ಮೇಫೀಲ್ಡ್: ಅಮೆರಿಕದ ಐದು ರಾಜ್ಯಗಳಲ್ಲಿ ಸುಂಟರಗಾಳಿಯ ಪ್ರಕೋಪದಿಂದ 80ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದು ಚರಿತ್ರೆಯಲ್ಲೇ ಅತಿದೊಡ್ಡ ಬಿರುಗಾಳಿ. ಈ ದುರಂತದಲ್ಲಿ ಎಷ್ಟು ಜನರು ಪ್ರಾಣಕಳೆದು ಕೊಂಡಿದ್ದಾರೆ. ಆಸ್ತಿ ಹಾನಿ ಯಾವ ಪ್ರಮಾಣದಲ್ಲಿ ಆಗಿದೆ ಎಂಬುದು ಇನ್ನೂ ಎಣಿಕೆ ಸಿಕ್ಕಿಲ್ಲ ಎಂದು ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಫೆಡರಲ್ ಸರ್ಕಾರದಿಂದ ಅಗತ್ಯ ಎಲ್ಲ ನೆರವನ್ನು ನೀಡಲಾಗುವುದು ಎಂದು ಬೈಡೆನ್ ತಿಳಿಸಿದ್ದಾರೆ.
ಸುಂಟರಗಾಳಿಯು ಕೆಂಟುಕಿ ರಾಜ್ಯದಲ್ಲಿ ಮೊದಲು ಕಾಣಿಸಿಕೊಂಡಿತು. ನಂತರ ಬೇರೆ ರಾಜ್ಯಗಳಿಗೆ ವಿಸ್ತರಿಸಿತು. ಕೆಂಟುಕಿ ಒಂದರಲ್ಲೇ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿರುಗಾಳಿಯ ಹೊಡೆತಕ್ಕೆ ಮನೆಗಳ, ಕೈಗಾರಿಕೆಗಳ ಸೂರು ಹಾರಿಹೋಗಿವೆ. ಮೆಣದಬತ್ತಿ ತಯಾರಿಕಾ ಕಾರ್ಖಾನೆಯೊಂದರ ಛಾವಣಿ ಮುರಿದುಬಿದ್ದ ಕಾರಣ ಹೆಚ್ಚಿನ ಸಾವು ಸಂಭವಿಸಿದೆ. ಈ ಘಟಕದಲ್ಲಿ ನೂರಕ್ಕೂ ಹೆಚ್ಚು ಕಾರ್ಮಿಕರು ಇದ್ದರು. 40 ಮಂದಿಯನ್ನು ರಕ್ಷಿಸಲಾಗಿದೆ ಎಂದು ಕೆಂಟುಕಿ ಗವರ್ನರ್ ಆಂಡಿ ಬೆಷಿಯರ್ ಹೇಳಿದ್ದಾರೆ. ಕೆಂಟುಕಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಇಲಿನಾಯ್ಸ್ನಲ್ಲಿ ಅಮೆಜಾನ್ ಗೋದಾಮಿನಲ್ಲಿ ಕನಿಷ್ಠ 13 ಮಂದಿ ಮರಣಿಸಿದ್ದಾರೆ. ಕ್ರಿಸ್ಮಸ್ ಸಮೀಪಿಸುತ್ತಿರುವ ಕಾರಣ ಗೋದಾಮಿನಲ್ಲಿ ರಾತ್ರಿ ಪಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಕರ್ತವ್ಯ ನಿರ್ವಹಿಸುತ್ತಿದ್ದರು.
ಕೆಂಟುಕಿ ರಾಜ್ಯದ ಸಣ್ಣ ಪಟ್ಟಣವಾದ ಮೇಫೀಲ್ಟ್ನಲ್ಲಿ ಸುಂಟರಗಾಳಿಯ ತಂದಿರುವ ಅನಾಹುತದಿಂದ 10 ಸಾವಿರಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಈ ಪಟ್ಟಣವನ್ನು ಪೊಲೀಸರು “ಗ್ರೌಂಡ್ ಝಿರೋ” ಎಂದು ಗುರುತಿಸಿದ್ದಾರೆ. ಐತಿಹಾಸಿಕ ಮನೆಗಳು, ಕಟ್ಟಡಗಳಿಗೆ ಹಾನಿಯಾಗಿದೆ. ಟೆನ್ನೆಸ್ಸೀಯಲ್ಲಿ ನಾಲ್ವರು ಬಿರುಗಾಳಿಯ ಕಾರಣ ಸಾವನ್ನಪ್ಪಿದ್ದಾರೆ. ಅರ್ಕಾನ್ಸಾಸ್, ಮಿಸ್ಸೌರಿಗಳಲ್ಲಿ ತಲಾ ಒಬ್ಬರ ಸಾವು ಸಂಭವಿಸಿದೆ. ಹಾಪ್ಕಿನ್ಸ್ ಕೌಂಟಿಯಲ್ಲಿ ಒಂದು ರೈಲು ಹಳಿ ತಪ್ಪಿದೆ.
More Than 80 Dead As Tornadoes Flatten Entire Blocks In 5 US States
ಇದನ್ನು ಓದಿ: Jawad Cyclone: ಜವಾದ್ ಚಂಡಮಾರುತ ದುರ್ಬಲ, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಮಳೆ
ಇದನ್ನೂ ಓದಿ: ನೇಪಾಳದಲ್ಲಿ ತೀವ್ರ ಹಿಮಕುಸಿತದ ಭಯಾನಕ ದೃಶ್ಯ ವೈರಲ್
Discussion about this post