ದೇವಾಲಯ ಪುನರ್ ಪ್ರತಿಷ್ಟಾಪನೆ ಮಾಡಲು ಆಗ್ರಹ
ಶೃಂಗೇರಿ : ಮೈಸೂರಿನ ಹುಚ್ಚ ಗಣಿ ಮಹಾದೇವಮ್ಮ ದೇವಾಲಯವನ್ನು ರಾತ್ರೋರಾತ್ರಿ ಒಡೆದ ವಿಚಾರವನ್ನು ಖಂಡಿಸಿ ಹಾಗೂ ರಾಜ್ಯದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗುವಂತಹ ಕೆಲಸಗಳನ್ನು ರಾಜ್ಯ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದೆಂದು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಒಗ್ಗೂಡಿ ಮನವಿ ಸಲ್ಲಿಸಿದ್ದಾರೆ.
ಸುಪ್ರೀಂಕೋರ್ಟ್ ನ ಆದೇಶ ಎಂದು ಬರೀ ದೇವಾಲಯಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ರಾತ್ರೋರಾತ್ರಿ ತುಘಲಕ್ ರಂತೆ ಧ್ವಂಸ ಮಾಡುತ್ತಿರುವುದು ಸರಿಯಲ್ಲ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಎಂದಿಗೂ ಸಹ ನೋವುಂಟಾಗದಂತೆ ಕ್ರಮ ತೆಗೆದುಕೊಳ್ಳುವುದು ಬಿಜೆಪಿ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹಿಂದೂ ಸಂಘಟಕರು ಆಗ್ರಹಿಸಿದ್ದಾರೆ.
ಇದೇ ವೇಳೆ, ಕೂಡಲೇ ದೇವಾಲಯ ಪುನರ್ ಪ್ರತಿಷ್ಟಾಪನೆ ಕಾರ್ಯ ಮಡೆಸಬೇಕೆಂದ ಒತ್ತಾಯ ನಡೆಸಿದ್ದರು

























Discussion about this post