ನೆಲ್ಲೂರು: ಆಂಧ್ರ ಪ್ರದೇಶದ ರಾಜ್ಯ ಹೈಕೋರ್ಟ್ ಗುರುವಾರ ಭಾರತೀಯ ಆಡಳಿತ ಸೇವೆಯ (IAS) ಐವರು ಅಧಿಕಾರಿಗಳನ್ನು ಏಕಕಾಲದಲ್ಲಿ ಜೈಲಿಗೆ ಕಳುಹಿಸಲು ನ್ಯಾಯಾಲಯ ಆದೇಶಿಸಿದ ಮಹತ್ತರ ತೀರ್ಪು ನೀಡಿದೆ. ಇದರೊಂದಿಗೆ ಈ ಐಎಎಸ್ ಅಧಿಕಾರಿಗಳಿಗೆ ದಂಡವನ್ನೂ ವಿಧಿಸಲಾಗಿದೆ.
ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ನ್ಯಾಯಾಲಯದ ಆದೇಶದ ನಂತರ ಓರ್ವ ಮಹಿಳೆಗೆ ಪರಿಹಾರವನ್ನು ಪಾವತಿಸದ ಕಾರಣ ನ್ಯಾಯಾಲಯದ ಅವಹೇಳನಕ್ಕೆ ಕುರಿತು ಹೈಕೋರ್ಟ್ ಈ ಮಹತ್ತರ ಆದೇಶ ನೀಡಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೆಂಕಟಾಚಲಂ ಮಂಡಲದ ಪ್ರಕರಣ. ಈ ಪ್ರಕರಣವು ವೆಂಕಟಾಚಲಂ ಮಂಡಲದ ಕಾನುಪುರ ಗ್ರಾಮದಲ್ಲಿ ವಾಸವಿದ್ದ ಮಹಿಳೆಗೆ ಸಂಬಂಧಿಸಿದೆ.
ಘಟನೆಯ ವಿವರ: ಆಂಧ್ರಪ್ರದೇಶ ಸರ್ಕಾರವು 2015 ರಲ್ಲಿ ಸಾಯಿ ಬ್ರಹ್ಮ ಎಂಬ ಮಹಿಳೆಯಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಭೂ ಸ್ವಾಧೀನಕ್ಕೆ ಬದಲಾಗಿ ಮಹಿಳೆಗೆ ಸರ್ಕಾರದಿಂದ ಪರಿಹಾರ ಸಿಗಲಿಲ್ಲ. ಹೈಕೋರ್ಟ್, ಪ್ರಕರಣದ ವಿಚಾರಣೆ ನಡೆಸಿದಾಗ, ಮೊದಲ ಆದೇಶದಲ್ಲಿ ೩ ತಿಂಗಳೊಳಗೆ ಹಣ ಪಾವತಿಸುವಂತೆ ಸೂಚಿಸಿತ್ತು.
ಮೂರು ತಿಂಗಳೊಳಗೆ ಪರಿಹಾರದ ಸೂಚನೆಗಳ ಹೊರತಾಗಿಯೂ, 6 ವರ್ಷಗಳ ನಂತರವೂ ಪರಿಹಾರ ಕಾಣದ ಕಾರಣ, ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ದಾಖಲಿಸಲಾಯಿತು. ಇದೇ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ೫ ಐಎಎಸ್ (IAS) ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿದೆ. ಇದರಲ್ಲಿ, 2 ಅಧಿಕಾರಿಗಳಿಗೆ 4 ವಾರಗಳ ಜೈಲು ಶಿಕ್ಷೆ ಮತ್ತು 3 ಇತರ ಅಧಿಕಾರಿಗಳಿಗೆ 2 ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಹಿರಿಯ ಐಎಎಸ್ ಅಧಿಕಾರಿ ಮನಮೋಹನ್ ಸಿಂಗ್ ಅವರಿಗೆ ನಾಲ್ಕು ವಾರಗಳ ಜೈಲು ಶಿಕ್ಷೆ ಮತ್ತು 1,000 ರೂಪಾಯಿ ದಂಡವನ್ನು ವಿಧಿಸಿತು, ಆಂಧ್ರ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇದರೊಂದಿಗೆ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಎಸ್ ರಾವತ್ ಅವರಿಗೆ ಒಂದು ತಿಂಗಳ ಜೈಲು ಶಿಕ್ಷೆ ಮತ್ತು 2,000 ರೂ. ಅದೇ ರೀತಿ, ಇತರ ಪ್ರಕರಣಗಳಲ್ಲಿ ಭಾಗಿಯಾದ ಅಧಿಕಾರಿಗಳಿಗೂ ಜೈಲು ಶಿಕ್ಷೆ ವಿಧಿಸಲಾಯ್ತು.
ದಂಡ ಪಾವತಿಸದಿದ್ದಲ್ಲಿ ಜೈಲು ಅವಧಿಯನ್ನು ಇನ್ನೊಂದು ವಾರ ವಿಸ್ತರಿಸಲಾಗುವುದು ಎಂದು ಎಚ್ಚರಿಕೆ ಸಹ ನೀಡಿದೆ.

























Discussion about this post