ಕಾಬೂಲ್: ಅಪ್ಘಾನಿನ ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಎಂದೇ ಬಿಂಭಿತವಾಗಿರುವ ಈತ ಅಫ್ಘಾನಿಯನ್ನರ ಸ್ವಾತಂತ್ರ್ಯಕ್ಕಾಗಿ ಸೆಣೆಸಬಲ್ಲ ಪ್ರತಿರೋಧದ ಶಕ್ತಿಯಾಗಿದ್ದಾನೆ. ’ನಾನು ನನ್ನ ದೇಶದ ಪರ ದೃಢವಾಗಿ ನಿಂತಿದ್ದೇನೆ, ಯುದ್ಧ ಇನ್ನೂ ಮುಗಿದಿಲ್ಲ’ ಎನ್ನುವಂತಹ ಘೋಷಣೆ ಹೊರಡಿಸಿರುವ ಸಲೇಹ್ ತಮ್ಮ ದೇಶನ್ನು ತಾಲಿಬಾನ್ ಮುಕ್ತಗೊಳಿಸಲು ರಣತಂತ್ರ ರೂಪಿಸುವುದರಲ್ಲಿ ತಲ್ಲೀನರಾಗಿದ್ದಾರೆ.
ಈಗಾಗಲೇ ಅವರು ಅಫ್ಘಾನ್ ದೇಶದಲ್ಲಿನ ಗುಪ್ತಚರ ಸಂಸ್ಥೆಯಲ್ಲಿ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಮುಖ್ಯಸ್ಥರಾಗಿದ್ದವರು. ಹಂತ ಹಂತವಾಗಿ ದೇಶಕ್ಕಾಗಿ, ದೇಶದಲ್ಲಿ ತಾಲಿಬಾನಿ ಶಕ್ತಿಗಳ ನಿರ್ನಾಮಕ್ಕಾಗಿ ಪಾಕ್ ಅನ್ನು ಸಹ ಎದುರು ಹಾಕಿಕೊಂಡಿದ್ದವರು.
ಪಂಜ್ ಶಿರ್ ಪ್ರಾಂತ್ಯದಲ್ಲಿ ನಡೆಯುತ್ತಿರುವ ತಾಲಿಬಾನ್ ವಿರೋಧಿ ಹೋರಾಟದ ನಾಯಕ ಅಹ್ಮದ್ ಷಾ ಸಲೇಹ್ ಅವರೊಂದಿಗೆ ಕೈಜೋಡಿಸಿದ್ದು ’ಸತ್ತರೂ ಶರಣಾಗುವುದಿಲ್ಲ’ ಎಂದು ಘೋಷಿಸಿದ್ದಾರೆ. ಇವರಿಬ್ಬರೂ ಅಫ್ಘಾನಿಯರ ಕಣ್ಣೀರು ಒರೆಸುವುದರಲ್ಲಿ ಕಾರ್ಯಸಾಧನೆ ನಡೆಸುತ್ತಿದ್ದು, ಬಹಿರಂಗವಾಗಿ ಪಾಕ್ ಪ್ರೇರಿತ ತಾಲಿಬಾನಿಗಳನ್ನು ಟೀಕಿಸುತ್ತಾ, ಬಲವಾಗಿ ಹಿಮ್ಮೆಟ್ಟಿಸುವತ್ತ ರಣತಂತ್ರ ರೂಪಿಸುತ್ತಿದ್ದಾರೆ.
ಅಮರುಲ್ಲಾ ಸಲೇಹ್ ಸೋದರರಿಗೆ ತಾಲಿಬಾನ್ ಗಳು ಚಿತ್ರಹಿಂಸೆ ನೀಡಿ ೧೯೯೬ರಲ್ಲಿ ಕೊಂದಿದ್ದರು, ತದನಂತರ ಸಲೇಹ್ ಮತ್ತು ತಾಲಿಬಾನ್ ನಡುವೆ ಸಂಬಂಧ ಮುರಿದಿತ್ತು.
Discussion about this post