ಕಾಬೂಲ್: ಆಫ್ಘಾನಿಸ್ತಾನದಲ್ಲಿ ಸುಮಾರು ೧೪ ಲಕ್ಷ ಜನರು ಹಸಿನಿವಿಂದ ನರಳುತ್ತಿದ್ದಾರೆ ಎಂಬ ಆತಂಕಕಾರಿ ಅಂಶವನ್ನು ಅಮೇರಿಕಾದ ಆಹಾರ ಸಂಸ್ಥೆ ತಿಳಿಸಿದೆ. ವಿಶ್ವ ಆಹಾರ ಕಾರ್ಯಕ್ರಮದ ನಿರ್ದೇಶಕಿ ಮೇರಿ ಹೆಲೆನ್ ಈ ವಿಚಾರ ದೃಢಪಡಿಸಿದ್ದಾರೆ.
ಕೋವಿಡ್ ನಿಂದಾಗಿ ಇಲ್ಲಿನ ಆರ್ಥಿಕ, ಸಾಮಾಜಿಕ ಸ್ಥಿತಿ ಬಿಗಡಾಯಿಸಿದೆ, ತಾಲಿಬಾನಿ ಸಂಘರ್ಷವೂ ಆಹಾರ ಕೊರತೆಗೆ ಕಾರಣವಾಗಿದೆ ಎಂದವರು ಮಾಹಿತಿ ನೀಡಿದ್ದಾರೆ. ‘ಶೇ. ೪೦ರಷ್ಟು ಆಹಾರಧಾನ್ಯ ನಾಶವಾಗಿದ್ದು, ಬರಗಾಲದದಿಂದ ಜಾನುವಾರುಗಳು ಅಸುನೀಗಿವೆ, ತಾಲಿಬಾನ್ ದಾಳಿಯ ಆತಂಕದಿಂದ ಜನರ ಸ್ಥಳಾಂತರ ನಡೆದಿದೆ, ಚಳಿಗಾಲ ಶುರುವಾಗಲಿದ್ದು, ಆಹಾರಕ್ಕಾಗಿ ಓಟ ನಡೆಸುವಂತಾಗುವುದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಮೇರಿಕಾದ ಆಹಾರ ಸಂಸ್ಥೆ ತಿಂಗಳಿಗೆ ನಾಲ್ಕು ಮಿಲಿಯನ್ ಜನರಿಗೆ ಆಹಾರ ಪೂರೈಕೆ ಮಾಡುತ್ತಿದ್ದು, ಇನ್ನೂ ಒಂಬತ್ತು ಮಿಲಿಯನ್ ಜನರಿಗೆ ಆಹಾರ ಪೂರೈಕೆ ಅಗತ್ಯ ಇದೆ, ಕೆಲವರಿಗೆ ತಿಂಗಳ ಆಹಾರ ಶೇಖರಣೆ ಅಗತ್ಯ ಇದ್ದು, ಹಲವು ಸವಾಲುಗಳಿವೆ, ಇದರಿಂದ ದೇಣಿಗೆ ನೀಡಿ ಎಂದು ಕೋರಿದ್ದಾರೆ.
ಈ ಹಿಂದೆಯೇ ಅಫ್ಘಾನಿಸ್ತಾನದ ರೆಡ್ ಕ್ರೆಸೆಂಟ್ ಸೊಸೈಟಿ ಹಂಗಾಮಿ ಅಧ್ಯಕ್ಷ ಡಾ. ನೀಲಾಬ್ ಮೊಬರೆಜ್ ಅಲ್ಲಿನ ನೀರಿನ ಸಮಸ್ಯೆ, ಆರ್ಥಿಕ ಸಮಸ್ಯೆ, ಆಹಾರ ಸಮಸ್ಯೆಗಳ ಆತಂಕಗಳ ಬಗ್ಗೆ ಏಪ್ರಿಲ್ ನಲ್ಲೇ ಹೇಳಿದ್ದರು. ‘ಬೆಳೆ ನಾಶದಿಂದ ಸ್ಥಳೀಯ ಮಾರುಕಟ್ಡೆಗಳ ಸ್ಥಿತಿ ಗಂಭೀರವಾಗಿದ್ದು, ಜನರ ಸಾಮಾನ್ಯ ಆದಾಯದ ಮಟ್ಟ ಇಳಿಕೆ ಕಂಡಿದೆ’ ಎಂದಿದ್ದರು.
ಭಾರತೀಯ ವಾಯು ಸೇನೆಯ ವಿಮಾನದಲ್ಲಿ ಏರ್ ಲಿಫ್ಟ್ ಆಗಿ ಉಳ್ಳಾಲಕ್ಕೆ ಸೇಫ್ ಆಗಿ ಬಂದು ಸೇರಿದ ಮೆಲ್ವಿನ್ ಸಹ ಆಹಾರ ಸಮಸ್ಯೆ ಹೆಚ್ಚಾಗುವುದು ಎಂದು ಹೇಳಿದ್ದರು.
Discussion about this post