ಚಿಕ್ಕಮಗಳೂರು: ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಗ್ರಾಮವೊಂದರ ಅಪ್ರಾಪ್ತೆಯನ್ನು ಯುವಕನೊಬ್ಬ ಬಲವಂತವಾಗಿ ವಾಹನದಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಪ್ರಯತ್ನಿಸಿದ ಘಟನೆ ಶನಿವಾರ ನಡೆದಿದ್ದು ಸೆರೆಹಿಡಿದಿದ್ದ ಆರೋಪಿ ಪರಾರಿಯಾಗಿದ್ದ ಇದೀಗ ಆತನನ್ನು ಪತ್ತೇಹಚ್ಚಿ ಎಡೆಮುರಿ ಕಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಳೆಹೊನ್ನೂರು ಸಮೀಪದ ನಿಜಾಮ್ ಎಂಬ ಯುವಕ ಆರೋಪಿಯಾಗಿದ್ದಾನೆ. ಠಾಣಾ ವ್ಯಾಪ್ತಿಯ ಗ್ರಾಮವೊಂದರ ೧೨ ವರ್ಷದ ಅಪ್ರಾಪ್ತೆ ಯುವತಿ ಶನಿವಾರ ತನ್ನ ಮನೆಯ ಸಮೀಪದ ಅಂಗಡಿಯೊಂದರಲ್ಲಿ ವಸ್ತುವನ್ನು ಖರೀದಿಸಿಕೊಂಡು ಬರುತ್ತಿದ್ದಾಗ ಆರೋಪಿಯು ಗೂಡ್ಸ್ ವಾಹನದಲ್ಲಿ ಹಿಂದಿನಿಂದ ಬಂದು ಯುವತಿಗೆ ಪ್ರೀತಿಸುವಂತೆ ಒತ್ತಾಯಿಸಿದ್ದು, ಯುವತಿ ನಿರಾಕರಿಸಿದಾಗ ಆತ ಆಕೆಯನ್ನು ವಾಹನದೊಳಗೆ ಎಳೆದುಕೊಂಡು ಹೋಗಿದ್ದಾನೆ,
ಸುಮಾರು ಐದಾರು ಕಿಲೋಮೀಟರ್ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಬಳಿಕ ಆರೋಪಿಯು ಯುವತಿಗೆ ನೀನು ನನ್ನ ಧರ್ಮಕ್ಕೆ ಮತಾಂತರವಾಗು ನಿನ್ನನ್ನು ಮದುವೆಯಾಗುತ್ತೇನೆ ಎಂದು ಒತ್ತಾಯಿಸಿ ಮೈ, ಕೈ ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಯುವತಿ ಬೈದ ಬಳಿಕ ಆಕೆಯನ್ನು ವಾಪಸ್ ಕರೆದುಕೊಂಡು ಬಂದಿದ್ದು ಆ ವೇಳೆಗೆ ಕೆಲವು ಸ್ಥಳೀಯರು ಅನುಮಾನಗೊಂಡು ವಾಹನವನ್ನು ರಕ್ಷಿಸಿ ಆಕೆಯ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ.
ಈ ಕುರಿತು ಅಪ್ರಾಪ್ತೆ ಯುವತಿ ಬಾಳೆಹೊನ್ನೂರು ಠಾಣೆಯಲ್ಲಿ ಬಲವಂತವಾಗಿ ಅತ್ಯಾಚಾರಕ್ಕೆ ಯತ್ನಿಸಿದ್ದರ ಬಗ್ಗೆ ದೂರು ದಾಖಲಿಸಿದ್ದು ಆರೋಪಿಯು ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದನು ಇದೀಗ ಆರೋಪಿಯನ್ನು ಪತ್ತೇಹಚ್ಚಿ ಬಂಧಿಸಿ ಎಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

























Discussion about this post