ಚಿಕ್ಕಮಗಳೂರು: ಮೈಸೂರಿನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಹದ್ದು, ಇಂತಹ ವಿಚಾರಗಳಿಗೆ ಭಾರತೀಯ ಮಾನಸಿಕತೆ ವಿರುದ್ಧ ಇದೆ. ಭಾರತ ಹೆಣ್ಣನ್ನ ಪೂಜನೀಯ ಭಾವನೆಯಿಂದ ನೋಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ನಗರಕ್ಕಾಗಮಿಸಿದ್ದ ಅವರು ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅತ್ಯಾಚಾರದಂತಹ ದುಷ್ಕೃತ್ಯಗಳನ್ನು ತಡೆಯಲು ಕಾನೂನಿನ ಕಠಿಣ ನಿರ್ಣಯಗಳು ಆಗಬೇಕಿದೆ ಎಂದು ಹೇಳಿದರು
ಆದರೆ ದುಷ್ಕರ್ಮಿಗಳು ಬೋಗದ ವಸ್ತುವಿನಂತೆ ಕಂಡಿರುವುದನ್ನು ಎಲ್ಲರೂ ವಿರೋಧಿಸುವುದು ಸಹಜ ಎಂದು ಹೇಳಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಂದೆ ಇಂತಹ ಕೃತ್ಯ ಎಸಗುವ ಮುನ್ನ ಭಯ ಬರುವ ರೀತಿಯಲ್ಲಿ ಕಾನೂನಿನ ಕಠಿಣ ನಿರ್ಣಯಗಳು ಆಗಬೇಕಿದೆ ಎಂದು ಹೇಳಿದರು.
ಇಂತಹ ದುಷ್ಕೃತ್ಯಗಳನ್ನು ತಡೆಯಲು ಮೌಲ್ಯಾಧಾರಿತ ಶಿಕ್ಷಣವೊಂದೇ ದೀರ್ಘಕಾಲದ ಪರಿಹಾರ. ಇದರೊಂದಿಗೆ ತಕ್ಷಣವೇ ಕಠಿಣ ಶಿಕ್ಷೆಯೂ ಆಗುತ್ತದೆ ಎನ್ನುವ ಭಯವೂ ಬರಬೇಕು ಎಂದು ಹೇಳಿದರು.

























Discussion about this post