ಅಫ್ಘಾನಿಸ್ತಾನ: ತಾಲಿಬಾನಿಗಳು ಮಹಿಳೆಯರನ್ನು ಇನ್ನಷ್ಟು ಭಯ, ನರಳುವಿಕೆಗೆ ತಳ್ಳುತ್ತಿವೆ, ತಾಲಿಬಾನಿಗಳ ಕಪಿಮುಷ್ಟಿಯಲ್ಲಿ ಈಗಾಗಲೇ ಸಾಕಷ್ಟು ಮಾನಸಿಕ ಹಿಂಸೆಯಿಂದ ಬೇಸತ್ತಿದ್ದಾರೆ ಅಲ್ಲಿನ ಮಹಿಳೆಯರು.
ಅಫ್ಘಾನಿಸ್ತಾನದ ಹೆಣ್ಣುಮಕ್ಕಳನ್ನು ಬಲವಂತವಾಗಿ ವಿವಾಹವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸಾಮೂಹಿಕ ಬೆದರಿಕೆ ಹಾಕಿದ ಹಿನ್ನೇಲೆಯಲ್ಲೇ ಅಲ್ಲಿನ ಮಹಿಳೆಯರು ಮೊದಲಿನಂತೆ ತಾವು ತಮ್ಮ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ತಮ್ಮ ಇಷ್ಟದ ಉದ್ಯೋಗ ನಡೆಸಲು ಅವಕಾಶ ಸಿಗುವುದೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ತ್ರೀಯರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ನಿಭಾಯಿಸಲು ಅವಕಾಶ ಸಿಗುವುದೇ? ಎಂಬ ಗೊಂದಲದ ಗೂಡಲ್ಲಿ ಜೀವನ ನಡೆಸಲು ಶುರು ಮಾಡಿದ್ದಾರೆ. ಬಿಬಿಸಿಗೆ ಅಭಿಪ್ರಾಯ ಸೂಚಿಸಿರುವಜೆಬ್ ಹನಿಫಾ ಎಂಬಾಕೆ ಒರ್ವಪಿ ಆರ್ ಕನ್ಸಲ್ಟೆಂಟ್ ಜೊತೆಗೆ ಬರಹಗಾರ್ತಿ ಸಹ ಆಗಿ ಕೆಲಸ ನಿರ್ವಹಿಸಿದ್ದಳು. ಇದೀಗ ತಮ್ಮ ಭವಿಷ್ಯದ ಬಗ್ಗೆ ಭಯದಿಂದ ಕಂಗಾಲಾಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಇತ್ತೀಚಿನ ಅಫ್ಘಾನಿಸ್ತಾನ ದೇಶದ ಪ್ರಮುಖ ಬದಲಾವಣೆಗಳು ಮಹಿಳೆಯರ ಕನಸುಗಳನ್ನು ಚೂರು ಚೂರು ಮಾಡಿದೆ.
Discussion about this post