ಕಾಬೂಲ್: ಅಫ್ಘಾನಿಸ್ಥಾನದಲ್ಲಿರುವ ಉಕ್ರೇನ್ ಜನರನ್ನು ಸ್ಥಳಾಂತರಿಸಲು ಆಗಮಿಸಿದ್ದ ಉಕ್ರೇನ್ ವಿಮಾನವನ್ನು ಉಗ್ರರು ಅಪಹರಿಸಿದ್ದಾರೆ ಎಂದು ಉಕ್ರೇನ್ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಮಾಹಿತಿ ನೀಡಿದ್ದಾರೆ.
ಅಪಹರಣಕಾರರು ಬಂದೂಕುಧಾರಿಗಳಾಗಿದ್ದು, ಉಕ್ರೇನ್ ಜನರನ್ನು ಏರ್ ಲಿಫ್ಟ್ ಮಾಡುವ ಬದಲು ಕೆಲವು ಅಪರಿಚಿತ ಜನರೊಂದಿಗೆ ವಿಮಾನವನ್ನು ಹೈಜಾಕ್ ಮಾಡಿ ಇರಾನ್ ಕಡೆಗೆ ಹಾರಟ ನಡೆಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ ವಿಮಾನಕ್ಕೆ ಏನಾಗಿದೆ? ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ? ಕಾಬೂಲ್ ನಲ್ಲಿನ ಉಕ್ರೇನ್ ಜನರನ್ನು ಮರಳಿ ಕರೆತರುವ ವ್ಯವಸ್ಥೆ ಏನಾಗಿದೆ? ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ.
ಭಾನುವಾರ 31 ಉಕ್ರೇನಿಯನ್ನರು ಸೇರಿದಂತೆ 83 ಜನರೊಂದಿಗೆ ಮಿಲಿಟರಿ ಸಾರಿಗೆ ವಿಮಾನವು ಅಫ್ಘಾನಿಸ್ತಾನದಿಂದ ಉಕ್ರೇನ್ ರಾಜಧಾನಿ ಕೀವ್ಗೆ ಬಂದಿತು. 12 ಉಕ್ರೇನಿಯನ್ ಸೇನಾ ಸಿಬ್ಬಂದಿ ಮನೆಗೆ ಮರಳಿದ್ದಾರೆ ಎಂದು ಅಧ್ಯಕ್ಷೀಯ ಕಚೇರಿ ವರದಿ ಮಾಡಿದೆ.
ಸುಮಾರು 100 ಉಕ್ರೇನಿಯನ್ನರು ಇನ್ನೂ ಅಫ್ಘಾನಿಸ್ತಾನದಲ್ಲಿ ಸ್ಥಳಾಂತರಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಎಂದು ಕಚೇರಿಯು ತಿಳಿಸಿದೆ.ಇನ್ನೂ ಅಲ್ಲಿ ಉಳಿದ ಭಾರತೀಯರ ರಕ್ಷಣೆ, ಏರ್ ಲಿಫ್ಟ್ ಕುರಿತು ಮಾಹಿತಿಗಾಗಿ ಕಾದು ನೋಡಬೇಕಿದೆ.
Discussion about this post