ಚಿಕ್ಕಮಗಳೂರು ದೇಶದ ಸರ್ವ ಜನರ ಏಳಿಗೆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ ಎಂದು ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಉಸ್ತುವಾರಿ ಮಹಮ್ಮದ್ ಸಿರಾಜ್ ಅಹಮ್ಮದ್ ಹೇಳಿದರು.
ಮಂಗಳವಾರ ಜಿಲ್ಲಾ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕಳೆದ ೭ ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಸರ್ಕಾರವು ಪಕ್ಷಕ್ಕೆ ದೊಡ್ಡ ಬಲ ತಂದಿದೆ. ಅಲ್ಪಸಂಖ್ಯಾತರ ಒಳಗೊಂಡಂತೆ ಸರ್ವ ಧರ್ಮದ ಪರವಾಗಿ ಉತ್ತಮ ಜನಪರ ಯೋಜನೆಗಳನ್ನು ರೂಪಿಸಿದ್ದಾರೆ. ಎಂದು ಹೇಳಿದರು.
ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗಳು ಉತ್ತಮ ಮುಂದಾಲೋಚನೆ ಒಳಗೊಂಡಿವೆ. ಅಲ್ಪಸಂಖ್ಯಾತರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ ಎಂಬುದನ್ನು ಎಲ್ಲ ಕಾರ್ಯಕರ್ತರು ಅರಿಯಬೇಕಿದೆ ಎಂದು ಸಲಹೆ ನೀಡಿ ದರು.
ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಾಜಣ್ಣ ಮಾತನಾಡಿ ಕಳೆದ ೭೦ ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಆಗಿ ಮಾಡಿಕೊಂಡು ಆಡಳಿತ ನಡೆಸಿದೆ ಎಂದು ತಿಳಿಸಿದರು
ಅಲ್ಪಸಂಖ್ಯಾತರ ಏಳಿಗೆಗೆ ಶ್ರಮಿಸಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಏಳಿಗೆಗೆ ಹೆಚ್ಚು ಅನುದಾನ ನೀಡಿದೆ. ಆದರೆ ಕಾಂಗ್ರೆಸ್ ಅವಧಿಯಲ್ಲಿ ತಾರತಮ್ಯವಿತ್ತು ಎಂದರು.
ಬಿಜೆಪಿ ಪಕ್ಷವು ಜಾತ್ಯಾತೀತವಾಗಿದೆ. ಸರ್ವ ಸಮುದಾಯಗಳ ನಾಯಕರನ್ನು ಗುರುತಿಸಿ ಬೆಳೆಸುವ ಪಕ್ಷವಾಗಿದ್ದು ಪಕ್ಷದ ಸಂಘಟನೆ, ಪ್ರಾಮಾಣಿಕತೆ, ನಿಷ್ಟೆ ಇದ್ದಾಗ ಉನ್ನತ ಸ್ಥಾನಮಾನವನ್ನು ಪಡೆಯಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಕಾರ್ಯಕಾರಿ ಸದಸ್ಯ ಸಗಾಯ್ದಾಸ್ ಮಾತನಾಡಿ ನಾನು ಭಾರತೀಯ ಎಂದು ಹೇಳುವಂತೆ ನಾನೊಬ್ಬ ಬಿಜೆಪಿ ಕಾರ್ಯಕರ್ತ ಎಂದು ಹೇಳಲು ಅಷ್ಟೇ ಹೆಮ್ಮೆ ಎನಿಸುತ್ತದೆ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು ಆದರೆ ಇದೀಗ ಕಾಲ ಬದಲಾಗಿದೆ ಅಲ್ಪಸಂಖ್ಯಾತರ ಪರವಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಜೈನ, ಮುಸಲ್ಮಾನ, ಕ್ರೈಸ್ತರು ಸೇರಿದಂತೆ ಸರ್ವಧರ್ಮದ ಏಳಿಗೆಗೆ ಬಿಜೆಪಿ ಶ್ರಮಿಸಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಂಘಟಿತರಾಗಬೇಕಿದೆ. ಜತೆಗೆ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸೀತಾರಾಮ ಭರಣ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ದೇವರಾಜ್ಶೆಟ್ಟಿ, ಜಿಲ್ಲಾ ಪ್ರಭಾರಿ ಪ್ರಮೋದ್ದುಂಡುಗ, ನಗರ ಅಧ್ಯಕ್ಷ ಬೆನೆಡಿಕ್ಟ್ ಜೇಮ್ಸ್, ಜಿಲ್ಲಾಧ್ಯಕ್ಷ ರಫೀಕ್ಅಹಮದ್, ಇದ್ದರು.
ಜಿಲ್ಲಾ ಸದಸ್ಯ ಸುರೇಶ್ ಜೇಕಬ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಸಿದ್ದಿಖ್ ಸ್ವಾಗತಿಸಿ, ಶೋಯೆಬ್ ವಂದಿಸಿ, ರಾಬರ್ಟ್ ನಿರೂಪಿಸಿದರು.

























Discussion about this post