂಶೋಧನೆ ನಡೆಸುತ್ತಿರುವುದನ್ನು ಪ್ರತಿಯೊಬ್ಬರೂ ಒಮ್ಮೆ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿ ಅದನ್ನ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ಮಳೆಯ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುವುದರಿಂದ ಉಪಯೋಗ ಕಡಿಮೆ. ಅದೇ ಮಳೆಯ ನೀರು ಕೊಯ್ಲು ಮಾಡಿ ಭೂಮಿಗೆ ಇಂಗಿಸುವುದರಿಂದ ಅಂತರ್ಜಲ ವೃದ್ಧಿಯಾಗಿ ನೀರಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಅಟಲ್ ಭೂ ಜಲ ಯೋಜನೆಯ ಮುಖ್ಯ ಎಂಜಿನಿಯರ್ ಹೋಳಿಯಾಚಿ ಮಾತನಾಡಿ, ವಿವೈಯರ್ ತಂತ್ರಜ್ಞಾನದಿಂದ ಮಳೆ ನೀರು ಕೊಯ್ಲು ಮಾಡುವುದು ಮತ್ತು ಆ ನೀರನ್ನು ಇಂಗಿಸಿ ಬಳಕೆ ಮಾಡುವುದು ನಿಜಕ್ಕೂ ಒಂದು ರೀತಿಯಲ್ಲಿ ಸೋಜಿಗದ ಸಂಗತಿ. ಈ ಪದ್ಧತಿಯನ್ನು ಜನರು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಬೇಕು ಎಂದು ಹೇಳಿದರು.
ಕಾನ್ಫರೆನ್ಸ್ ಹಾಲ್ ನಲ್ಲಿ ವಿ ವೈರ್ ಮೂಲಕ ಮಳೆ ನೀರು ಕೊಯ್ಲು ತಂತ್ರಜ್ಞಾನವನ್ನು ಪರದೆಯಲ್ಲಿ ವೀಕ್ಷಿಸಿ ಮಾಹಿತಿಗಳನ್ನು ಪಡೆದುಕೊಂಡರು. ಇಂಜಿನಿಯರುಗಳಾದ ಸಫಿಹುಲ್ಲ, ಸುಜಾತಾ, ಸುಧಾ, ಕಂಪನಿಯ ಪಾಲುದಾರ ಸುನಿಲ್ ಬ್ಯಾಫ್ಟಿಸ್ಟ್ ಹಾಗೂ ಇತರ ಆಧಿಕಾರಿಗಳು ಭಾಗವಹಿಸಿದ್ದರು. ಕಂಪನಿಯ ಚೇತನ್ ವಿವರಣೆ ನೀಡಿದರು.

























Discussion about this post