ಕಾಬೂಲ್: ಅಫ್ಘನ್ ದೇಶದಲ್ಲಿ ಉನ್ನತ ಹುದ್ದೆಯಲ್ಲಿರುವ ಮಹಿಳೆಯರಿಗೂ ಈಗ ಪ್ರಾಣ ಭೀತ ಉಂಟಾಗಿದೆ. ಉಗ್ರನ್ನು ಜೈಲುಪಾಲು ಮಾಡಿದ್ದ ಐಸೀಸ್ ಮೊದಲಾದ ಸಂಘಟನೆಗಳ ಆರೋಪಿಗಳೀಗ ಜಡ್ಜ್ ಗಳಿಗೆ ಗುಂಡು ಹೊಡೆಯಲು ಹುಡುಕಿಕೊಂಡು ಹೋಗುತ್ತಿದ್ದಾರಂತೆ.
ಬಹುತೇಕ ನ್ಯಾಯಾದೀಶೆಯರು ಅಡಗಿಕೊಂಡಿದ್ದು, ಕೆಲವರು ಈಗಾಗಲೇ ದೇಶ ಬಿಟ್ಟು ಯುರೋಪ್ ಮೊದಲಾದ ದೇಶಗಳಿಗೆ ತೆರಳಿದ್ದಾರೆ. ಅಫ್ಘನ್ ದಲ್ಲಿ ೨೫೦ರಷ್ಟು ಮಹಿಳಾ ನ್ಯಾಯಾದೀಶರು ಇದ್ದರು, ಜೈಲಿನಲ್ಲಿದ್ದ ಉಗ್ರರೆಲ್ಲಾ ಈಗ ಹೊರಗೆ ಬಂದಿರೋ ಕಾರಣ ಶಿಕ್ಷೆ ನೀಡಿದವರಿಗೆ ಜೀವ ಭಯ ಕಾಡಿದೆ.
೪-೫ ತಾಲೀಬಾನ್ ಉಗ್ರರು ನನ್ನನ್ನು ಹುಡುಕಿಕೊಂಡು ಮನೆಗೆ ಬಂದಿದ್ದರು, ಅವರೆಲ್ಲಾ ನಾನೇ ಜೈಲಿಗೆ ಕಳಿಸಿದ್ದ ಅಪರಾಧಿಗಳಾಗಿದ್ದರು. ಅಷ್ಟೊತ್ತಿಗಾಗಲೇ ನಾನು ತಪ್ಪಿಸಿಕೊಂಡು ಬಂದಿದ್ದೆ ಎಂದು ಓರ್ವ ಮಹಿಳಾ ಜಡ್ಜ್ ರಾಯಟರ್ಸ್ ಗೆ ಅಭಿಪ್ರಾಯ ತಿಳಿಸಿದ್ದಾಳೆ. ಆಕೆ ಯುರೋಪ್ ದೇಶಕ್ಕೆ ತೆರಳಿದ್ದಳು.
ಕಳೆದ ಜನವರಿಯಲ್ಲಿ ಇಬ್ಬರು ಸುಪ್ರೀಂಕೋರ್ಟ್ ಮಹಿಳಾ ಜಡ್ಜ್ ಗಳಿಗೆ ಗುಂಡಿಕ್ಕಿ ಕೊಲ್ಲಲಾಯಿತು. ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹೂರಿಯಾ ಮೊಸಾದಿಕ್ ಎಂಬಾಕೆ ಹೇಳುವ ಪ್ರಕಾರ ಅಫ್ಘನ್ ನಲ್ಲಿ ಮಹಿಳಾ ಪೊಲೀಸರು, ಮಹಿಳಾ ಹೋರಾಟಗಾರ್ತಿಯರು, ಮಹಿಳಾ ವಕೀಲರು ಜೀವ ಬೆದರಿಕೆ ಎದುರಿಸುತ್ತಿದ್ದಾರೆ.
Discussion about this post