ನವದೆಹಲಿ: ಅಯೋಧ್ಯೆ ಶ್ರೀರಾಮನ ದೇಗುಲ ನಿರ್ಮಾಣಕ್ಕೆ ವಿಶ್ವದ ೭ ಖಂಡಗಳ ೧೧೫ ದೇಶಗಳಿಂದ ತರಿಸಲಾದ ನೀರನ್ನು ಬಳಸಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಕಟಿಸಿದ್ದಾರೆ.
ಈ ಮಹಾತ್ಕಾರ್ಯವನ್ನು ವಸು ದೈವ ಕುಟುಂಬ ಪರಿಕಲ್ಪನೆ ರೀತೀ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಈಗಾಗಲೇ ವಿವಿಧ ದೇಶಗಳ ನೀರು ತಲುಪಿದ್ದು, ಆಯಾ ರಾಯಭಾರಿಗಳ ಸಮ್ಮುಖದಲ್ಲಿ ರಾಜನಾಥ್ ಸಿಂಗ್ ತಮ್ಮ ನಿವಾಸದಲ್ಲಿ ಸ್ವೀಕಾರ ಮಾಡಿದರು.
ಇನ್ನೂ ೭೭ ದೇಶಗಳ ನೀರು ಬಂದು ಸದ್ಯದಲ್ಲೇ ತಲುಪಲಿದ್ದು, ರಾಮ ಲಲ್ಲಾನ ಅಭಿಷೇಕಕ್ಕೂ ಇದೇ ನೀರು ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅಯೋಧ್ಯೆ ಯಲ್ಲಿ ಸಪ್ತ ಸಾಗರ ಎಂಬ ಪುರಾಣದ ಸ್ಥಳ ಇದ್ದು, ಅಲ್ಲಿಗೆ ಸಪ್ತಸಾಗರಗಳ ನೀರ ತರಲಾಗಿತ್ತು ಎಂಬ ಉಲ್ಲೇಖವಿದೆ ಎಂದು ಇದೇ ವೇಳೆ ತಿಳಿಸಿದರು.
ಇದೇ ಸಂಧರ್ಭದಲ್ಲಿ ನೈಜಿರಿಯಾ, ಡೆನ್ಮಾರ್ಕ್, ಫಿಜಿ ಸೇರಿದಂತೆ ವಿವಿಧ ರಾಷ್ಟ್ರಗಳ ರಾಜತಾಂತ್ರಿಕ ಅಧಿಕಾರಿಗಳು, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮೊದಲಾದವರು ಉಪಸ್ಥಿತರಿದ್ದರು.

























Discussion about this post