ಉಡುಪಿ: ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಚಾಂಪಿಯನ್ ಶಿಪ್ ಅಲ್ಲಿ ಪಂಜಾಬ್ ಹರಿಯಾಣವನ್ನು ಹಿಂದಿಕ್ಕಿ ಉಡುಪಿ ಜಿಲ್ಲೆಯ ಕರಿಷ್ಮಾ ಚಿನ್ನ ಗೆದ್ದುಕೊಂಡಿದ್ದಾರೆ. ದೆಹಲಿಯಲ್ಲಿ 23 ವಯೋಮಿತಿ ಒಳಗಿನ ಮೊದಲ ಚಾಂಪಿಯನ್ ಶಿಪ್ ನಡೆಯುತ್ತಿದ್ದು, ಅಂತರಾಷ್ಟ್ರೀಯ ಅಥ್ಲೆಟಿಕ್ಸ್ನಲ್ಲಿ ಉಡುಪಿಯ ಕರೀಷ್ಮಾ ಪಾಲ್ಗೊಂಡಿದ್ದಾರೆ.
ಮತ್ತೊಂದು ವಿಶೇಷ ಏನೆಂದರೆ ನೀರಜ್ ಚೋಪ್ರಾ ಅವರ ಟ್ರೈನರ್ ಕಾಶಿನಾಥ್ ನಾಯಕ್ ಕರಿಷ್ಮಾಗೆ ಆನ್ ಲೈನ್ ಟ್ರೈನಿಂಗ್ ಕೊಡುತ್ತಿದ್ದಾರೆ. ಸದ್ಯ ಕರಿಷ್ಮಾ ಬಾರಾಳಿ ಹೈಸ್ಕೂಲ್ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದು, ದೆಹಲಿ ಚಾಂಪಿಯನ್ ಶಿಪ್ ನಲ್ಲಿ 46.52 ಮೀಟರ್ ದೂರಕ್ಕೆ ಈಟಿ ಎಸೆದು ಸಾಧನೆ ಮಾಡಿದ್ದಾರೆ.
ಪಂಜಾಬ್ ಮತ್ತು ರಾಜಸ್ಥಾನದ ಅಥ್ಲೆಟ್ ಗಳನ್ನು ಹಿಂದಿಕ್ಕಿದ ಕರ್ನಾಟಕದ ಕರಿಷ್ಮಾ, ಮುಂದೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಬ್ರಹ್ಮಾವರ ತಾಲೂಕಿನ ಬಾರ್ಕೂರು ನಿವಾಸಿಯಾಗಿರುವ ಕರಿಷ್ಮಾ ಸನಿಲ್, ಎಲ್ವಿಡಿ ಕಾಲೇಜು ರಾಯಚೂರಿನಲ್ಲಿ ಬಿಎಸ್ಸಿ ಅಂತಿಮ ವರ್ಷ ಪದವಿ ಕಲಿಯುತ್ತಿದ್ದಾರೆ.
ಸುದರ್ಶನ್ ಅನಿಲ್ ಮತ್ತು ಇಂದಿರಾ ದಂಪತಿ ಪುತ್ರಿ ಕರಿಷ್ಮಾ ಸನಿಲ್, ಬ್ರಹ್ಮಾವರ ಬೋರ್ಡ್ ಸಂಸ್ಥೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಭವಿಷ್ಯದಲ್ಲಿ ಇವರು ಉತ್ತಮ ಕ್ರೀಡಾ ಸಾಧನೆ ಮಾಡುವ ಆಶಾದಾಯ ವ್ಯಕ್ತವಾಗಿದೆ.

























Discussion about this post