ಕಾಬೂಲ್: ಅಫ್ಘಾನಿಸ್ತಾನದಲ್ಲಿರುವ ಕುಂಡುಜ್ ಎಂಬ ನಗರದ ಮಸೀದಿಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ನೂರು ಜನರು ಸಾವನ್ನಪ್ಪಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
“ಇಲ್ಲಿಯವರೆಗೆ ನಮ್ಮ ಆಸ್ಪತ್ರೆಯಲ್ಲಿ 35 ಮೃತ ದೇಹಗಳು ಮತ್ತು 50 ಕ್ಕೂ ಹೆಚ್ಚು ಗಾಯಗೊಂಡ ಜನರನ್ನು ನಾವು ಸ್ವೀಕರಿಸಿದ್ದೇವೆ” ಎಂದು ಹೆಸರು ಹೇಳಲು ಬಯಸದ ಕುಂಡುಜ್ ಸೆಂಟ್ರಲ್ ಆಸ್ಪತ್ರೆ ಖಚಿತಪಡಿಸಿದೆ.
ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ನಡೆಸುತ್ತಿರುವ ಇನ್ನೊಂದು ಆಸ್ಪತ್ರೆ ಕನಿಷ್ಠ 15 ಜನರ ಮೃತದೇಹಗಳನ್ನು ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರದಲ್ಲಿ ನಡೆಸುವ ಸಾಮೂಹಿಕ ಪ್ರಾರ್ಥನೆಯ ಸಮಯದಲ್ಲಿ ಶಿಯಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಿರುವುದಾಗಿ ಎಎಫ್ಪಿ (AFP) ವರದಿ ಮಾಡಿದೆ
ಕುಂಡುಜ್ನಲ್ಲಿ ನಮ್ಮ ಶಿಯಾ ದೇಶವಾಸಿಗಳ ಮಸೀದಿಯಲ್ಲಿ ಸ್ಫೋಟ ಸಂಭವಿಸಿದಾಗ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ತಾಲಿಬಾನಿನ ಜಬಿಹುಲ್ಲಾ ಮುಜಾಹಿದ್ ಖಚಿತಪಡಿಸಿದ್ದಾನೆ.
ದಾಳಿಯ ಹೊಣೆಗಾರಿಕೆಯನ್ನು ತಕ್ಷಣವೇ ಹೇಳಿಕೊಳ್ಳಲಾಗಿಲ್ಲ, ಆದರೆ ತಾಲಿಬಾನ್ನ ಕಡು ಪ್ರತಿಸ್ಪರ್ಧಿಗಳಾದ ಇಸ್ಲಾಮಿಕ್ ಸ್ಟೇಟ್ ಗುಂಪು ಇದೇ ರೀತಿಯ ದಾಳಿಯ ಹೊಣೆ ಹೊತ್ತುಕೊಂಡಿತ್ತು.
ಸ್ಥಳೀಯ ಉದ್ಯಮಿ ಜಲ್ಮೈ ಅಲೋಕ್ಜಾಯ್ ಪ್ರತ್ಯಕ್ಷದರ್ಶಿಯಾಗಿ ತಾನು ೪೦ ಕ್ಕೂ ಹೆಚ್ಚು ಮೃತ ದೇಹಗಳನ್ನು ನೋಡಿದ್ದೇನೆ ಎಂದು ಎಎಫ್ಪಿ (AAP)ಗೆ ತಿಳಿಸಿದ್ದಾರೆ.
ನೂರಾರು ಜನರು ಆಸ್ಪತ್ರೆಯ ಮುಖ್ಯ ದ್ವಾರದಲ್ಲಿ ಜಮಾಯಿಸಿ ತಮ್ಮ ಸಂಬಂಧಿಕರಿಗಾಗಿ ಅಳುತ್ತಿದ್ದಾರೆ ಆದರೆ ಶಸ್ತ್ರಸಜ್ಜಿತ ತಾಲಿಬಾನ್ ವ್ಯಕ್ತಿಗಳು ಇನ್ನೊಂದು ಸ್ಫೋಟವನ್ನು ನಡೆದರೆ ಎಂಬ ಭಯದಿಂದ ಜನರನ್ನು ಅಲ್ಲಿಂದ ಚದುರಿಸಲು ಯತ್ನಿಸುತ್ತಿದ್ದಾರೆ ಎಂದು ಸಹ ವರದಿಯಾಗಿದೆ.
ಕುಂಡುಜ್ ತಜಕಿಸ್ತಾನದೊಂದಿಗಿನ ಆರ್ಥಿಕ ಮತ್ತು ವ್ಯಾಪಾರ ವಿನಿಮಯದ ಪ್ರಮುಖ ಸಾರಿಗೆ ಕೇಂದ್ರವಾಗಿದ್ದು, ಇಲ್ಲಿ ಅತಿಯಾದ ಜನಸಂದಣೆಯಿಂದ ಕೂಡಿರುವ ಸ್ಥಳದಲ್ಲೇ ಉದ್ದೇಶಪೂರ್ವಕವಾಗಿ ಬಾಂಬ್ ಸ್ಫೋಟ ನಡೆಸಲಾಗಿದೆ. ಸದರಿ ಸ್ಫೋಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರು ದಿಕ್ಕಾಪಾಲಾಗಿದ್ದಾರೆ.
Discussion about this post