ಬೆಂಗಳೂರು: ದೇಶದಲ್ಲಿ ಭೂ ಸುಧಾರಣಾ ಕಾಯ್ದೆ, ಕೃಷಿ ಮಾರುಕಟ್ಟೆ ಕಾಯ್ದೆ, ಭೂಸ್ವಾಧೀನ ಕಾಯ್ದೆ ತಡೆಗೆ ಆಗ್ರಹಿಸಿ ರಾಜ್ಯ ರೈತಸಂಘದಿಂದ ವಿಧಾನ ಸೌದ ಮುತ್ತಿಗೆ ಮತ್ತು ಕರ್ನಾಟಕ ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಧ್ಯಮ ಗಳಿಗೆ ತಿಳಿಸಿದ್ದಾರೆ.
ಕೊರೊನಾ ಸಮಯದಲ್ಲಿ ಸುಗ್ರೀವಾಜ್ಞೆ ತರೋದು ಎಷ್ಟು ಸರಿ? ಅಂದು ನೈತಿಕ ಪ್ರಶ್ನೆ ಕೇಳಿದ್ದಾರೆ. ಸೆಪ್ಟೆಂಬರ್ ೧೩ರಂದು ರೈತರಿಂದ ವಿಧಾನಸೌಧ ಮುತ್ತಿಗೆ, ಸೆಪ್ಟೆಂಬರ್ ೨೭ ರಂದು ಭಾರತ್ ಬಂದ್ ಆಯೋಜಿಸಲಾಗಿದೆ, ಇದೇ ವೇಳೆ ನಾವು ಕರ್ನಾಟಕ ಬಂದ್ ಮಾಡುತ್ತೇವೆ ಎಂದವರು ಸ್ಪಷ್ಟಪಡಿಸಿದರು.
ರೈತ ವಿರೋಧಿ ನಿಲುವು ಮುಂದುವರೆದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

























Discussion about this post